ಮುರುಘಾ ಶರಣರ ಜನ್ಮದಿನವನ್ನು ಸರ್ಕಾರದ ವತಿಯಿಂದ ಸಮಾನತಾ ದಿನಾಚರಣೆ; ಸಿಎಂ ಬೊಮ್ಮಾಯಿ

ಬೆಂಗಳೂರು, ಏಪ್ರಿಲ್ 11: ಮುರುಘಾ ಶರಣರ ಜನ್ಮದಿನವನ್ನು ಸಮಾನತಾ ದಿನವೆಂದು ಸರ್ಕಾರದ ವತಿಯಿಂದ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಚಿತ್ರದುರ್ಗದ ಮಠದ ಶಿವಮೂರ್ತಿ ಮುರುಘಾ ಶರಣರ ಜನ್ಮದಿನಾಚರಣೆ ಬದಲಾಗಿ ಹಮ್ಮಿಕೊಂಡಿದ್ದ ಸಮಾನತಾ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹೊಸ ಮನ್ವಂತರ
"ಬಸವಣ್ಣನವರ ವೈಚಾರಿಕತೆ ತತ್ವ ಆದರ್ಶಗಳನ್ನು ಪುನಃ ಬಿತ್ತುವಂತಹ ಸಾಹಸಕ್ಕೆ ಕೈ ಹಾಕಿರುವ ಸೃಜನಶೀಲ ಚಿಂತಕರೂ ಆಗಿರುವ ಡಾ. ಶಿವಮೂರ್ತಿ ಮುರುಘಾ ಶರಣರ ಜನ್ಮದಿನಾಚಾರಣೆಯನ್ನು ಸಮಾನತಾ ದಿನ ಎಂದು ಆಚರಿಸಲಾಗುತ್ತಿರುವುದು ಸೂಕ್ತವಾಗಿದೆ. ಬಸವಾದಿ ಶರಣರ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಸಭೆ ಸಮಾರಂಭಗಳಲ್ಲಿ ಕೇಳಿಬರುವ ಮಾತು".

Chitradurga Murugha Mutt Pontiff Birthday on April 11 Will Be Observed as Equality Day Says CM Basavaraj Bommai

"12ನೇ ಶತಮಾನದಲ್ಲಿ ಸಮಾನತೆ ತರುವುದು, ಲಿಂಗಬೇಧ, ಮೂಢ ನಂಬಿಕೆಗಳನ್ನು ತೊಡೆದುಹಾಕುವುದಕ್ಕಾಗಿ ಹೋರಾಟ ನಡೆಯಿತು. ಅವರ ವಿಚಾರ ಇಂದಿಗೂ ಪ್ರಸ್ತುತ ಎಂದರೆ ಆ ಎಲ್ಲಾ ಅನಿಷ್ಟಗಳು ಇಂದಿಗೂ ಪ್ರಚಲಿತವಾಗಿವೆ ಎಂಬ ಚಿಂತನೆ ಮೂಡುತ್ತದೆ. ಸಮಾಜ ಪರಿವರ್ತನೆಗೆ ನಿರಂತರವಾದ ಶುದ್ದೀಕರಣದ ಅಗತ್ಯವಿದೆ. ನಮ್ಮ ಕನ್ನಡ ನಾಡಿನಲ್ಲಿ ಈ ದಿಟ್ಟ ಹೆಜ್ಜೆಯನ್ನು ಇಟ್ಟಿರುವುದು ಮುರುಘಾ ಶರಣರು".

