ವಿಡಿಯೋ ವೈರಲ್; ಬೀದಿಗೆ ಬಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ವಸೂಲಿ ವಿಚಾರ
ಚಿತ್ರದುರ್ಗ, ಏಪ್ರಿಲ್ 07: ಅರಣ್ಯ ಅಧಿಕಾರಿಗಳಿಬ್ಬರು ವಸೂಲಿ ವಿಚಾರಕ್ಕೆ ಸಾರ್ವಜನಿಕರ ಎದುರಲ್ಲೇ ಜಗಳ ಮಾಡಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
Recommended Video
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಅರಣ್ಯಾಧಿಕಾರಿಗಳಾದ ಆರ್ ಎಫ್ ಒ ರಾಮಮೂರ್ತಿ ವಿರುದ್ಧ ಎಆರ್ ಎಫ್ ಒ ದುರ್ಗಪ್ಪ ವಸೂಲಿ ವಿಚಾರಕ್ಕೆ ತಿರುಗಿಬಿದ್ದಿದ್ದಾರೆ ಎನ್ನಲಾಗಿದೆ.
ಬಿಬಿಎಚ್ ಮೈನ್ಸ್ ಅದಿರು ಸಾಗಾಟದ ವಿಷಯಕ್ಕೆ ಈ ಇವ್ವರು ಅರಣ್ಯ ಅಧಿಕಾರಿಗಳ ನಡುವೆ ಕಿತ್ತಾಟವಾಗಿದೆ. ಮಾರ್ಚ್ 31ರಂದು ಸ್ಟಾಕ್ ಅದಿರು ಸಾಗಾಟ ನಿಲ್ಲಿಸುವ ವಿಚಾರವಾಗಿ ಇವರ ಮಧ್ಯದ ಜಗಳ ಕೈಕೈ ಮಿಲಾಯಿಸುವವರೆಗೂ ಹೋಗಿದೆ. ನಾನು ಹೇಳಿದಂತೆ ಕೇಳಲಿಲ್ಲವೆಂದು ಎಆರ್ ಎಫ್ ಒ ದುರ್ಗಪ್ಪಗೆ ಅವಾಚ್ಯವಾಗಿ ರಾಮಮೂರ್ತಿ ನಿಂದಿಸಿದ್ದಾರೆ.

ಅದಿರು ಸಾಗಾಟದ ವಿಚಾರವಾಗಿ ರಾಮಮೂರ್ತಿ ಲಕ್ಷ ಲಕ್ಷ ಹಣ ಪಡೆದಿದ್ದಾರೆ ಎಂದು ದುರ್ಗಪ್ಪ ಹಗರಣದ ಆರೋಪ ಮಾಡಿದ್ದು, ಈ ಹಿಂದೆ ಇದ್ದ ಅಧಿಕಾರಿಗಳು ಕೋಟಿ ಕೋಟಿ ಹಣ ತೆಗೆದುಕೊಂಡಿದ್ದಾರೆ, ಅದರಲ್ಲಿ ಯಾವ ಯಾವ ಅಧಿಕಾರಿಗಳು ಎಷ್ಟು ಹಣ ತಗೊಂಡಿದ್ದಾರೆ ಎಂದು ಅಧಿಕಾರಿಗಳ ಮಾನ ಹರಾಜು ಹಾಕಿದ್ದು, ನನ್ನ ಹತ್ತಿರ ಸಂಬಂಧ ಪಟ್ಟ ದಾಖಲಾತಿಗಳು ಇವೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಆಯ್ತು ಎಲ್ಲರೂ ಸಗಣಿ ತಿಂದಿದ್ದೇವೆ ಬಿಡು ಸಾಕು ಎಂದು ರಾಮಮೂರ್ತಿ ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.












Click it and Unblock the Notifications