Breaking: ಕೋಲಾರ, ಚಿತ್ರದುರ್ಗದಲ್ಲೂ PFI ಸಂಘಟನೆ ಮುಖಂಡರ ಬಂಧನ
ಚಿತ್ರದುರ್ಗ, ಸೆಪ್ಟೆಂಬರ್ 27: ಇತ್ತಿಚೆಗೆ ಪಿಎಫ್‌ಐ ಮತ್ತು ಎಸ್‌ಡಿಎಫ್‌ಐ ವಿರುದ್ಧ ದೇಶಾದ್ಯಂತ ಎನ್‌ಎಐ ದಾಳಿ ನಡೆಸಿತ್ತು. ಇದೀಗ ರಾಜ್ಯ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು ಕರ್ನಾಟಕ ಪಿಎಫ್‌ಐನ ಮುಖಂಡರ ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಸುಮಾರು 40 ಜನರನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲೂ ಸಹ ಪಿಎಫ್‌ಐ ಕಾರ್ಯಕರ್ತನನ್ನು ಬಂಧಿಸಲಾಗಿದೆ. ಪಿಎಫ್ಐ ಮುಖಂಡ ಅರ್ಫಾನ್ ಅಲಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಶಾಂತಿ ಕದಡುವ ಕೃತ್ಯದಲ್ಲಿ ಭಾಗಿಯಾದ ಆರೋಪ ಮೇಲೆ ನಗರದ ಚಿಕ್ಕಪೇಟೆ ಬಡಾವಣೆ ನಿವಾಸಿಯಾಗಿರುವ ಅರ್ಫಾನ್ ಅಲಿಯನ್ನು ಬಂಧನ ಮಾಡಲಾಗಿದೆ. ಇನ್ನು ಈತನಿಂದ ಮೊಬೈಲ್ ಸೇರಿದಂತೆ ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಎಸ್ಪಿ ಹಾಗೂ ಡಿವೈಎಸ್ಪಿ, ಸಿಪಿಐ ನೇತೃತ್ವದಲ್ಲಿ ಕೋಟೆ ಠಾಣೆಯಲ್ಲಿ ಅರ್ಫಾನ್ ಅಲಿ ವಿಚಾರಣೆ ನಡೆಸಲಾಗುತ್ತಿದೆ.

ಪಿ ಎಫ್ ಐ ಸಕ್ರಿಯ ಸದಸ್ಯನಾಗಿರುವ ಅರ್ಫಾನ್ ಅಲಿಯ ವಿರುದ್ಧ ಸಿಆರ್ ಪಿಸಿ 107, 151ರ ಅಡಿಯಲ್ಲಿ ವಶಕ್ಕೆ ಪಡೆದು, ಚಿತ್ರದುರ್ಗ ತಹಶೀಲ್ದಾರ್ ಮುಂದೆ ಹಾಜರುಪಡಿಸಲಾಗಿದೆ. ತಹಶೀಲ್ದಾರ್‌ರನ್ನು ಅಕ್ಟೋಬರ್ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೋಲಾರದಲ್ಲಿ 7 ಮಂದಿ ಬಂಧನ
ಕೋಲಾರ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಪಿಎಫ್‌ಐ ಮತ್ತು ಎಸ್‌ಡಿಎಫ್‌ಐ ನಾಯಕರ ಮೇಲೆ ಪೊಲೀಸ್ ದಾಳಿ ನಡೆಸಿದ್ದು, 7 ಮಂದಿಯನ್ನು ಬಂಧಿಸಿದ್ದಾರೆ.
ಪಿಎಫ್ಐ ಜಿಲ್ಲಾಧ್ಯಕ್ಷ, ಇಲ್ಲಿನ ವಿನಾಯಕ ನಗರದ ನಿವಾಸಿ ಇಮ್ತಿಯಾಝ್(36), ಎಸ್.ಎಸ್.ಮಖಾನ್ ನ ಸಿದ್ದೀಕ್ ಪಾಷಾ, ವಾಸಿಂ ಪಾಷಾ(28), ಅಲ್ಲಾ ಬಕ್ಷ್(28), ಮಿಲ್ಲತ್ ನಗರದ ನಯಾಝ್ ಪಾಷಾ(24), ಶಹೀನ್ ಷಾ ನಗರದ ಶಹಬಾಝ್ ಪಾಷಾ (30) ಹಾಗೂ ಶಹೀದ್ ನಗರದ ನೂರ್ ಪಾಷಾ(31) ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ .
ಇವರ ಮೇಲೆ ಸೆಕ್ಷನ್ 107ರ ಅಡಿಯಲ್ಲಿ ಬಂಧಿಸಲಾಗಿದ್ದು, ಕೂಡಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ತಿಳಿಸಿದ್ದಾರೆ.
ಶಾಂತಿ ಕದಡುವ ಕೃತ್ಯದದಲ್ಲಿ ಭಾಗಿಯಾದ ಆರೋಪದ ಮೇಲೆ ದಾಳಿ ನಡೆದಿದ್ದು, ರಾಜ್ಯದ್ಯಂತ 70ಕ್ಕಿಂತ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲಾ ಎಸ್‌ಪಿಗಳ ನೇತೃತ್ವದಲ್ಲಿ ದಾಳಿ ನಡೆದಿದೆ.
ಬಾಗಲಕೋಟೆಯಲ್ಲಿ 7 ಮಂದಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 , ರಾಮನಗರದಲ್ಲಿ 15 ಮಂದಿಯನ್ನು ಬಂಧಿಸಲಾಗಿದೆ. ಇದಲ್ಲದೆ ಬೀದರ್, ಬಾಗಲಕೋಟೆ, ಚಾಮರಾಜನಗರ, ಬಳ್ಳಾರಿ, ಕೊಪ್ಪಳ, ಕೋಲಾರ, ಬೆಂಗಳೂರು ಗ್ರಾಮಂತರ, ಮೈಸೂರು, ವಿಜಯಪುರ ಸೇರಿದಂತೆ ರಾಜ್ಯಾದ್ಯಂತ ಪಿಎಫ್ಐ ಮುಖಂಡರ ಮನೆ ಮೇಲೆ ದಾಳಿ ನಡೆದಿದೆ.












Click it and Unblock the Notifications