ಕೆ.ಸಿ.ವಿರೇಂದ್ರ ಕೈ ತಪ್ಪಲಿದೆ ಚಿತ್ರದುರ್ಗದ ಜೆಡಿಎಸ್ ಟಿಕೆಟ್?

Recommended Video

      Karnataka Elections 2018 : ನಟ ದೊಡ್ಡಣ್ಣ ಅಳಿಯ ಕೆ ಸಿ ವೀರೇಂದ್ರ ಚಿತ್ರದುರ್ಗದಿಂದ ಸ್ಪರ್ಧೆ |Oneindia Kannada

      ಚಿತ್ರದುರ್ಗ, ಮಾರ್ಚ್ 15 : ಉದ್ಯಮಿ ಕೆ.ಸಿ.ವಿರೇಂದ್ರ ಚಿತ್ರದುರ್ಗ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಆದರೆ, ಈಗ ಬಂದಿರುವ ಹೊಸ ಸುದ್ದಿ ಪ್ರಕಾರ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.

      ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

      ಕೆ.ಸಿ.ವಿರೇಂದ್ರ ಅವರು ಹಿರಿಯ ನಟ ದೊಡ್ಡಣ್ಣ ಅವರ ಅಳಿಯ. ಕರ್ನಾಟಕ ಮತ್ತು ಗೋವಾದಲ್ಲಿ ಹಲವಾರು ಉದ್ಯಮಗಳನ್ನು ವಿರೇಂದ್ರ ಹೊಂದಿದ್ದಾರೆ. 2018ರ ವಿಧಾನಸಭೆ ಚುನಾವಣೆಗೆ ಮೊದಲ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್ ವಿರೇಂದ್ರ ಅವರು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.

      2016ರಲ್ಲಿ ಕೆ.ಸಿ.ವಿರೇಂದ್ರ ಅವರ ಚಳ್ಳಕೆರೆ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. 500 ಮತ್ತು 1000 ರೂ. ನೋಟುಗಳು ನಿಷೇಧವಾದ ಬಳಿಕ ನಡೆದಿದ್ದ ಈ ದಾಳಿಯ ವೇಳೆ ಮನೆಯಲ್ಲಿ ಕೋಟ್ಯಾಂತರ ರೂ. ಹೊಸ ನೋಟುಗಳು ಪತ್ತೆಯಾಗಿತ್ತು.

      KC Veerendra may miss JDS ticket in Chitradurga

      ಇದನ್ನು ಮುಂದಿಟ್ಟುಕೊಂಡು ಕೆ.ಸಿ.ವಿರೇಂದ್ರ ಅವರಿಗೆ ಟಿಕೆಟ್ ಕೊಡುವುದು ಬೇಡ ಎಂದು ಸ್ಥಳೀಯ ನಾಯಕರು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ. ಕೋರ್ ಕಮಿಟಿಯಲ್ಲಿರುವ ಎಲ್ಲಾ ಸದಸ್ಯರಿಗೆ ಈ ಬಗ್ಗೆ ಮನವಿ ಮಾಡಲಾಗಿದೆ.

      ಕೆ.ಸಿ.ವಿರೇಂದ್ರ ಅವರಿಗೆ ಟಿಕೆಟ್ ಕೈ ತಪ್ಪಲಿದೆಯೇ?, ವರಿಷ್ಠರು ಯಾವ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ? ಎಂದು ಕಾದು ನೋಡಬೇಕು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+