ಚಿತ್ರದುರ್ಗ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿ ನೇಮಕ
ಚಿತ್ರದುರ್ಗ, ಆಗಸ್ಟ್, 17: ಚಿತ್ರದುರ್ಗ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ರಂಜಿತ್ ಕುಮಾರ್ ಬಂಡಾರು ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ. ಈ ಹಿಂದೆ ಇದ್ದ ಧರ್ಮೇಂದ್ರ ಕುಮಾರ್ ಮೀನಾ ಅವರನ್ನು ಕಳೆದ ಜುಲೈ 3ರಂದು ವರ್ಗಾವಣೆ ಮಾಡಲಾಗಿತ್ತು.
ಇದೀಗ ಖಾಲಿಯಿದ್ದ ವರಿಷ್ಠಾಧಿಕಾರಿ ಸ್ಥಾನಕ್ಕೆ ರಂಜಿತ್ ಕುಮಾರ್ ಬಂಡಾರು ಅವರನ್ನು ವರ್ಗಾಯಿಸಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ನಾಗಪ್ಪ ಪರೀಟ್ ಅವರು ಆದೇಶಿಸಿದ್ದಾರೆ.

ರಂಜಿತ್ ಕುಮಾರ್ ಬಂಡಾರು ಅವರು ಹಿಂದೆ ಬಳ್ಳಾರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅವರನ್ನು ಕೆಲ ದಿನಗಳ ಹಿಂದೆ ವರ್ಗಾವಣೆ ಮಾಡಲಾಗಿತ್ತು. ಆದರೆ ಅವರಿಗೆ ಯಾವುದೇ ಸ್ಥಳ ನಿಯೋಜನೆ ಆಗಿರಲಿಲ್ಲ. ಇದೀಗ ಚಿತ್ರದುರ್ಗಕ್ಕೆ ಎಸ್‌ಪಿ ಆಗಿ ನೇಮಕಗೊಂಡಿದ್ದಾರೆ.
ನೂತನ ಜಿಲ್ಲಾಧಿಕಾರಿ ನೇಮಕ: ಎರಡು ವರ್ಷ ಬೆಳಗಾವಿ ಜಿಲ್ಲಾಧಿಕಾರಿ ಆಗಿದ್ದ ನಿತೇಶ್ ಪಾಟೀಲ್ ಅವರನ್ನು ಸಣ್ಣ ಉದ್ದಿಮೆಗಳ ನಿರ್ದೇಶಕರಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇನ್ನು ನೂತನ ಜಿಲ್ಲಾಧಿಕಾರಿ ಆಗಿ 2015ಬ್ಯಾಚನ ಮೊಹಮ್ಮದ್ ರೋಷನ್ ಆಗಮಿಸಲಿದ್ದಾರೆ. ಮೊಹಮ್ಮದ್ ರೋಷನ್ ಹೆಸ್ಕಾಂ ಎಂಡಿ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಮಹ್ಮದ್ ರೋಷನ್ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಹಾಗೂ ಒಳ್ಳೆಯ ಆಡಳಿತದ ಮೂಲಕ ಜನಸಾಮಾನ್ಯರ ಕಷ್ಟ-ಸುಖಕ್ಕೆ ಸ್ಪಂದಿಸುವ ಆಶಾಭಾವನೆಯಿಂದ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆ ಬರೆದು ಯಶಸ್ಸು ಕಂಡವರು.
ಆಡಳಿತದಲ್ಲಿ ಸುಧಾರಣೆ ತರುವ ಮೂಲಕ ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸುವ ಮಹತ್ವಾಕಾಂಕ್ಷೆ ಹೊಂದಿದವರು. ಅಜ್ಜ, ತಂದೆ, ತಾಯಿ ಸರ್ಕಾರಿ ಸೇವೆಯಲ್ಲಿದ್ದವರೇ. ಪ್ರಸ್ತುತ ಪತ್ನಿ, ಚಿಕ್ಕಪ್ಪ ಕೂಡ ಐಎಎಸ್ ಆಫೀಸರ್. ಹೀಗೆ ಕುಟುಂಬ ಸದಸ್ಯರೆಲ್ಲಾ ಒಂದಲ್ಲಾ ಒಂದು ಉನ್ನತ ಹುದ್ದೆ ಅಲಂಕರಿಸಿದ್ದಾರೆ.
