ಚಿತ್ರದುರ್ಗ: ಕ್ರೂಸರ್, ಲಾರಿ ಡಿಕ್ಕಿ: ಸ್ಥಳದಲ್ಲೇ ಐವರ ದುರ್ಮರಣ

Posted By: Nayana
Subscribe to Oneindia Kannada

ಚಿತ್ರದುರ್ಗ, ಜನವರಿ 08: ಕ್ರೂಸರ್ ಹಾಗೂ ಲಾರಿ ಡಿಕ್ಕಿ ಸಂಭವಿಸಿ ಐವರು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಸಿಬಾರ ರಾಷ್ಟ್ರೀಯ ಹೆದ್ದಾರಿ ೪ ನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಮೃತರು ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಮುನ್ಯಾಳ ಗ್ರಾಮದವರು ಎಂದು ಮಾಹಿತಿ ಲಭ್ಯವಾಗಿದೆ. ಗಾಯಗೊಂಡವರನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಮೈಸೂರಿಗೆ ಪ್ರವಾಸಕ್ಕೆ ತೆರಳಿದ್ದರು ಸೋಮವಾರ ಬೆಳಗಾವಿಗೆ ಹಿಂದಿರುತ್ತಿದ್ದಾಗ ಈ ಘಟನೆ ಸಂಭವಿಸಿದೆ.

Jeep-Truck collide: claims Five lives

ಘಟನೆ ಸೋಮವಾರ ಬೆಳಗ್ಗೆ7.30ರ ಸುಮಾರಿಗೆ ಸಂಭವಿಸಿದೆ. ಸಿದ್ಧಾರ್ಥ, ರಾಕೇಶ್, ಶಿವಲಿಂಗು, ವಿನೋದ್ ಹಾಗೂ ಕೊಕ್ಕನೂರು ಶಿವಲಿಂಗು ಮೃತರಾದವರು, ಎಲ್ಲರೂ 18 ರಿಂದ 24 ವರ್ಷದೊಳಗಿನ ಯುವಕರು ಎಂದು ಮಾಹಿತಿ ಲಭ್ಯವಾಗಿದೆ. ಸಿಬಾರ ಗ್ರಾಮದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A road accident near Cibar of Chitradurga district has claimed Five lives while a cruiser Jeep collided with Truck on Monday morning.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