ಮಾಡಾಳ್‌ಗೆ ಹಾಲಿನ ಅಭಿಷೇಕ: ಅಂಧಾಭಿಮಾನ ಮೆರೆದ ಬಿಜೆಪಿ ಕಾರ್ಯಕರ್ತರು- ವಿಡಿಯೊ ನೋಡಿ

ದಾವಣಗೆರೆ ಜಿಲ್ಲೆಯ ಸೂಳೆಕೆರೆ ಗ್ರಾಮದ ದೇವಸ್ಥಾನದ ಎದುರು ಬಿಜೆಪಿ ಬೆಂಬಲಿಗರೆಲ್ಲ ಸೇರಿ ಶಾಸಕ ಮಾಡಾಳ್‌ವಿರೂಪಾಕ್ಷಪ್ಪನವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ದಾವಣಗೆರೆ, ಮಾರ್ಚ್‌, 08: ಗುತ್ತಿಗೆದಾರರಿಂದ ಲಂಚ ಪಡೆಯುವಾಗ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಪ್ರಶಾಂತ್ ಮಾಡಾಳ್‌ನನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರು ನಾಪತ್ತೆಯಾಗಿದ್ದಾರೆ ಎನ್ನುವ ಸುದ್ದಿಯೂ ಹರಡಿತ್ತು. ನಂತರ ಅವರು ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ ಪ್ರತ್ಯಕ್ಷರಾಗಿದ್ದಾರೆ ಎನ್ನುವ ಮಾಹಿತಿಯೂ ಕೂಡ ಲಭ್ಯವಾಗಿತ್ತು. ಬಳಿಕ ಇಂದು ಬೆಂಬಲಿಗರೆಲ್ಲ ಸೇರಿ ಸೂಳೆಕೆರೆಯಲ್ಲಿ ವಿರೂಪಾಕ್ಷಪ್ಪನವರ ಭಾವಚಿತ್ರಕ್ಕೆ ಹಾಲೆರೆದು ಅಂದಾಭಿಮಾನವನ್ನು ಮೆರೆದಿದ್ದಾರೆ.

ದಾವಣಗೆರೆ ಜಿಲ್ಲೆಯ ಸೂಳೆಕೆರೆ ಗ್ರಾಮದ ದೇವಸ್ಥಾನದ ಎದುರು ಬಿಜೆಪಿ ಬೆಂಬಲಿಗರೆಲ್ಲ ಸೇರಿ ಶಾಸಕ ಮಾಡಾಳ್‌ವಿರೂಪಾಕ್ಷಪ್ಪನವರ ಭಾವಚಿತ್ರಕ್ಕೆ ಹಾಲು ಎರೆದಿದ್ದಾರೆ. ಹೀಗೆ ಮೌಢ್ಯತೆ ಮೆರೆಯುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಮಾಜನದಲ್ಲಿ ಏನಾದರೂ ಸಾಧನೆ ಮಾಡಿ ಗುರುತಿಸಿಕೊಂಡವರು ಕೂಡ ಕ್ಷೀರಾಭಿಷೇಕ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ.

BJP MLA Madal Virupakshappas supporters pour milk on his portrait in front of a temple at Sulekere

ಶಾಸಕರ ಫೋಟೋಗೆ ಕ್ಷೀರಾಭಿಷೇಕ

ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ರಾಜರಾಕಣಿಗಳ ಬೆಂಬಲಿಗರೇ ಹೀಗೆ ವಿಕೃತಿ ಮೆರೆದರೆ ಹೇಗೆ ಅನ್ನುವ ಪ್ರಶ್ನೆಗಳು ಎದ್ದಿವೆ. ಹೀಗೆ ಹುಚ್ಚಾಟಗಳನ್ನು ಆಡುವ ಬದಲಿಗೆ ಜನರಿಗೆ ಉತ್ತಮ ಸಂದೇಶ ಕೊಡಿ ಮೊದಲು ಅನ್ನುವ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಫೋಟೋಗೆ ಕ್ಷೀರಾಭಿಷೇಕ ಮಾಡುವ ಸಾಧನೆ ಏನು ಮಾಡಿದ್ದಾರೆ ಶಾಸಕರು ಎನ್ನುವ ಪ್ರಶ್ನೆಗಳು ಕೂಡ ಎದ್ದಿವೆ.

ವಿರೂಪಾಕ್ಷಪ್ಪಗೆ ಭರ್ಜರಿ ಸ್ವಾಗತ

ಲೋಕಾಯುಕ್ತ ಪೊಲೀಸರು ಈ ಪ್ರಕರಣದಲ್ಲಿ ವಿರೂಪಾಕ್ಷಪ್ಪರನ್ನು ಮೊದಲ ಆರೋಪಿಯಾಗಿಸಿದ್ದರು. ಆ ಬಳಿಕ ನಾಪತ್ತೆಯಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ಗ್ರಾಮದ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಮನೆಗೆ ಬಂದಿದ್ದರು. ಗ್ರಾಮಕ್ಕೆ ಮಾಡಾಳ್ ವಿರೂಪಾಕ್ಷಪ್ಪ ಆಗಮಿಸುತ್ತಿದ್ದಂತೆಯೇ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡಿದ್ದರು.

BJP MLA Madal Virupakshappas supporters pour milk on his portrait in front of a temple at Sulekere

ಹಾಗೆಯೇ ಮಾಡಾಳ್ ವಿರೂಪಾಕ್ಷಪ್ಪ ಹುಲಿ ಎಂಬ ಜೈಕಾರವನ್ನೂ ಕೆಲವರು ಹಾಕಿದರು. ತೆರೆದ ವಾಹನದಲ್ಲಿ ಬಂದ ಮಾಡಾಳ್ ವಿರೂಪಾಕ್ಷಪ್ಪರನ್ನು ನೋಡುತ್ತಿದ್ದಂತೆಯೇ ಹಸ್ತಲಾಘವಕ್ಕೆ ಮುಗಿಬಿದ್ದರು. ಈ ವೇಳೆ ಒಬ್ಬರ ಮೇಲೊಬ್ಬರಂತೆ ಮುಗಿಬಿದ್ದು ಹೂವಿನ ಹಾರ ಹಾಕಿ ಹುಚ್ಚರಂತೆ ಅಂಧಾಭಿಮಾನವನ್ನು ಮೆರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+