ಚಿತ್ರದುರ್ಗದಲ್ಲಿ ಅಪಘಾತ; ತುಂಬು ಗರ್ಭಿಣಿ ಸೇರಿ ಮೂವರ ಸಾವು
ಚಿತ್ರದುರ್ಗ, ಜೂನ್ 11: ಮೈನ್ಸ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಮೂರು ಜನ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದ ಬಳಿ ಘಟನೆ ನಡೆದಿದೆ.
ಸೆಕೆ ಎಂದು ರೈಲಿನಿಂದ ಇಳಿದಿದ್ದ ನಾಲ್ವರ ಮೇಲೆ ಹರಿದ ರಾಜಧಾನಿ ಎಕ್ಸ್‌ಪ್ರೆಸ್
ಕುಟುಂಬವೊಂದು ಚಿಕಿತ್ಸೆಗೆ ಹೋಗಿ, ಮರಳಿ ಬರುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಒಂಬತ್ತು ತಿಂಗಳ ಗರ್ಭಿಣಿ ದೀಪಾ (21), ಮಹಾತೇಂಶ್ (28), ಮಹಾತೇಂಶ್ ಅವರ 6 ವರ್ಷದ ಅಣ್ಣನ ಮಗಳು ಸ್ಥಳದಲ್ಲೇ ಸಾವನ್ನಪ್ಪಿದವರು. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನ ಇಬ್ಭಾಗವಾಗಿದೆ.
ಇದೇ ಸ್ಥಳದಲ್ಲಿ ಸಾಕಷ್ಟು ಬಾರಿ ಅಪಘಾತಗಳು ನಡೆದಿದ್ದರೂ ಮೈನ್ಸ್ ಕಂಪನಿ ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯರು ಮೈನ್ಸ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಚಿತ್ರದುರ್ಗ ಪೋಲಿಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.