ಟಿಪ್ಪು ಜಯಂತಿ: ಚಿತ್ರದುರ್ಗ, ಉಡುಪಿಯಲ್ಲಿ 3 ದಿನ ನಿಷೇಧಾಜ್ಞೆ

Posted By:
Subscribe to Oneindia Kannada

ಚಿತ್ರದುರ್ಗ, ನವೆಂಬರ್ 07 : ಒನಕೆ ಓಬವ್ವನ ಜಿಲ್ಲೆ ಚಿತ್ರದುರ್ಗದಲ್ಲಿಯೂ ನವೆಂಬರ್ 10ರಂದು ನಡೆಯಲಿರುವ ಟಿಪ್ಪು ಜಯಂತಿಗೆ ವಿರೋಧ ಧ್ವನಿಗಳು ತೀರ್ವವಾಗಿರುವ ಹಿನ್ನೆಲಯಲ್ಲಿ ಅಲ್ಲಿಯೂ ನವೆಂಬರ್ 8 ರಿಂದ ಜಾರಿಗೆ ಬರುವಂತೆ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಟಿಪ್ಪು ಜಯಂತಿ ಆಚರಣೆಗೆ ತಡೆ ನೀಡಲು ಹೈಕೋರ್ಟ್ ನಕಾರ

ನವೆಂಬರ್ 7 ರ ಮಂಗಳವಾರ ಬಿ.ಜೆ.ಪಿ ಆರ್.ಎಸ್.ಎಸ್ ಆಯೋಜಿಸಿದ್ದ ಸಭೆಗೂ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಸಭೆ ನಡೆಯಬೇಕಿದ್ದ ಜೆ.ಜೆ.ಸಮುದಾಯವನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

Tippu Jayanti Section 144 Clamped In Chitradurga

ಜಿಲ್ಲೆಯ ಮಾದಾರ ಚೆನ್ನಯ್ಯ ಗುರುಪೀಠ, , ಜೆ.ಎಂ.ಐ.ಟಿ ವೃತ್ತ, ಹೊಸಪೇಟೆ ರಸ್ತೆ, ಚಳ್ಳಕೆರೆ ಟೋಲ್ ರಸ್ತೆ, ತುರುವನೂರು ಪ್ರವೇಶ ದ್ವಾರ, ಜಿಲ್ಲಾಧಿಕಾರಿಗಳ ಕಚೇರಿ, ಒನಕೆ ಓಬವ್ವ ವೃತ್ತ, ಎಂ.ಜಿ ವೃತ್ತ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಅನುಮಾನಸ್ಪದ ವ್ಯಕ್ತಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಹಾಗೂ ವಾಹನ ತಪಾಸಣೆಯನ್ನೂ ಮಾಡುತ್ತಿದ್ದಾರೆ ಇದು ನಗರವಾಸಿಗಳಲ್ಲಿ ಆತಂಕ ಹುಟ್ಟಿಸಿದೆ.

ಟಿಪ್ಪು ಜಯಂತಿ ವಿರೋಧಿಸಿ ಒನಕೆ ಹಿಡಿದು ವಿನೂತನ ಪ್ರತಿಭಟನೆ

'ನಮ್ಮ ಊರಿನಲ್ಲಿ ಏನು ಆಗಲ್ಲ ಆದ್ರೂ ಯಾಕೆ ಇಷ್ಟೊಂದು ಪೊಲೀಸ್ನೋರು' ಎಂದು ದುರ್ಗದ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಉಡುಪಿಯಲ್ಲೂ ನಿಷೇಧಾಜ್ಞೆ
ಉಡುಪಿಯಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಕ್ಕೆ ಬಿಜೆಪಿ ಹಾಗೂ ಸಂಘ ಪರಿವಾರಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಕಾರ್ಯಕ್ರಮದ ಸಮಯ ಅವಘಡ ಸಂಭವಿಸದಂತೆ ಉಡುಪಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಘೋಷಿಸಲಾಗಿದೆ.

ಟಿಪ್ಪು ಜಯಂತಿ ಆಚರಣೆ ವಿವಾದ : ಬೆಳಗಾವಿಯಲ್ಲಿ ಕಲ್ಲು ತೂರಾಟ

ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯಾದ್ಯಂತ ನವೆಂಬರ್ 8 ಬುಧವಾರ ಬೆಳಗ್ಗೆ 6 ಗಂಟೆಯಿಂದ ನವೆಂಬರ್ 11 ಶನಿವಾರ ಬೆಳಗ್ಗೆ 6 ಗಂಟೆಯವರೆಗೆ ಸೆಕ್ಷನ್ 144 ರಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ ಈಗಾಗಲೇ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕೆಲವು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಿದ್ದು ಅಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಆತಂಕ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಈಗಾಗಲೇ ಉಡುಪಿಗೆ ಸಿ.ಆರ್.ಪಿ.ಎಫ್ ತುಕಡಿಗಳನ್ನು ನಿಯೋಜನೆಗೊಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the wake of the opposition against Tipu Jayanti getting louder. D C of Chitradurga has clamped prohibitory orders Section 144 across Chitradurga district . Udipi District Administration Also orders 144 section Affecting from november 8 to novembre 11.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