ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸೇರಿದ ಹಿರಿಯೂರಿನ ಪುಟ್ಟ ಪೋರ

ಚಿತ್ರದುರ್ಗ, ಮಾರ್ಚ್ 10; ಆ ಮಗುವಿಗೆ ಈಗಿನ್ನೂ ಎರಡು ವರ್ಷ ಹತ್ತು ತಿಂಗಳು. ಮನೆಯ ಹೊರಗೆ ಆಟವಾಡಲು ಕಳಿಸಲೋ, ಬೇಡವೋ? ಎಂದು ಯೋಚಿಸುವ ವಯಸ್ಸು. ಮನೆಯೇ ಈ ಬಾಲಕನ ಪುಟ್ಟ ಪ್ರಪಂಚ.

14 ತಿಂಗಳಿದ್ದಾಗ ಮನೆಯ ಸುತ್ತಮುತ್ತ ಯಾವುದೇ ಪಕ್ಷಿ ಸುಳಿದರೂ ಅದರ ಧ್ವನಿಯನ್ನು ಅನುಕರಿಸುತ್ತಿದ್ದ. ಎರಡು ವರ್ಷ ಎಂಟು ತಿಂಗಳ ವೇಳೆಗೆ ವಿಶ್ವದ 195 ರಾಷ್ಟ್ರಗಳು ಮತ್ತು ಅವುಗಳ ರಾಜಧಾನಿಗಳ ಹೆಸರುಗಳನ್ನು ಕೇವಲ 27 ನಿಮಿಷಗಳಲ್ಲಿ ಹೇಳುವ ಮೂಲಕ ಬಾಲಕ ಅಚ್ಚರಿ ಮೂಡಿಸಿದ್ದಾನೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಬಸವೇಶ್ವರ ಬಡಾವಣೆಯಲ್ಲಿರುವ ಬಾಪೂಜಿ ಆಸ್ಪತ್ರೆಯ ವೈದ್ಯೆ ಡಾ. ವಿದ್ಯಾಶ್ರೀ ಬಿ. ಎಸ್. ಹಾಗೂ ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯ ಫಿಜಿಷಿಯನ್ ಡಾ. ಬಸವರಾಜ್ ಎಸ್. ಕೆ. ಅವರ ಪುತ್ರ ಅರ್ಜುನ್ ಬಿ. ಸಂಕದಾಳ್ ಅಪ್ರತಿಮ ಸ್ಮರಣಾ ಶಕ್ತಿಯನ್ನು ಹೊಂದಿರುವ ಪುಟ್ಟ ಪೋರ.

Hiriyur Based Boy Arjun Joins India Book Of Records

ಮೂರು ವರ್ಷದ ತುಂಬದ ಈ ಪೋರನಿಗೆ ರಾಷ್ಟ್ರ, ಅಂತರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿವೆ. ಅರ್ಜುನ್‌ಗೆ 14 ತಿಂಗಳಿದ್ದಾಗ ಬೋರ್ಡ್ ಮೇಲೆ ಅಕ್ಷರ, ಸಂಖ್ಯೆ, ಪಕ್ಷಿಗಳು, ಪ್ರಾಣಿಗಳ ಚಿತ್ರ ಬರೆದು ತೋರಿಸಿ ಕ್ಷಣ ಹೊತ್ತಿನ ನಂತರ ಕೇಳಿದರೆ ಎಲ್ಲವನ್ನೂ ಹೇಳುತ್ತಿದ್ದ. ಚಿಕ್ಕ ಚಿಕ್ಕ ಕತೆಗಳನ್ನು ಹೇಳಿಕೊಟ್ಟರೆ ಮರಳಿ ಹೇಳುತ್ತಿದ್ದ. ಬೆಂಗಳೂರಿನಿಂದ ಗ್ಲೋಬ್ ತಂದು ಅದರಲ್ಲಿರುವ ದೇಶಗಳನ್ನು ತೋರಿಸಿದೆವು.

ಎರಡು ವರ್ಷ ನಾಲ್ಕು ತಿಂಗಳ ವೇಳೆಗೆ 100 ದೇಶಗಳ ಹೆಸರನ್ನು ಹೇಳಿ, ಗ್ಲೋಬ್‌ನಲ್ಲಿ ಅವುಗಳನ್ನು ಗುರುತಿಸತೊಡಗಿದ. ನಾವಿಬ್ಬರೂ ಗ್ಲೋಬ್ ನಲ್ಲಿರುವ ಎಲ್ಲಾ ದೇಶ, ಅವುಗಳ ರಾಜಧಾನಿಗಳ ಬಗ್ಗೆ ತಿಳಿಸಿಕೊಟ್ಟೆವು.

