ದಾವಣಗೆರೆ ಜೈಲಿನ 40 ಅಡಿ ಗೋಡೆ ಜಿಗಿದು ಆರೋಪಿ ಎಸ್ಕೇಪ್, ಮುಂದೇನಾಯ್ತು ಗೊತ್ತಾ?
ದಾವಣಗೆರೆ, ಆಗಸ್ಟ್ 28: ದಾವಣಗೆರೆಯ ಉಪ ಕಾರಾಗೃಹದಲ್ಲಿ ದಾಖಲಾಗಿದ್ದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಪ್ರಕರಣದ ಆರೋಪಿಯೊಬ್ಬ ಜೈಲಿನಿಂದ ತಪ್ಪಿಸಿಕೊಂಡ ಎರಡು ದಿನಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ದಾವಣಗೆರೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ವಸಂತ (24) ಎಂಬಾತ ಸಬ್ ಜೈಲಿನ 40 ಅಡಿ ಗೋಡೆಯನ್ನು ಹತ್ತಿ ಇನ್ನೊಂದು ಬದಿಗೆ ಹಾರಿದ್ದಾನೆ ಎಂದು ವರದಿಗಳು ತಿಳಿಸಿವೆ. ಶಂಕಿತನ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ.

ಪಾದಚಾರಿ ಮಾರ್ಗದ ಸಂಪರ್ಕಕ್ಕೆ ಬಂದ ಕೂಡಲೇ ವಸಂತ್ ಕಾಲಿಗೆ ಪೆಟ್ಟಾಗಿದೆ. ಬಳಿಕ ಕುಂಟುತ್ತಾ ಸಾಗಿದ್ದು ಕಂಡುಬಂತು. ನಂತರ ಪರಾರಿಯಾಗಿರುವ ಬಗ್ಗೆ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೋಮವಾರ ಖಚಿತ ಮಾಹಿತಿ ಮೇರೆಗೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ಶಂಕಿತ ಆರೋಪಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಗ್ರಾಮದ ಸಂಬಂಧಿಕರ ಮನೆಗೆ ತೆರಳಿ ತಲೆಮರೆಸಿಕೊಂಡಿದ್ದನು.












Click it and Unblock the Notifications