"ಹಲವಾರು ಟೀಕೆ ಟಿಪ್ಪಣಿಗಳು ಬಂದಾಗಲೂ ಬಸವತತ್ವವನ್ನು ಎಂದಿಗೂ ಕೈಬಿಡುವುದಿಲ್ಲ ಎನ್ನುವ ದಿಟ್ಟ ನಿಲುವಿನಿಂದ ಸಮಾಜದ ಎಲ್ಲಾ ವರ್ಗದ ಜನರಿಗೆ, ಧ್ವನಿ ಇಲ್ಲದವರಿಗೆ ಧ್ವನಿ, ಗುರುತಿಲ್ಲದವರಿಗೆ ಗುರುತು ನೀಡಲು ಹಾಗೂ ಎಲ್ಲಾ ಸಮಾಜದವರಿಗೆ ಗುರುಪೀಠ ಸ್ಥಾಪನೆ ಮಾಡುವ ಮೂಲಕ ಹೊಸ ಮನ್ವಂತರವನ್ನು ತಂದಿದ್ದಾರೆ," ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Chitradurga Murugha Mutt Pontiff Birthday on April 11 Will Be Observed as Equality Day Says CM Basavaraj Bommai

ಪ್ರತಿರೋಧದ ನಡುವೆ ಪರಿವರ್ತನೆ
"ಕಾಕತಾಳೀಯವೆಂದರೆ ಬಸವಣ್ಣನವರು ಪರಿವರ್ತನೆಯ ಕಾಲ 12ನೇ ಶತಮಾನ, ಇಂದು ಮುರುಘಾ ಶರಣರು ಪರಿವರ್ತನೆ ಮಾಡುವ ಕಾಲ 21ನೇ ಶತಮಾನ. 12ನೇ ಶತಮಾನದಲ್ಲಿ ಮಾಡಿದ್ದನ್ನು 21ನೇ ಶತಮಾನದಲ್ಲಿ ಮಾಡುವ ಅವಶ್ಯಕತೆ ಕಂಡು ಮುರುಘಾ ಶರಣರು ಇದನ್ನು ಮಾಡುತ್ತಿದ್ದಾರೆ. 12ನೇ ಶತಮಾನದಲ್ಲಿಯೂ ಇದೇ ಪರಿಸ್ಥಿತಿ ಇತ್ತು. ಸಾಕಷ್ಟು ಪ್ರತಿರೋಧದ ನಡುವೆ ಪರಿವರ್ತನೆ ಆಯಿತು. 21ನೇ ಶತಮಾನದಲ್ಲಿಯೂ ಅಷ್ಟೇ ಪ್ರತಿರೋಧ ಇದೆ. ಸರ್ವರಿಗೂ ಸಮಾನತೆ ನೀಡುವ ತತ್ವವನ್ನು ನಿರಂತರವಾಗಿ ಸಮಾಜದಲ್ಲಿ ಬೇರೂರಬೇಕೆಂಬ ಸಂಕಲ್ಪವನ್ನು ಈ ಸಮಾಜದಲ್ಲಿ 21ನೇ ಶತಮಾನದಲ್ಲಿ ಮಾಡುವುದು ಬಹಳ ದೊಡ್ಡ ಸವಾಲು. ಆ ಸವಾಲನ್ನು ಅತ್ಯಂತ ಯಶಸ್ವಿಯಾಗಿ ಎದುರಿಸಿ ಅದರ ಬೀಜಾಂಕುರ ಮಾಡಿರುವುದು ಮುರುಘಾ ಶರಣರು ಎಂದು ಭಕ್ತಿ ಮತ್ತು ಹೆಮ್ಮೆಯಿಂದ ಹೇಳುವುದಾಗಿ," ತಿಳಿಸಿದರು.

