ಚಿತ್ರದುರ್ಗದಲ್ಲಿ KSRP ಪರೀಕ್ಷೆಯಲ್ಲಿ ನಕಲಿ ಪರೀಕ್ಷಾರ್ಥಿ ಪೊಲೀಸರ ವಶಕ್ಕೆ
ಚಿತ್ರದುರ್ಗ, ನವೆಂಬರ್ 23: ಮೀಸಲು ಕಾನ್ ಸ್ಟೆಬಲ್ ಹುದ್ದೆ ನೇಮಕಾತಿ ಪರೀಕ್ಷೆಗೆ ಮತ್ತೊಬ್ಬರ ಹೆಸರಿನಲ್ಲಿ ಹಾಜರಾಗಿ ಪರೀಕ್ಷೆ ಬರೆಯುತ್ತಿದ್ದ ನಕಲಿ ಪರೀಕ್ಷಾರ್ಥಿಯನ್ನು ಚಿತ್ರದುರ್ಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಿದ್ದಾರೂಢ (26) ಸಿಕ್ಕಿಬಿದ್ದಿರುವ ನಕಲಿ ವಿದ್ಯಾರ್ಥಿ. ನ.22ರ ಭಾನುವಾರ ನಗರದ 22 ಕೇಂದ್ರಗಳಲ್ಲಿ ಕೆಎಸ್ಆರ್ ಪಿ ಹುದ್ದೆಗಳ ಭರ್ತಿಗೆ ಬೆಳಿಗ್ಗೆ 11 ರಿಂದ ಪರೀಕ್ಷೆ ಆಯೋಜಿಸಲಾಗಿತ್ತು. ಈ ವೇಳೆ ಕೊಠಡಿಯ ಅಧೀಕ್ಷಕರು ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಿದ್ದ ಅಭ್ಯರ್ಥಿಯ ದಾಖಲೆಗಳನ್ನು ಪರಿಶೀಲಿಸಿದಾಗ ಆತ ಮತ್ತೊಬ್ಬನ ಹೆಸರಿನಲ್ಲಿ ಪರೀಕ್ಷೆ ಬರೆಯಲು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಂದಿರುವುದು ತಿಳಿದುಬಂದಿದೆ.
ಕೆಲಸ ಕೊಡಿಸುವುದಾಗಿ 2 ಕೋಟಿ ವಂಚನೆ; ಆ ದುಡ್ಡಲ್ಲಿ ತಿರುಪತಿಗೆ ಕಾಣಿಕೆ!
ಸಂಶಯಗೊಂಡ ಅಧಿಕಾರಿಗಳು ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ವಿಷಯ ಮುಟ್ಟಿಸಿದ್ದಾರೆ. ನಕಲಿ ಪರಿಕ್ಷಾರ್ಥಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ. ಆರೋಪಿಯು ಸ್ವಯಂಪ್ರೇರಿತನಾಗಿ ಸ್ನೇಹಿತನಿಗೆ ನೆರವಾಗಲು ಬಂದಿದ್ದನು ಎಂದು ತಿಳಿದುಬಂದಿದೆ. ಈತನಿಗೆ ಬೇರೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆಯಲು ಪ್ರೇರೇಪಿಸಿರುವ ಭೀಮ್ ಶ್ರೀ ಹುಲ್ಲೋಳ್, ಲಕ್ಷ್ಮಣ್ ತರಣ್ಣನವರ್, ಸಂತೋಷ್ ಸಾಗರ್ ಇವರ ಮೇಲೆ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.