ಚಿತ್ರದುರ್ಗದಲ್ಲಿ ಶೇ.70.59 ಮತದಾನ:ಕಳೆದ ಬಾರಿಗಿಂತ ಅಧಿಕ

ಚಿತ್ರದುರ್ಗ, ಏಪ್ರಿಲ್ 19: ಸತತ ಬರಗಾಲಕ್ಕೆ ತುತ್ತಾಗಿರುವುದರಿಂದ ಜೀವನಕ್ಕಾಗಿ ಹೊರಗೆ ಹೊರಗಿರುವ ಚಿತ್ರದುರ್ಗ ಮತದಾರರನ್ನು ಈ ಬಾರಿ ಲೋಕಸಭಾ ಚುನಾವಣೆಗೆ ಕರೆ ತಂದು ಶೇಕಡ 70.59 ಮತದಾನ ಮಾಡಿಸುವಲ್ಲಿ ಚಿತ್ರದುರ್ಗ ಜಿಲ್ಲಾಡಳಿತ ಯಶಸ್ವಿಯಾಗಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದ ಒಟ್ಟು ಮತದಾರರು 17,36,643. ಇದರಲ್ಲಿ 8,79,422 ಪುರುಷರು, 8,57,110 ಮಹಿಳೆಯರಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗದಲ್ಲಿ ಶೇ.66.03. ಮತದಾನ ನೆರೆದಿತ್ತು.ಕಳೆದ ಬಾರಿ ಮತದಾನಕ್ಕೆ ಹೋಲಿಸಿದರೆ ಈ ಬಾರಿ ಮತದಾನ ಸುಮಾರು 4% ಹೆಚ್ಚಾಗಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ನಗರದ ದವಳಗಿರಿ ಬರಗೇರಮ್ಮ ಶಾಲೆಗೆ ಕುಟುಂಬದ ಸದಸ್ಯರೊಂದಿಗೆ ತೆರಳಿ ಮತ ಚಲಾಯಿಸಿದರು.ಮಹಿಳೆಯರು ವಿಶೇಷವಾಗಿ ಪಿಂಕ್ ಮತಗಟ್ಟೆಗೆ ತೆರಳಿ ಮತದಾನ ಮಾಡಿ ಖುಷಿ ಪಟ್ಟರು.

In Chitradurga, polling is 70.59%

ಜಿಲ್ಲೆಯಲ್ಲೆಡೆ ಮತದಾನ ಶಾಂತಿಯುತವಾಗಿ ನಡೆದರೂ ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯ ಕಲ್ಪಿಸಿಲ್ಲ ಎಂದು ಮತ ಬಹಿಷ್ಕಾರ ಹಾಕಿದ ಘಟನೆ ಚಿತ್ರದುರ್ಗ ತಾಲೂಕಿನ ಓಬಣ್ಣನಹಳ್ಳಿಯಲ್ಲಿ ನೆಡೆದಿದೆ.

ಏಕಾಏಕಿ ಮತದಾನ ಬಹಿಷ್ಕಾರದಿಂದ ಕೆಲವು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಆದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿದ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮನವೊಲಿಸಿದರು. ನಂತರ ಗ್ರಾಮದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಮುನಿಸಿಕೊಂಡಿದ್ದ ಮತದಾರರು ಶಾಂತಿಯುತವಾಗಿ ಮತ ಹಕ್ಕು ಚಲಾಯಿಸಿದರು.

In Chitradurga, polling is 70.59%

ಮತದಾನ ಮಾಡಲು ಮತದಾರರಿಗೆ ವಿಶೇಷ ವಾಹನ ಸೌಲಭ್ಯ ಕಲ್ಪಿಸಲಾಗಿತ್ತು. ಆಟೋ ಸೇರಿದಂತೆ ವಿಕಲಚೇತನರಿಗೆ ಸೈಕಲ್ ವ್ಯವಸ್ಥೆ ಮಾಡಲಾಗಿತ್ತು. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಾದ ಹಿರಿಯೂರು ಶೇ.68.32., ಚಳ್ಳಕೆರೆ ಶೇ.72.3, ಹೊಳಲ್ಕೆರೆ ಶೇ.71.88, ಹೊಸದುರ್ಗ ಶೇ.68.18, ಮೊಳಕಾಲ್ಮೂರು ಶೇ 73.38, ಶಿರಾ ಶೇ.74.16, ಪಗಾಡ ಶೇ.64.48. ಚಿತ್ರದುರ್ಗ ನಗರದಲ್ಲಿ ಶೇ 71.67 ಮತದಾನ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+