ಚಿತ್ರದುರ್ಗದಲ್ಲಿ ಹಣ ವಸೂಲಿ: ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದು
ಚಿತ್ರದುರ್ಗ, ಏಪ್ರಿಲ್ 12: ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯದ್ಯಾಂತ ಲಾಕ್ ಡೌನ್ ಆದ ಪರಿಣಾಮವಾಗಿ ಸಾರ್ವಜನಿಕರಿಗೆ ರಾಜ್ಯ ಸರ್ಕಾರ ಎರಡು ತಿಂಗಳು ಉಚಿತ ಪಡಿತರ ಆಹಾರ ಪೂರೈಸಲು ಕ್ರಮ ಕೈಗೊಂಡಿದೆ.
ಆದರೆ ಉಚಿತ ಪಡಿತರವನ್ನು ಮಾಲಿಕರು ದುರುಪಯೋಗ ಪಡಿಸಿಕೊಂಡಿದ್ದರಿಂದ ಚಿಲ್ಲಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದುಪಡಿಸಲಾಗಿದೆ.
ಪಡಿತರ ವಿತರಣೆ ಸಮಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಈ ಆದೇಶವನ್ನು ಉಲ್ಲಂಘಿಸಿ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಯಾವುದೇ ಮಾಹಿತಿ ನೀಡದೆ ಗುಂಪು ಗುಂಪಾಗಿ ನಿಲ್ಲಿಸಿ ಪಡಿತರ ವಿತರಿಸಲಾಗಿತ್ತು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಚಿಲ್ಲಹಳ್ಳಿ ಗ್ರಾಮದಲ್ಲಿ ಆರ್. ತಿಪ್ಪೇಸ್ವಾಮಿ ನವರು ಕಾರ್ಡ್ ದಾರರಿಗೆ ಉಚಿತವಾಗಿ ಪಡಿತರ ವಿತರಿಸದೇ, ಒಟಿಪಿ ನೆಪದಲ್ಲಿ ಗ್ರಾಹಕರಿಂದ ಹಣ ವಸೂಲಿ, ತೂಕದಲ್ಲಿ ವ್ಯತ್ಯಾಸ ಹಾಗೂ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪಡಿತರ ವಿತರಣೆ ಮಾಡಿರುವ ದೂರು ಕೇಳಿ ಬಂದಿತ್ತು.

ತನಿಖೆಯ ಹಿಂದಿನ ದಿನ ತನಿಖಾ ತಂಡದ ಸದಸ್ಯರು ಗ್ರಾಮಕ್ಕೆ ಭೇಟಿ ನೀಡಿ ಇಲಾಖೆ ವರದಿ ಸಲ್ಲಿಸಿದ್ದರು. ನಂತರ ತನಿಖೆಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕನು ಹಣ ಪಡೆಯುವುದು ಬೆಳಕಿಗೆ ಬಂದಿದ್ದರಿಂದ ಆತನ ಪಡಿತರ ಲೈಸೆನ್ಸ್ ಅನ್ನು ಚಿತ್ರದುರ್ಗದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ರದ್ದುಗೊಳಿಸಿದ್ದಾರೆ.












Click it and Unblock the Notifications