ವಾಹನ ಸವಾರರಿಗೆ ಕೊರೊನಾ ಟೆಸ್ಟ್: ನಾಯಕನಹಟ್ಟಿ ಪೊಲೀಸರ ಚಾಣಾಕ್ಷತನ
ಚಿತ್ರದುರ್ಗ, ಜೂನ್ 1: ಲಾಕ್‌ಡೌನ್ ಜಾರಿಯಲ್ಲಿದ್ದರೂ ರಸ್ತೆಗಿಳಿಯುವವರಿಗೆ ಕೊರೊನಾ ಪರೀಕ್ಷೆ ಮಾಡಿಸುವ ಮೂಲಕ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಪೊಲೀಸರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ.
Recommended Video
ಲಾಕ್‌ಡೌನ್ ಅವಧಿಯಲ್ಲಿ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವವರಿಗೆ ಕೊರೊನಾ ವೈರಸ್ ಟೆಸ್ಟ್ ಮಾಡಲಾಗುತ್ತಿದ್ದು, ನಿಯಮ ಉಲ್ಲಂಘಿಸಿದವರಿಗೆ ಜಾಗೃತಿಯೊಂದಿಗೆ ಕೋವಿಡ್ ಪರೀಕ್ಷೆಯ ಶಿಕ್ಷೆ ನೀಡಲಾಗುತ್ತಿದೆ. ಇದರಿಂದ ಜನರು ಓಡಾಡುವುದನ್ನು ಕಡಿಮೆ ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಠಾಣೆಯ ಪಿಎಸ್ಐ ನೇತೃತ್ವದಲ್ಲಿ ಪೊಲೀಸರಿಂದ ವಿನೂತನ ಪ್ರಯೋಗ ಮಾಡಲಾಗುತ್ತಿದ್ದು, ಅನಗತ್ಯ ಓಡಾಟ ಬಂದ್ ಮಾಡಲು ಪೊಲೀಸರು ವಿಭಿನ್ನ ಪ್ಲಾನ್ ಮಾಡಿದ್ದಾರೆ.
ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ರಸ್ತೆಯಲ್ಲೇ ಕೊರೊನಾ ಟೆಸ್ಟ್ ಮಾಡುವುದನ್ನು ಕೇಳಿದ ಜನತೆ ಓಡಾಟವನ್ನು ಕಡಿಮೆ ಮಾಡಿದ್ದಾರೆ. ಕೊರೊನಾ ಪಾಸಿಟಿವ್ ಬಂದರೆ ನೇರವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಮಾಡಲಾಗುತ್ತಿದ್ದು, ಕೋವಿಡ್ ಟೆಸ್ಟ್‌ಗೆ ಹೆದರಿ ಯಾರೂ ಹೊರಗೆ ಬರುತ್ತಿಲ್ಲ.












Click it and Unblock the Notifications