ದಾವಣಗೆರೆ : ಕಾರ್ಪೊರೇಟರ್‌ ಬಂಧನ, ರಸ್ತೆಯಲ್ಲಿ ಮೆರವಣಿಗೆ

ದಾವಣಗೆರೆ, ಮೇ 13 : ಕಾಂಗ್ರೆಸ್ ಕಾರ್ಪೊರೇಟರ್‌ನನ್ನು ಬಂಧಿಸಿ ಪೊಲೀಸರು ರಸ್ತೆಯಲ್ಲಿ ಮೆರವಣಿಗೆ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಕಾರ್ಪೊರೇಟರ್‌ ವಿರುದ್ಧ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ದೂರು ನೀಡಿದ್ದರು.

ಕಾಂಗ್ರೆಸ್ ಕಾರ್ಪೊರೇಟರ್‌, ರೌಡಿ ಶೀಟರ್ ಶ್ರೀನಿವಾಸ್‌ನನ್ನು ದಾವಣಗೆರೆಯ ಕೆಟಿಜೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಲರ್ ಪಟ್ಟಿ ಹಿಡಿದು ಕೈ ಕಟ್ಟಿಹಾಕಿ ರಸ್ತೆಯಲ್ಲಿ ಮೆರವಣಿಗೆ ಮಾಡಿಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಆಗಿದ್ದೇನು? : ಶನಿವಾರ ಮತದಾನ ನಡೆಯುವಾಗ ಬೂತ್‌ ಬಳಿ ಶ್ರೀನಿವಾಸ್ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದ. ಈ ಕುರಿತು ಮಾಜಿ ಸಚಿವ ರವೀಂದ್ರನಾಥ್ ಪೊಲೀಸರಿಗೆ ದೂರು ನೀಡಿದ್ದರು.

Attack on BJP workers Congress corporator arrested

ಇಂದು ಕೆಟಿಜೆ ನಗರ ಠಾಣೆ ಪೊಲೀಸರು ಶ್ರೀನಿವಾಸ್ ಅವರನ್ನು ಬಂಧಿಸಿ, ನಡು ರಸ್ತೆಯಲ್ಲಿ ಮೆರವಣಿಗೆ ಮಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಜನರು ಸಹ ಪೊಲೀಸರು ಕ್ರಮವನ್ನು ಸ್ವಾಗತಿಸಿದ್ದು, ಶ್ರೀನಿವಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೆರವಣಿಗೆ ಮಾಡಿಲ್ಲ : 'ಶ್ರೀನಿವಾಸ್ ಅವರನ್ನು ಮೆರವಣಿಗೆ ಮಾಡಿಲ್ಲ, ಬಂಧಿಸಿ ಕರೆದುಕೊಂಡು ಹೋಗಿದ್ದರು. ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+