Arecanut price: ಕ್ವಿಂಟಾಲ್ ಅಡಿಕೆ ಧಾರಣೆ ₹66,000 ಗಡಿ ಸಮೀಪದತ್ತ: ಇಲ್ಲಿದೆ ಅಕ್ಟೋಬರ್ 9ರ ದರಪಟ್ಟಿ
Arecanut Price: ರಾಜ್ಯದಲ್ಲಿ ಅಡಿಕೆ ಧಾರಣೆ ಕಳೆದ ಎರಡ್ಮೂರು ದಿನಗಳಿಂದ ಭಾರೀ ಏರಿಕೆಯಾಗುತ್ತಲಿದೆ. ಇದೀಗ ಕ್ವಿಂಟಾಲ್ ದರ 66,000 ರೂಪಾಯಿ ಗಡಿ ಸಮೀಪದವರೆಗೂ ಬಂದಿದೆ. ಕಳೆದ ಸೆಪ್ಟೆಂಬರ್‌ಗೆ ಹೋಲಿಕೆ ಮಾಡಿದ್ರೆ, ಅಕ್ಟೋಬರ್ ಆರಂಭದಿಂದಲೂ ಭಾರೀ ಏರಿಕೆಯಾಗುತ್ತಾ ಬಂದಿದೆ. ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಹೆಚ್ಚಾಗಿದೆ.
ರಾಜ್ಯದಲ್ಲಿ ಅಡಿಕೆ ಧಾರಣೆ ಕಳೆದ ಕೆಲ ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿತ್ತು. ಆದರೆ ಇದೀಗ ಅಕ್ಟೋಬರ್ 2ನೇ ವಾರದಲ್ಲಿ ಭರ್ಜರಿ ಏರಿಕೆಯಾಗಿದೆ. ಅದರಲ್ಲೂ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಅಡಿಕೆನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಾಗಾದ್ರೆ ಇಂದು (ಅಕ್ಟೋಬರ್ 9) ದಾವಣಗೆರೆ ಮಾರುಕಟ್ಟೆಯಲ್ಲಿ ದರ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ತಿಳಿಯಿರಿ.

ಅಡಿಕೆ ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಜಿಲ್ಲೆಯಲ್ಲಿ ಇಂದು (ಅಕ್ಟೋಬರ್ 9) ಕ್ವಿಂಟಾಲ್ ರಾಶಿ ಅಡಿಕೆ ಗರಿಷ್ಠ ದರ 65,599 ರೂಪಾಯಿಗೆ ಏರಿಕೆ ಆಗಿದೆ. ಕಳೆದ ವಾರಪೂರ್ತಿ ಸ್ಥಿರತೆ ಕಾಯ್ದುಕೊಂಡಿದ್ದ ಇದೀಗ ಭರ್ಜರಿ ಏರಿಕೆ ಆಗಿದ್ದು, ಬೆಳೆಗಾರರ ಭರವಸೆ ನಿಜ ಆದಂತಾಗಿದೆ. ಆದರೆ, ಇದೇ ಸಮಯದಲ್ಲಿ ಇಳುವರಿ ಕುಸಿತಗೊಂಡಿದೆ.
ಪ್ರಸ್ತುತ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ದರ 65,599 ರೂಪಾಯಿ, ಕನಿಷ್ಠ ದರ 61,312 ರೂಪಾಯಿ ಇದ್ದು, ಸರಾಸರಿ ಬೆಲೆ 64,416 ರೂಪಾಯಿ ಇದೆ. ಕಳೆದ ಕೆಲ ತಿಂಗಳುಗಳ ಹಿಂದೆ 55,000 ರೂಪಾಯಿಗಿಂತ ಕೆಳಗಿಳಿದಿತ್ತು. ಬಳಿಕ ಏರಿಕೆಯಾಗಿ ಬಳಿಕ ಇಳಿಕೆಯತ್ತ ಹೊರಟಿದ್ದ ದರ ಇದೀಗ ಮತ್ತೆ ಭರ್ಜರಿ ಏರುಮುಖದತ್ತ ಓಟ ಮುಂದುವರೆಸಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ ಇದೇ ವರ್ಷದ ಅಂದರೆ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಡೆ ಇದ್ದ ಕ್ವಿಂಟಾಲ್ ಅಡಿಕೆ ಧಾರಣೆ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು. ಆಗಿನಿಂದಲೂ ಸತತ ಏರಿಕೆ ಆಗುತ್ತಲಿತ್ತು. ಕೊನೆಗೂ ಏಪ್ರಿಲ್ ಅಂತ್ಯದಲ್ಲಿ 60,000 ರೂಪಾಯಿ ಗಡಿ ದಾಟಿತ್ತು. ಇದೀಗ ಅಕ್ಟೋಬರ್ ವಾರದಲ್ಲಿ 66,000 ರೂಪಾಯಿ ಗಡಿ ಸಮೀಪಿಸಿದೆ.
