Arecanut price: ಕ್ವಿಂಟಾಲ್‌ ಅಡಿಕೆ ಧಾರಣೆ ಕೊನೆಗೂ ₹60,000 ಸನಿಹದತ್ತ: ಆಗಸ್ಟ್ 5ರಂದು ದರ ಭರ್ಜರಿ ಏರಿಕೆ

Arecanut Price: ರಾಜ್ಯದಲ್ಲಿ ಬೆಳ್ಳಿ, ಬಂಗಾರದಂತೆ ಅಡಿಕೆ ದರದಲ್ಲಿಯೂ ಏರಿಳಿತ ಆಗುತ್ತಿರುತ್ತಲಿರುತ್ತದೆ. ಅದರಲ್ಲೂ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿದಂತೆ ಹಲವೆಡೆಯೂ ಅಡಿಕೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಹಾಗಾದ್ರೆ ಇದೀಗ ಜಿಲ್ಲೆಯಲ್ಲಿ ಇಂದು (ಆಗಸ್ಟ್‌ 5) ಅಡಿಕೆ ಧಾರಣೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಆಗಿದೆ. ಜಿಲ್ಲೆಯಲ್ಲಿ ಇಂದಿನ ಕ್ವಿಂಟಾಲ್‌ ಅಡಿಕೆ ಗರಿಷ್ಠ ದರ 58,700 ರೂಪಾಯಿ ಆಗಿದೆ. ಇಳಿಕೆಯತ್ತ ಸಾಗಿದ್ದ ದರ ಮತ್ತೆ ಇದೀಗ ತುಸು ಏರಿಕೆಯಾಗಿದೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮನೆ ಮಾಡಿದೆ.

Arecanut Price increased in Davanagere market on August 5

ಇದೀಗ ಚನ್ನಗಿರಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ದರ 58,700 ರೂಪಾಯಿ, ಕನಿಷ್ಠ ದರ 52,779 ರೂಪಾಯಿ ಇದ್ದು, ಸರಾಸರಿ ಬೆಲೆ 56,755 ರೂಪಾಯಿ ಇದೆ. ಕಳೆದ ಕೆಲ ದಿನಗಳ ಹಿಂದೆ 55,000 ರೂಪಾಯಿಗಿಂತ ಕೆಳಗಿಳಿದಿತ್ತು. ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ವಾಣಿಜ್ಯ ಬೆಳೆಯಾಗಿದ್ದು, ಇಲ್ಲಿ ದರ ಮತ್ತ ಏರಿಕೆಯತ್ತ ಹೊರಟಿದೆ.

ಈ ಭಾಗದಲ್ಲಿ ಇದೇ ವರ್ಷದ ಅಂದರೆ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಿದ್ದ ಕ್ವಿಂಟಾಲ್‌ ಅಡಿಕೆ ದರ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು. ಆಗಿನಿಂದಲೂ ಸತತ ಏರಿಕೆಯಾಗುತ್ತಾ ಬಂದಿತ್ತು. ಏಪ್ರಿಲ್‌ ಅಂತ್ಯದಲ್ಲಿ 60,000 ರೂಪಾಯಿ ಗಡಿ ದಾಟಿತ್ತು.

ಆದರೆ, ಮೇ ಆರಂಭದಿಂದಲೂ ಜೂನ್‌ ಕೆಲವು ವಾರಗಳವರೆಗೆ ಇಳಿಕೆಯಾಗಿ ಮತ್ತೆ ಏರಿಕೆಯತ್ತ ಸಾಗಿತ್ತು. ಜೂನ್‌ ತಿಂಗಳ ಮಧ್ಯದಿಂದ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆಯಾಗುತ್ತಲೇ ಬಂದಿತ್ತು. ಆದರೆ, ಇದೀಗ ಭರ್ಜರಿ ಏರಿಕೆಯತ್ತ ಸಾಗಿದೆ. 2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. ಕಳೆದ ವರ್ಷ 2024ರ ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿಗೆ ಬಂದು ತಲುಪಿತ್ತು.

2025ರ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆಯತ್ತ ಸಾಗುತ್ತಾ ಬಂದಿತ್ತು. ಬಳಿಕ ಏರಿಕೆ ಆಗುತ್ತಲಿದ್ದು, ಮುಂದಿನ ದಿನಗಳಲ್ಲಿ ಕ್ವಿಂಟಾಲ್‌ ಅಡಿಕೆ ದರ ಮತ್ತೆ 60,000 ರೂಪಾಯಿ ದಾಟುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ಧಾರಣೆಯಲ್ಲಿ ಸುಧಾರಣೆ ಆಗಿದ್ದು, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮನೆ ಮಾಡಿದಂತಾಗಿದೆ.

ಕಳೆದ ಬಾರಿ ಮುಂಗಾರು ಮಳೆ ಆರ್ಭಟದಿಂದ ಉತ್ತಮ ಫಸಲು ಏನೋ ಬಂದಿತ್ತು. ಇನ್ನೂ ಈ ಬಾರಿ ಅವಧಿಗೂ ಮುನ್ನ ಮುಂಗಾರು ಎಂಟ್ರಿ ಕೊಟ್ಟಿದೆ. ಈ ಹಿನ್ನೆಲೆ ಉತ್ತಮ ಫಸಲಿನ ಜೊತೆ, ಮತ್ತೆ ಬೆಲೆ ಏರಿಕೆಯಾಗುವ ಭರವಸೆಯಲ್ಲಿ ಅಡಿಕೆ ಬೆಳೆಗಾರರಿದ್ದಾರೆ. ಮತ್ತೊಂದೆಡೆ ಮಳೆಗಾಲದಲ್ಲಿ ಅಡಿಕೆ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬ ಆತಂಕವೂ ಸಹ ಬೆಳೆಗಾರರನ್ನ ಕಾಡತೊಡಗಿದೆ.

ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿದ್ದು, ಪರಿಣಾಮ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿ ಆಗಿವೆ. ಮುಂದಿನ ದಿನಗಳಲ್ಲಿ ಭಾರೀ ಮಳೆ ಮುಂದುವರೆಯುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಹೀಗೆ ಏನಾದ್ರೂ ಆದರೆ ರೈತರಿಗೆ ಒಂದೆಡೆ ಸಂತಸ ಆದ್ರೆ, ಮತ್ತೊಂದೆಡೆ ಅಡಿಕೆಯನ್ನು ಹೇಗೆ ಒಣಗಿಸುವುದು ಎಂಬ ಚಿಂತೆ ಕಾಡತೊಡಗಿದೆ. ಹಾಗೆಯೇ ಅಡಿಕೆ ದರ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗುವ ಭರವಸೆಯಲ್ಲೂ ರೈತರು ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+