ಚಿತ್ರದುರ್ಗದಲ್ಲಿ ಫೆ.26 ರಂದು ಉದ್ಯೋಗ ಮೇಳ ನೀವು ಭಾಗವಹಿಸಿ
ಚಿತ್ರದುರ್ಗ, ಫೆಬ್ರವರಿ 23: ಚಿತ್ರದುರ್ಗದಲ್ಲಿ ಇದೇ ತಿಂಗಳ 26 ರಂದು ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಚಿತ್ರದುರ್ಗ ಇವರ ಸಹಯೋಗದಲ್ಲಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ಆಸಕ್ತ ಯುವಕ/ಯುವತಿಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಫೆಬ್ರವರಿ 26 ರ ಬುಧವಾರ ಬೆಳಗ್ಗೆ 10 ಗಂಟೆಗೆ ಉದ್ಯೋಗ ಮೇಳಕ್ಕೆ ಚಾಲನೆ ದೊರೆಯಲಿದ್ದು, ಸಂಜೆ 4 ಗಂಟೆಗೆ ಮುಗಿಯಲಿದೆ.
ಈ ಉದ್ಯೋಗ ಮೇಳದಲ್ಲಿ ವಿವಿಧ ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿವೆ. ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕ ಪಾವತಿ ಇರುವುದಿಲ್ಲ.

ವಿದ್ಯಾರ್ಹತೆ ಏಳನೇ ತರಗತಿ, ಎಸ್.ಎಸ್.ಎಲ್.ಸಿ. ಪಿಯುಸಿ, ಐಟಿಐ, ಡಿಪ್ಲೊಮಾ ಹಾಗೂ ಯಾವುದೇ ಪದವಿ ಪಡೆದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.
ಅರ್ಹ ಅಭ್ಯರ್ಥಿಗಳು ಇದೆ ತಿಂಗಳ 26 ರಂದು ಬೆಳಿಗ್ಗೆ 10.00 ಗಂಟೆಗೆ 5 ಬಯೋಡಾಟಾ ದೊಂದಿಗೆ ಹಾಜರಾಗಬಹುದು.
ಸ್ಥಳ: ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠ. ದಾವಣಗೆರೆ ರಸ್ತೆ ರಾಷ್ಟ್ರೀಯ ಹೆದ್ದಾರಿ-4 ಎಂ.ಕೆ ಹಟ್ಟಿ ಚಿತ್ರದುರ್ಗ. ಹೆಚ್ಚಿನ ಮಾಹಿತಿಗಾಗಿ 9740929148, 7334880208, 9901125700 ಈ ನಂಬರ್ ಗೆ ಕರೆ ಮಾಡಿ.
ವಿಶೇಷ ಸೂಚನೆ: ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದಲ್ಲಿ ವಿದ್ಯಾವಂತ ಯುವಕ-ಯುವತಿಯರು ಮತ್ತು ಮಹಿಳೆಯರಿಗಾಗಿ ಟೈಲರಿಂಗ್, ಹ್ಯಾಂಡ್ ಎಂಬ್ರಾಯಿಡಿರಿ, ಹಾರ್ಡ್ವೇರ್ ಅಂಡ್ ನೆಟ್ವರ್ಕಿಂಗ್, ಡಿ.ಟಿ.ಹೆಚ್, ಸೆಟ್ ಆಫ್ ಬಾಕ್ಸ್ ಇನ್ಸ್ ಸ್ಟಾಲೇಷನ್ . ಉಚಿತವಾಗಿ 45 ದಿನಗಳಿಂದ 70 ದಿನಗಳವರೆಗೆ ಕೌಶಲ್ಯ ತರಬೇತಿಗಳನ್ನು ನೀಡಿ ಉದ್ಯೋಗವಕಾಶಗಳನ್ನು ಕಲ್ಪಿಸಲಾಗುವುದು.












Click it and Unblock the Notifications