ಐಎಎಸ್ ಆಫೀಸರ್ ಆಗುವ ಮೊದಲು ಇವರು ಕೂಡ ವಾರನ್ ಬೆಟ್ ಕಂಪೆನಿಯಲ್ಲಿ ಕೆಲಸ ಮಾಡುವ ಅವಕಾಶ ಪಡೆದಿದ್ದರು. ಒಳ್ಳೆಯ ಹುದ್ದೆ ಜೊತೆಗೆ ಒಳ್ಳೆಯ ಸಂಬಳವಿತ್ತು. ಆದರೆ ಟಿಪಿಕಲ್ ಕಾರ್ಪೊರೇಟ್ ಲೈಫ್ ಎಂಜಾಯ್ ಮಾಡುವ ಬದಲು ತಾನೊಬ್ಬ ಉತ್ತಮ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕೆಂಬ ಅಭಿಲಾಷೆಯಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ಹಾವೇರಿ ಜಿಲ್ಲಾ ಪಂಚಾಯತ ಸಿಇಓ, ಹುಬ್ಬಳ್ಳಿ ಹೆಸ್ಕಾಂ ಎಂಡಿ ಸೇರಿದಂತೆ ವಿವಿಧೆಡೆ ಕಡೆ ಸೇವೆ ಸಲ್ಲಿಸಿ ಈಗ ಬೆಳಗಾವಿ ಜಿಲ್ಲಾಧಿಕಾರಿ ಆಗಿ ನೇಮಕಗೊಂಡಿದ್ದಾರೆ.
ಮೊಹಮ್ಮದ್ ರೋಶನ್ ಅವರು ಹೈದರಾಬಾದ್ ಮೂಲದವರಾಗಿದ್ದು, ಇವರ ತಂದೆ-ತಾಯಿ ಇಬ್ಬರೂ ವೈದ್ಯರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹೈದರಾಬಾದ್‌ನಲ್ಲಿಯೇ ಮುಗಿಸಿದರು. ನಂತರ ಪದವಿಯಲ್ಲಿ ಇಂಜಿನಿಯರಿಂಗ್ ಹಾಗೂ ಎಂಬಿಎನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕುಟುಂಬದವರೆಲ್ಲಾ ಸಿವಿಲ್ ಸರ್ವೀಸ್‌ನಲ್ಲಿ ಇದ್ದುದರಿಂದ ತಾನು ಕೂಡ ಒಮ್ಮೆ ಪ್ರಯತ್ನಿಸೋಣವೆಂದು ಇಂಜಿನಿಯರಿಂಗ್ 4ನೇ ವರ್ಷದಲ್ಲಿದ್ದಾಗ ಪರೀಕ್ಷೆಗೆ ಸಿದ್ಧತೆ ಶುರು ಮಾಡಿಕೊಂಡ ಅವರು ಪ್ರಥಮ ಪ್ರಯತ್ನದಲ್ಲಿ ಪ್ರಿಲಿಮ್ಸ್‌ನಲ್ಲಿ ಯಶಸ್ವಿಯಾದರೂ ಮುಖ್ಯ ಪರೀಕ್ಷೆಯಲ್ಲಿ ಆಗಲಿಲ್ಲ.
ಮತ್ತೆ ಎಂಬಿಎ ಮಾಡುವಾಗ ಎರಡನೇ ಹಾಗೂ ಮೂರನೇ ಪ್ರಯತ್ನ ಮಾಡಿದರು. ಆದರೆ ಮೂರನೇ ಪ್ರಯತ್ನದಲ್ಲಿ ಯಶಸ್ಸು ಕಂಡರು. 2014ರಲ್ಲಿ 44ನೇ ರ‍್ಯಾಂಕ್ ಪಡೆಯುವ ಮೂಲಕ ಅತ್ಯುತ್ತಮಅಂಕ ಪಡೆದರು. ಸಂದರ್ಶನದಲ್ಲಿಯೂ ಸಹ ಒಳ್ಳೆಯ ಅಂಕಗಳು ಬಂದು ಯಪಿಎಸ್‌ಸಿ ಪರೀಕ್ಷೆ ಬರೆದು, ಲಿತಾಂಶ ಬರುವ ಕೆಲವೇ ದಿನಗಳಿರುವಾಗ ವಾರನ್ ಬೆಟ್ ಕಂಪೆನಿಯಲ್ಲಿ ರೋಶನ್ ಅವರಿಗೆ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಒಳ್ಳೆಯ ಕೆಲಸ ಸಿಕ್ಕಿತು. ಸಂಬಳ ಕೂಡ ಚೆನ್ನಾಗಿತ್ತು.
ಆದರೆ ಒಂದು ತಿಂಗಳು ಕೆಲಸ ಮಾಡಿದ ನಂತರ ಆ ಕೆಲಸ ಬಿಟ್ಟರು. "ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡಿದ್ದರೆ, ಈ ತರಹ ಜನರ ಸೇವೆ ಮಾಡುವ ಅವಕಾಶ ಸಿಗುತ್ತಿರಲಿಲ್ಲ. ಉದ್ದೇಶಪೂರ್ವಕವಾಗಿ ಖಾಸಗಿ ಕಂಪನಿ ಕೆಲಸ ಬಿಟ್ಟು, ಗ್ರಾಮೀಣಭಾಗದಲ್ಲಿ ಕೆಲಸಗಳನ್ನು ಮಾಡಲು, ವಿಶೇಷವಾಗಿ ಅಲ್ಲಿಯ ಜನರ ಸಮಸ್ಯೆ ಬಗೆಹರಿಸಲು ಈ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ," ಎಂದು ತಿಳಿಸಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications