ಮೊಳಕಾಲ್ಮೂರು: ಶ್ರೀರಾಮುಲು ವಿರುದ್ಧ ಆಪ್ತರಿಂದಲೇ ಬಂಡಾಯ

Posted By:
Subscribe to Oneindia Kannada

ಮೊಳಕಾಲ್ಮೂರು, ಏಪ್ರಿಲ್ 09: ಕರ್ನಾಟಕ ವಿಧಾನಸಭೆ ಚುನಾವಣೆ 2018ಗಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) 73 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುತ್ತಿದ್ದಂತೆ

'ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ. ಕಾಲಕಾಲಕ್ಕೆ ತಕ್ಕಂತೆ ಬದಲಾವಣೆ ಅಗತ್ಯ' ಎಂಬ ಮಾತಿದೆ. ಸದ್ಯಕ್ಕೆ ಬಡವರ, ಶ್ರಮಿಕರ ಮುಖಂಡ ಬಿ. ಶ್ರೀರಾಮುಲುಗೆ ತಮ್ಮ ಆಪ್ತರಿಂದಲೇ ಬಂಡಾಯ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ.

ಮೊಳಕಾಲ್ಮೂರು ಕ್ಷೇತ್ರದಿಂದ ಸಂಸದ ಶ್ರೀರಾಮುಲು ಅವರಿಗೆ ಟಿಕೆಟ್​ ಘೋಷಿಸಲಾಗಿದೆ. ಈ ಕ್ಷೇತ್ರ ಹಾಲಿ ಶಾಸಕ ಬಿಎಸ್ ಆರ್ ಕಾಂಗ್ರೆಸ್ ನ ಎಸ್ ತಿಪ್ಪೇಸ್ವಾಮಿ ಮುನಿಸಿಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಟಿಕೆಟ್​ ತಪ್ಪಿದ ಸುದ್ದಿ ಹಬ್ಬುತ್ತಿದ್ದಂತೆ ತಿಪ್ಪೇಸಾಮಿ ಅವರ ಸ್ವಗ್ರಾಮ ನೇರಲಗುಂಟೆಯಲ್ಲಿ ಬೆಂಬಲಿಗರು ಸಭೆ ನಡೆಸಿದ್ದಾರೆ. ಸೋಮವಾರದ ಅಂತ್ಯಕ್ಕೆ ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಯಿದೆ.

ಕ್ಷೇತ್ರ ಪರಿಚಯ : ರೇಷ್ಮೆ ಸೀರೆಗಳ ತವರೂರು ಮೊಳಕಾಲ್ಮೂರು

ಬಿಎಸ್ ಆರ್ ಪಕ್ಷ ಬಿಜೆಪಿಯಲ್ಲಿ ವಿಲೀನವಾಗಿದ್ದರಿಂದಾಗಿ, ಅವರೀಗ ಬಿಜೆಪಿ ಬೆಂಬಲಿತ ಶಾಸಕರಷ್ಟೆ. ಹಾಗಾಗಿ, ಸರಿಯಾದ ಅನುದಾನವಿಲ್ಲದೆ ಕ್ಷೇತ್ರಕ್ಕೆ ಏನನ್ನೂ ಮಾಡಿಲ್ಲ ಎನ್ನಲಾಗುತ್ತಿದೆ. ಇದು ಅರ್ಥವಾಗದ ಜನತೆ ಇವರ ಬಗ್ಗೆ ಕೊಂಚ ಅಸಮಾಧಾನ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಎಸ್. ತಿಪ್ಪೇಸ್ವಾಮಿ ಟಿಕೆಟ್ ಕೈತಪ್ಪಿದ್ದೇಕೆ?

ಎಸ್. ತಿಪ್ಪೇಸ್ವಾಮಿ ಟಿಕೆಟ್ ಕೈತಪ್ಪಿದ್ದೇಕೆ?

ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೂ ಬಿಎಸ್ಆರ್ ಕಾಂಗ್ರಸ್ ನ ಎಸ್. ತಿಪ್ಪೇಸ್ವಾಮಿ ನಂತರ ಬಿಜೆಪಿ ಸೇರಬೇಕಾಯಿತು. ಈ ಬಾರಿ ಟಿಕೆಟ್ ಪಡೆಯುವುದೇ ಅನುಮಾನ ಎಂಬ ಸುದ್ದಿ ಅನೇಕ ತಿಂಗಳುಗಳಿಂದ ಹರಿದಾಡುತ್ತಲೇ ಇತ್ತು.

ಬಳ್ಳಾರಿ ಮಾಜಿ ಸಂಸದೆ ಜೆ. ಶಾಂತ ಬಿಜೆಪಿಯಿಂದ ಸ್ಪರ್ಧೆ ಸಾಧ್ಯತೆ ಬಗ್ಗೆ ಕೇಳಿ ಬಂದಿತ್ತು. ನಾಯಕ ಜನಾಂಗದ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಬಳ್ಳಾರಿಯಿಂದ ಬಿ. ಶ್ರೀರಾಮುಲುಗೆ ಇಲ್ಲಿಂದ ಸ್ಪರ್ಧಿಸಿ ಎಂದು ಸೂಚಿಸಿದೆ.

2013 ಮತಗಳಿಕೆ. ಫಲಿತಾಂಶ

2013 ಮತಗಳಿಕೆ. ಫಲಿತಾಂಶ

ಬಿಎಸ್ಆರ್ ಕಾಂಗ್ರೆಸ್ : ಎಸ್ ತಿಪ್ಪೇಸ್ವಾಮಿ 76827
ಕಾಂಗ್ರೆಸ್ ಎನ್.ವೈ ಗೋಪಾಲಕೃಷ್ಣ 69658
ಜೆಡಿಎಸ್ ನ ಡಾ. ಒಬಣ್ಣ ಪೂಜಾರ್ 4226 ಗಳಿಸಿ ಮೂರನೇ ಸ್ಥಾನ ಗಳಿಸಿದರೆ, ದಾಸರಿ ಕೀರ್ತಿ ಕುಮಾರ್ ಬಿಜೆಪಿಯಿಂದ ಸ್ಪರ್ಧಿಸಿ ಗಳಿಸಿದ್ದು 3221 ಮತಗಳು, ಕೆಜೆಪಿಯಿಂದ ಸ್ಪರ್ಧಿಸಿದ್ದ ದ್ರಾಕ್ಷಾಯಣ್ಣ 1826 ಮತಗಳನ್ನು ಗಳಿಸಿದ್ದರು. ಶೇ 79.41ರಷ್ಟು ಮತದಾನವಾಗಿತ್ತು. ಶೇ 4.36ರಷ್ಟು ಮತ ಗಳಿಸಿ ಎಸ್ ತಿಪ್ಪೇಸ್ವಾಮಿ ಗೆಲುವು ಸಾಧಿಸಿದ್ದರು.