ಮೇ ತಿಂಗಳ ಆರಂಭದಿಂದಲೂ ಜೂನ್ ತಿಂಗಳ ಕೆಲವು ವಾರಗಳವರೆಗೆ ಇಳಿಕೆಯಾಗಿ ಮತ್ತೆ ಏರಿಕೆಯತ್ತ ಸಾಗಿತ್ತು. ಬಳಿಕ ಜೂನ್ ತಿಂಗಳ ಮಧ್ಯದಿಂದಲೂ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆ ಆಗುತ್ತಲೇ ಬಂದಿತ್ತು. ಇನ್ನು 2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. ಕಳೆದ ವರ್ಷ 2024ರ ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿಗೆ ತಲುಪಿತ್ತು.
2025ರ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆಯತ್ತ ಸಾಗುತ್ತಾ ಬಂದಿತ್ತು. ಜುಲೈಗೆ ಹೋಲಿಸಿದರೆ, ಆಗಸ್ಟ್‌ನಲ್ಲಿ ಧಾರಣೆಯಲ್ಲಿ ತುಸು ಸುಧಾರಣೆ ಆಗಿತ್ತು. ಆದರೆ, ಕೊನೆಯಲ್ಲಿ ತುಸು ಇಳಿಕೆಯಾಗಿ ಮತ್ತೆ ಸೆಪ್ಟೆಂಬರ್ ಅಂತ್ಯದಲ್ಲಿ ತುಸು ಏರಿಕೆಯತ್ತ ಹೊರಟ್ಟಿತ್ತು. ಬಳಿಕ ಅಕ್ಟೋಬರ್ ಎರಡನೇ ವಾರದವರೆಗೂ ಸತತವಾಗಿ ಏರಿಕೆಯಾಗುತ್ತಾ ಬಂದಿದೆ. ಮತ್ತೊಂದೆಡೆ, ಈ ಬಾರಿ ಹೆಚ್ಚು ಮಳೆಯಾದ ಕಾರಣ ಅಡಿಕೆ ಇಳುವರಿ ತುಸು ಕುಸಿತ ಕಂಡಿದೆ. ಮತ್ತೊಂದೆಡೆ, ಕೊಯ್ಲು ಬರದಿಂದ ಸಾಗಿದೆ.
ಈ ಬಾರಿ ರಾಜ್ಯಕ್ಕೆ ವಾಡಿಕೆಯಂತೆ ಜೂನ್ ಆರಂಭದಲ್ಲೇ ಮುಂಗಾರು ಎಂಟ್ರಿ ಕೊಟ್ಟಿದ್ದು, ಬಹುತೇಕ ಜಿಲ್ಲೆಗಳಲ್ಲಿ ಅಬ್ಬರದ ಮಳೆಯಾಗಿದೆ. ಈ ಹಿನ್ನೆಲೆ ಫಸಲು ಸಹ ಅಷ್ಟೇ ಚೆನ್ನಾಗಿ ಬಂದಿದೆ. ಇದೀಗ ಸದ್ಯ ಧಾರಣೆ ಏರುಗತಿಯಲ್ಲಿಯಲ್ಲಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯಾಗುವ ಭರವಸೆ ಅಡಿಕೆ ಬೆಳೆಗಾರರದ್ದಾಗಿದೆ.












Click it and Unblock the Notifications