ದೇಶದ ಅಂತಃಸತ್ವ ಚಾರಿತ್ರ್ಯವಂತ ಸಮಾಜ
ಈ ದೇಶಕ್ಕೆ 5000 ವರ್ಷಗಳ ಚರಿತ್ರೆ ಇದೆ. ಬೇಕಾಗಿರುವುದು ಚಾರಿತ್ರ್ಯ. ಆರ್ಥಿಕ ಅಭಿವೃದ್ಧಿಯಿಂದ ದೇಶ ಮುಂದುವರೆಯುತ್ತದೆ. ದೇಶದ ಅಂತಃಸತ್ವ ಚಾರಿತ್ರ್ಯವಂತ ಸಮಾಜ. ಪ್ರತಿಯೊಬ್ಬ ನಾಗರಿಕನೂ ಅದರ ಪಾಲನೆಯನ್ನು ಮಾಡಿದರೆ ದೇಶ ಉನ್ನತ ಸ್ಥಾನಕ್ಕೇರುತ್ತದೆ. ಚರಿತ್ರೆಯ ಜೊತೆಗೆ ಚಾರಿತ್ರ್ಯದ ಅವಶ್ಯಕತೆ ಇದೆ. ಈ ದೇಶದಲ್ಲಿ ಬಹಳಷ್ಟು ಆಚಾರ್ಯರಿದ್ದಾರೆ. ಬೇಕಾಗಿರುವುದು ಆಚರಣೆ. ನಮಗೆ ಆತ್ಮ ಶಕ್ತಿ ನೀಡುವ ತತ್ವಗಳನ್ನು ಹೇಳಿದ್ದಾರೆ. ಆದರೆ ಅದನ್ನು ಆಚರಣೆಗೆ ತರಬೇಕಿದೆ. ಇದನ್ನು ಅರ್ಥಮಾಡಿಕೊಂಡರೆ ಪರಮಪೂಜ್ಯರ ಧ್ಯೇಯಕ್ಕೆ ಸಾರ್ಥಕತೆ ಬರುತ್ತದೆ ಎಂದರು.

Chitradurga Murugha Mutt Pontiff Birthday on April 11 Will Be Observed as Equality Day Says CM Basavaraj Bommai

ವ್ಯಕ್ತಿಗಳಿಂದ ಜಗತ್ತಿನ ಪರಿವರ್ತನೆ
ಮನಪರಿವರ್ತನೆಯಿಂದ ಜಗತ್ತು ಪರಿವರ್ತನೆ ಆಗುತ್ತದೆ. ಜಗತ್ತಿನಲ್ಲಿ ಅತ್ಯಂತ ಪ್ರಮುಖ ಪರಿವರ್ತನೆ ಆಗಿರುವುದು ದೊಡ್ಡ ದೇಶ, ಸಂಸ್ಥೆಗಳಿಂದ ಅಲ್ಲ. ಪರಿವರ್ತನೆಯಾಗಿರುವುದು ಕೇವಲ ವ್ಯಕ್ತಿ ಮತ್ತು ಶಕ್ತಿಗಳಿಂದ. ಅತ್ಯಂತ ಪ್ರಾಂಜಲ ಮನಸ್ಸಿನಿಂದ ಸಮಾಜವನ್ನು ಬದಲಾಗಿಸಬೇಕೆಂಬ ಪರಿವರ್ತಕರು ಬುದ್ಧ, ಬಸವ, ಅಲ್ಲಮಪ್ರಭು, ಜೀಸಸ್ ಕ್ರಿಸ್ತ, ಮೊಹಮ್ಮದ್ ಪೈಗಂಬರ್, ಮಹಾವೀರರು ಜಗತ್ತಿನಲ್ಲಿ ಆಮೂಲಾಗ್ರ ಬದಲಾವಣೆಯನ್ನು ತಂದಿದ್ದಾರೆ. ಅವರು ಎಲ್ಲವನ್ನೂ ತ್ಯಾಗ ಮಾಡಿ ಏಕಚಿತ್ತದಿಂದ ಸಮಾಜವನ್ನು ಪರಿವರ್ತನೆ ಮಾಡಬೇಕೆಂದು ಶ್ರಮಿಸಿದರು ಎಂದರು.

ಈ ಸಂದರ್ಭದಲ್ಲಿ ಕನಕಗುರು ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಚಿತ್ರದುರ್ಗದ ಮುರುಘಾ ಶರಣರು, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಇಂಧನ ಸಚಿವ ವಿ. ಸುನಿಲ್ ಕುಮಾರ್, ಶಾಸಕ ಪಾಟೀಲ ತೇಲ್ಕೂರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.

Recommended Video

      ಅಕ್ರಮ ಗಣಿಗಾರಿಕೆ ಮಾಹಿತಿ ಕೊಟ್ಟ ವ್ಯಕ್ತಿಮೇಲೆ ಹಲ್ಲೆ:ಸಂಸದೆ ಸುಮಲತಾ ಏನ್ ಮಾಡ್ತಾರೆ? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+