ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೀಘ್ರವೇ 2 ಸಾವಿರ ಪೊಲೀಸರ ನೇಮಕಾತಿ: ಬೊಮ್ಮಾಯಿ

|
Google Oneindia Kannada News

ಚಿತ್ರದುರ್ಗ, ಡಿಸೆಂಬರ್ 11: ಒಂದು ಸಾವಿರ ಪಿಎಸ್ಐ ಸೇರಿದಂತೆ 2 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಮೂಲಸೌಕರ್ಯ ಒದಗಿಸಿ, ಮೇಲ್ದರ್ಜೆಗೇರಿಸಲಾಗುವುದು ಎಂದು ಎಂದು ತಿಳಿಸಿದರು. ರಾಜ್ಯದಲ್ಲಿ ಪೊಲೀಸ್ ಠಾಣೆಗಳು ಮೂಲ ಸೌಲಭ್ಯಗಳು ಇಲ್ಲದಿರುವುದು ಗಮನಕ್ಕೆ ಬಂದಿದೆ, ಏನೇನು ಸೌಲಭ್ಯ ನೀಡಬೇಕೆಂದು ವರದಿ ಸಿದ್ದಪಡಿಸಲಾಗಿದೆ ಎಂದರು.

NWKRTC ನೇಮಕಾತಿ, 2814 ಹುದ್ದೆಗಳಿಗೆ ಅರ್ಜಿ ಹಾಕಿNWKRTC ನೇಮಕಾತಿ, 2814 ಹುದ್ದೆಗಳಿಗೆ ಅರ್ಜಿ ಹಾಕಿ

ಚಿತ್ರದುರ್ಗದ ಹೊರವಲಯದಲ್ಲಿ ಮಾತನಾಡಿದ ಅವರು, ಮುಂದಿನ ಬಜೆಟ್ ನಲ್ಲಿ ಮೂಲಸೌಲಭ್ಯಕ್ಕೆ ಅನುದಾನ ಒದಗಿಸಿಕೊಡಲಾಗುವುದು ಎಂದು ಸುದ್ದಿಗಾರರಿಗೆ ಉತ್ತರಿಸಿದರು.

Very Soon 2000 Police Recruits: Bommai

ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಕೆಲವು ವೇಳೆ ಕೆಲಸವಿಲ್ಲದೇ ಇರುತ್ತಾರೆ, ಅಂತಹ ಸಮಯದಲ್ಲಿ ಅವರಿಂದ ಯಾವ ರೀತಿಯ ಸೇವೆ ಪಡೆಯಬಹುದೆಂದು ಪರಿಶೀಲನೆ ಮಾಡಲಾಗುವುದು, ಕಾರಾಗೃಹಗಳ ಸುಧಾರಣೆಗೆ ಒತ್ತು ಕೊಡಲಾಗುವುದು ಎಂದು ತಿಳಿಸಿದರು.

ರಾಜಧಾನಿ ಬೆಂಗಳೂರು ಮತ್ತು ಪ್ರಮುಖ ಮಹಾನಗರಗಳಲ್ಲಿ ಮಾತ್ರ ಏಫ್ಎಸ್ಎಲ್ ಪ್ರಯೋಗಾಲಯ ಇರುವುದರಿಂದ ವರದಿ ಬರುವುದು ವಿಳಂಬವಾಗಿ, ತನಿಖೆ ಮಾಡುವುದು ತಡವಾಗುತ್ತಿದೆ. ಇನ್ಮುಂದೆ ಜಿಲ್ಲಾ ಕೇಂದ್ರದಲ್ಲಿಯೇ ಅತ್ಯಾಧುನಿಕ ಪ್ರಯೋಗಾಲಯ ನಿರ್ಮಿಸಿ ತುರ್ತಾಗಿ ವರದಿ ಸಿಗುವಂತೆ ಮಾಡಲಾಗುದು ಎಂದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ 18 ಸಾವಿರ ಉದ್ಯೋಗ ಕಡಿತಬ್ಯಾಂಕಿಂಗ್ ಕ್ಷೇತ್ರದಲ್ಲಿ 18 ಸಾವಿರ ಉದ್ಯೋಗ ಕಡಿತ

ಮಹಿಳೆಯರ ಸುರಕ್ಷತೆಗಾಗಿ ಅನೇಕ ಕ್ರಮ ಕೈಗೊಳ್ಳಲಾಗುತ್ತಿದ್ದು, ರಾತ್ರಿ ಹೊತ್ತು ಗಸ್ತು ಹೆಚ್ಚಿಸಲಾಗಿದೆ. ಸಹಾಯವಾಣಿ 112 ಕ್ಕೆ ಕರೆ ಮಾಡಿದರೆ, ಸಂಕಷ್ಟದಲ್ಲಿರುವ ಮಹಿಳೆಯರ ನೆರವಿಗೆ 5 ರಿಂದ 7 ನಿಮಿಷದೊಳಗಾಗಿ ಸುರಕ್ಷತಾ ವ್ಯೆವಸ್ಥೆ ಕಲ್ಪಿಸಲಾಗುವುದು ಎಂದರು.

English summary
Home Minister Basavaraja Bommai Said 2 Thousand Police Personnel, Including One Thousand PSI Would Be Recruited. He Noted That The Police Stations In The State Are Lacking Basic Facilities And The Report Has Been Prepared.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X