ಟಿಕೆಟ್ ಆಕಾಂಕ್ಷಿಗಳು

ಟಿಕೆಟ್ ಆಕಾಂಕ್ಷಿಗಳು

ಕಾಂಗ್ರೆಸ್ : ಎನ್.ವೈ ಗೋಪಾಲಕೃಷ್ಣ(ಕಳೆದ ಬಾರಿ ಶೇ 4.63 (7163 ಮತಗಳು) ಅಂತರದಿಂದ ಸೋಲು ಕಂಡಿದ್ದರು, ನಟ ಶಶಿಕುಮಾರ್ ಸಂಸದರಾಗಿ ಅನುಭವ ಹೊಂದಿದ್ದು, ಅಸೆಂಬ್ಲಿಗೆ ಪ್ರವೇಶ ಬಯಸಿದ್ದಾರೆ, ಯೋಗೀಶ್ ಬಾಬು, ಕರಣ್ ಬೋರಯ್ಯ
ಬಿಜೆಪಿ : ಎಸ್, ತಿಪ್ಪೇಸ್ವಾಮಿ, ಸಂಸದರಾಗಿ ಅನುಭವವುಳ್ಳ ಜೆ.ಶಾಂತಾ ಅವರಿಗೆ ಬಳ್ಳಾರಿ ಬದಲಿಗೆ ಇಲ್ಲಿ ಟಿಕೆಟ್ ಸಿಗುವ ಬಗ್ಗೆ ಚರ್ಚೆ ನಡೆದಿತ್ತು, ಪ್ರಭಾಕರ ಮ್ಯಾಸನಾಯಕ
ಜೆಡಿಎಸ್ : ಪಟೇಲ್ ಜಿ.ಎಂ ತಿಪ್ಪೇಸ್ವಾಮಿ

ಈ ಬಾರಿ ಕೆಜೆಪಿ, ಬಿಎಸ್ ಆರ್ ಕಾಂಗ್ರೆಸ್ ಬೆಂಬಲಿತರು ಒಟ್ಟಾಗಿ ಬಿಜೆಪಿ ಬೆಂಬಲಿಸಿದರೆ ಮಾತ್ರ ಗೆಲುವು ಇಲ್ಲಿ ಸಾಧ್ಯ, ಇಲ್ಲದಿದ್ದರೆ ಕಾಂಗ್ರೆಸ್ಸಿಗೆ ಲಾಭವೋ ಲಾಭ.

ಬಿಜೆಪಿ ಬೆಂಬಲಿತ ಶಾಸಕ ತಿಪ್ಪೇಸ್ವಾಮಿ

ಬಿಜೆಪಿ ಬೆಂಬಲಿತ ಶಾಸಕ ತಿಪ್ಪೇಸ್ವಾಮಿ

ಬಿಎಸ್ ಆರ್ ಪಕ್ಷ ಬಿಜೆಪಿಯಲ್ಲಿ ವಿಲೀನವಾಗಿದ್ದರಿಂದಾಗಿ, ಅವರೀಗ ಬಿಜೆಪಿ ಬೆಂಬಲಿತ ಶಾಸಕರಷ್ಟೆ. ಹಾಗಾಗಿ, ಸರಿಯಾದ ಅನುದಾನವಿಲ್ಲದೆ ಕ್ಷೇತ್ರಕ್ಕೆ ಏನನ್ನೂ ಮಾಡಿಲ್ಲ ಎನ್ನಲಾಗುತ್ತಿದೆ. ಇದು ಅರ್ಥವಾಗದ ಜನತೆ ಇವರ ಬಗ್ಗೆ ಕೊಂಚ ಅಸಮಾಧಾನ ಹೊಂದಿದ್ದಾರೆ ಎನ್ನಲಾಗುತ್ತಿದೆ. ಬಿಎಸ್ ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ, ಶ್ರೀರಾಮುಲು ಬೆನ್ನ ಹಿಂದಿದ್ದ ತಿಪ್ಪೇಸ್ವಾಮಿ ಅವರು ಇಂದು ಶ್ರೀರಾಮುಲು ಅವರ ವಿರುದ್ಧವೇ ನಿಂತಿದ್ದಾರೆ, ಪಕ್ಷೇತರರಾಗಿ ಸ್ಪರ್ಧಿಸುತ್ತಾರೋ, ಅಥವಾ ರಾಮುಲು ಪರ ಪ್ರಚಾರಕ್ಕಿಳಿಯುತ್ತಾರೋ ಕಾದು ನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ticket Politics : After the announcement of first list of candidates for Assembly elections 2018, crisis in BJP has increased in Molakalmur constituency, Chitradurga. MLA Tippeswamy is dejected after party announced ticket to his leader B Sriramulu.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