ಜೆಡಿಎಸ್ ರಾಷ್ಟ್ರಾಧ್ಯಕ್ಷ ಸ್ಥಾನ ಬಿಟ್ಟುಕೊಡಲು ಸಿದ್ಧ ಅಂದ್ರು ಗೌಡ್ರು
ಚಿತ್ರದುರ್ಗ, ಫೆ.2 : 'ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬಿಟ್ಟು ಕೊಡಲು ತಾವು ಸಿದ್ಧವಿದ್ದು, ಯಾರಾದರೂ ಆಕಾಂಕ್ಷಿಗಳಿದ್ದರೆ ಅಥವಾ ನೊಂದಿರುವ ಶಾಸಕರಿದ್ದರೆ ನೇರವಾಗಿ ಬಂದು ನನ್ನೊಂದಿಗೆ ಚರ್ಚೆ ನಡೆಸಲಿ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಹ್ವಾನ ನೀಡಿದ್ದಾರೆ.
ಸೋಮವಾರ ಚಿತ್ರದುರ್ಗದಲ್ಲಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, 'ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಲು ತಾವು ಸಿದ್ಧವಿರುವುದಾಗಿ' ಘೋಷಿಸಿದರು. [ಡಿಕೆಶಿ ಜೊತೆ ಜೆಡಿಎಸ್ ನಾಯಕರ ಚರ್ಚೆ]

'ಪಕ್ಷದಲ್ಲಿ ಯಾರಾದರೂ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿದ್ದರೆ ಅಥವಾ ನೊಂದಿರುವ ಶಾಸಕರಿದ್ದರೆ ನೇರವಾಗಿ ಬಂದು ನನ್ನೊಂದಿಗೆ ಚರ್ಚೆ ಮಾಡಲಿ. ನಾನು ಅಧ್ಯಕ್ಷ ಸ್ಥಾನ ತೊರೆಯುತ್ತೆನೆ. ಬೇಸರಗೊಂಡ ಶಾಸಕರು ದೆಹಲಿಗೆ ಹೋಗುವುದು ಬೇಡ' ಎಂದು ಹೇಳಿದರು. [ದೇವೇಗೌಡರ ಮೊಮ್ಮಗ ಪ್ರಜ್ವಲ್ ಜೆಡಿಎಸ್ ಸೇರ್ಪಡೆ]
ಚುನಾವಣೆಗೆ ಸ್ಪರ್ಧಿಸುವುದಿಲ್ಲ : ನನಗೆ ವಯಸ್ಸಾಗಿದೆ, ಯುವಕರಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಆದ್ದರಿಂದ ಮುಂದಿನ ಲೋಕಸಭಾ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದರು. ಈ ಬಗ್ಗೆ ಹಲವು ಬಾರಿ ಹೇಳಿಕೆ ನೀಡಿದ್ದೇನೆ ಈಗಲೂ ಅದನ್ನು ಹೇಳುತ್ತಿದ್ದೇನೆ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದರು. [ವಯಸ್ಸಾಯ್ತು, ಇನ್ಮುಂದೆ ಚುನಾವಣೆ ಸ್ಪರ್ಧಿಸುವುದಿಲ್ಲ]
ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದ ಮಾತ್ರಕ್ಕೆ ಸುಮ್ಮನೆ ಕೂರುವುದಿಲ್ಲ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿ ಪಕ್ಷ ಸಂಘಟನೆ ಮಾಡುತ್ತೇನೆ. ಇಷ್ಟು ದಿನ ಪಕ್ಷವನ್ನು ಕಟ್ಟಲು ಹೋರಾಡಿದ್ದೇನೆ. ಇನ್ನು ಮುಂದೆಯೂ ಹೋರಾಟ ಮುಂದುವರೆಸುತ್ತೇನೆ ಎಂದು ಗೌಡರು ಹೇಳಿದರು.












Click it and Unblock the Notifications