Hiriyur Based Boy Arjun Joins India Book Of Records

"ನಮ್ಮ ಮಗ ನಮಗೇ ಅಚ್ಚರಿ ಎನಿಸುವ ರೀತಿಯಲ್ಲಿ ಕೇವಲ 27 ನಿಮಿಷದಲ್ಲಿ 195 ರಾಷ್ಟ್ರಗಳು ಮತ್ತು ಅವುಗಳ ರಾಜಧಾನಿಗಳ ಹೆಸರನ್ನು ಹೇಳತೊಡಗಿದ" ಎಂದು ಡಾ. ವಿದ್ಯಾಶ್ರೀ ಹಾಗೂ ಡಾ. ಬಸವರಾಜ್ ಹೇಳುತ್ತಾರೆ.

"ಮಗನನ್ನು ಪ್ಲೇ ಹೋಂಗೆ ಕಳಿಸುವ ಆಲೋಚನೆ ಇತ್ತು. ಕೋವಿಡ್ ಕಾರಣಕ್ಕೆ ಮನೆಯಲ್ಲಿಯೇ ಬಿಡುವು ಮಾಡಿಕೊಂಡು ಅಕ್ಷರಾಭ್ಯಾಸ ಮಾಡಿಸಿದೆವು, ಬೆಳಗಿನ ವಾಯು ವಿಹಾರಕ್ಕೆ ಜತೆಯಲ್ಲಿ ಕರೆದೊಯ್ದು ಕಣ್ಣಿಗೆ ಕಾಣುವ ಪ್ರಾಣಿ, ಪಕ್ಷಿಗಳು, ಗಿಡಮರಗಳ ಬಗ್ಗೆ ವಿವರಿಸುತ್ತಿದ್ದೆವು. ಅರ್ಜುನ್ ಕೇಳಿಸಿಕೊಳ್ಳುವ ರೀತಿ ಹಾಗು ಅದನ್ನು ನೆನಪಿಟ್ಟುಕೊಂಡು ಹೇಳುವ ರೀತಿ ನಿಜಕ್ಕೂ ಅಚ್ಚರಿ ಮೂಡಿಸಿತು" ಎನ್ನುತ್ತಾರೆ ಪೋಷಕರು.

"ಮಗು ಮಾಡುತ್ತಿದ್ದ ಚಟುವಟಿಕೆಗಳನ್ನು ವೀಡಿಯೋ ರೆಕಾರ್ಡ್ ಮಾಡಿ ಕಳಿಸಿದ್ದೆವು. 2020 ಡಿಸೆಂಬರ್ 11 ರಂದು ಹರ್ಯಾಣ ರಾಜ್ಯದ ಫರೀದಾಬಾದ್ ನಲ್ಲಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಅರ್ಜುನ್ ಸಾಧನೆ ದಾಖಲಾಗಿದ್ದು, ಅಂಚೆಯಲ್ಲಿ ಪ್ರಶಸ್ತಿ ಪತ್ರ ಕಳಿಸಿದ್ದಾರೆ. ಯುನೈಟೆಡ್ ಕಿಂಗ್ ಡಂನಿಂದ ಫೆಬ್ರವರಿ 2ರಂದು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪತ್ರ ಬಂದಿದೆ" ಎಂದು ವೈದ್ಯರು ಹೇಳಿದ್ದಾರೆ.

ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಸಾಧನೆ ಮಾಡಿರುವ ಪ್ರಥಮ ಬಾಲಕ ಎಂಬ ಖ್ಯಾತಿಗೆ ಅರ್ಜುನ್ ಪಾತ್ರನಾಗಿದ್ದಾನೆ. ತಮ್ಮ ಬಿಡುವಿಲ್ಲದ ವೈದ್ಯ ವೃತ್ತಿಯ ನಡುವೆಯೂ ಮಗನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಫಲವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಪುಟ್ಟ ಬಾಲಕ ಖ್ಯಾತಿ ಪಡೆದಿದ್ದಾನೆ'.

"ಅರ್ಜುನ್ ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಬರುವುದಿಲ್ಲ. ಜೊತೆಗೆ ಅವರ ತಂದೆಗೆ ಪಿಪಿಇ ಕಿಟ್ ಧರಿಸಿ ರೋಗಿಗಳ ಸೇವೆಗೆ ಹೋಗುವಂತೆ ತಾಕೀತು ಮಾಡುತ್ತಾನೆ. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಇವನಿಗೆ, ಸೂರ್ಯೋದಯ ವೀಕ್ಷಣೆ, ಟಿವಿಯಲ್ಲಿ ಕಾರ್ಟೂನ್ ನೋಡುವುದು, ಮನೆಯ ಮುಂದೆ ಬರುವ ಪ್ರಾಣಿಗಳಿಗೆ ಏನನ್ನಾದರೂ ತಿನಿಸುವುದು ತುಂಬ ಇಷ್ಟ" ಎನ್ನುತ್ತಾರೆ ತಾಯಿ ವಿದ್ಯಾಶ್ರೀ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+