ಲಸಿಕೆ ಹಾಕಿಸಿಕೊಳ್ಳಲು ಬೊಬ್ಬೆ ಹೊಡೆದರೂ ಬಾರದ ಜನ: ಮುಂದಾ..

ಚಿತ್ರದುರ್ಗ, ಮೇ 29: ಪಟ್ಟಣದ ಅಭಿಷೇಕ್ ನಗರದಲ್ಲಿ ಆರೋಗ್ಯ ಇಲಾಖೆ, ಪೌರಾಡಳಿತ ಮತ್ತು ಪೊಲೀಸ್ ಇಲಾಖೆ ವಿಶಿಷ್ಟ ಯೋಜನೆ ರೂಪಿಸಿ, ಈ ಪ್ರದೇಶದ ಜನರಿಗೆ ಲಸಿಕೆ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊರೊನಾದಿಂದ ತೊಂದರೆಗೀಡಾಗಿದ್ದ ಈ ಪ್ರದೇಶದಲ್ಲಿ ಲಸಿಕೆ ಹಾಕಿಸಿಕೊಂಡರೆ ಅಡ್ಡ ಪರಿಣಾಮ ಬೀರುತ್ತೆ ಎಂದು ನಂಬಿದ್ದ ಒಂದಷ್ಟು ಜನರನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಹೇಳಿ ವ್ಯಾಕ್ಸಿನ್ ಹಾಕಿಸಿದ್ದರು.

ಆದರೆ, ಇನ್ನಷ್ಟು ಜನ ಎಷ್ಟು ಮನವಿ ಮಾಡಿದರೂ ಕೇಳದೇ ಮನೆ ಬಾಗಿಲು ಹಾಕಿಕೊಂಡರು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ವಾಪಸ್ ಕಳುಹಿಸಿದ್ದರು. ಅದೇ ವೇಳೆ ಚಳ್ಳಕೆರೆ ಪೊಲೀಸರು ಈ ಪ್ರದೇಶದ ಜನರಿಗೆ ಅಕ್ಕಿ ರಾಗಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

Public In Challakere Refused To Vaccinate, Health Department Used Different Tactics

ಆಹಾರಧಾನ್ಯ ವಿತರಿಸಲಾಗುತ್ತಿದೆ ಎಲ್ಲರೂ ಬನ್ನಿ ಎಂದಾಗ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದವರೂ, ಬಾಗಿಲು ತೆಗೆದು ಓಡೋಡಿ ಬಂದರು. ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಬೊಬ್ಬೆ ಹೊಡೆದರೂ ಹೊರ ಬರದ ಜನ, ಆಹಾರಧ್ಯಾನ್ಯ ಎಂದಾಗ ಹೊರಬಂದರು.

ಇದೇ ಸಮಯವನ್ನು ಬಳಸಿಕೊಂಡ ಆರೋಗ್ಯ ಇಲಾಖೆಯ ಅಧಿಕಾರಿಗಳು, ಲಸಿಕೆ ಹಾಕಿಸಿಕೊಳ್ಳದ ಜನರಿಗೆ ಕೋವಿಶೀಲ್ಡ್ ವ್ಯಾಕ್ಸಿನ್ ಯಶಸ್ವಿಯಾದರು. ಅಲ್ಲಿಗೆ, ಹರಸಾಹಸ ಪಟ್ಟಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದರು.

ಡಿವೈಎಸ್ ಪಿ ಪಿ.ಕೆ.ವಿ ಶ್ರೀಧರ್, ಪೌರಾಯುಕ್ತ ಪಾಲಯ್ಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ಚರ್ಚಿಸಿ, ಮೊದಲೇ ಈ ಯೋಜನೆಯನ್ನು ಹಾಕಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+