ಚಿತ್ರದುರ್ಗ ಜಿಲ್ಲೆಯ ಹಲವೆಡೆ ಅಬ್ಬರಿಸಿದ ಕೃತಿಕಾ ಮಳೆ, ರೈತರ ಮುಖದಲ್ಲಿ ಮಂದಹಾಸ

ಚಿತ್ರದುರ್ಗ, ಮೇ, 13: ಬರಗಾಲದಿಂದ ಕಂಗೆಟಿದ್ದ ಕೋಟೆ ನಾಡು ಚಿತ್ರದುರ್ಗದಲ್ಲಿ ಇದೀಗ ವರುಣದೇವ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆಯಿಂದ ಸೋಮವಾರ ಮುಸುಕಿನ ವೇಳೆವರೆಗೂ ಉತ್ತಮ ಮಳೆ ಸುರಿದಿದೆ. ಬಿಸಿಲ ಬೇಗೆಗೆ ತತ್ತರಿಸಿದ್ದ ಜನತೆ ಇದೀಗ ತಂಪನೆಯ ಅಂದರೆ.. ಕೂಲ್ ಕೂಲ್ ವಾತಾವರಣ ನಿರ್ಮಾಣವಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಸುರಿಯುತ್ತಿದ್ದು, ಭಾನುವಾರ ಸಂಜೆ ಹಾಗೂ ರಾತ್ರಿ ಉತ್ತಮ ಹದವಾದ ಮಳೆಯಾಗಿದೆ. ಕೃತಿಕಾ ಮಳೆ ಆರಂಭವಾಗಿದ್ದು, ಪ್ರಾರಂಭದಲ್ಲೇ ಮಳೆಯಾಗುತ್ತಿದೆ. ಇದರಿಂದ ರೈತರ ಕೃಷಿ ಚಟುವಟಿಕೆಗಳು ಗರಿಗೆದರಲಿವೆ.

Heavy rain in Many parts of Chitradurga district Taluk wise statistics details

ಹಿರಿಯೂರು: ತಾಲೂಕಿನಲ್ಲಿ ಉತ್ತಮ ಮಳೆ ಸುರಿದಿದೆ. ಹಿರಿಯೂರು ಹಾಗೂ ಸೂಗೂರಿನಲ್ಲಿ 31.2 ಮಿಲಿ ಮೀಟರ್ ಅತಿ ಹೆಚ್ಚು ಮಳೆಯಾಗಿದೆ. ಉಳಿದಂತೆ ಇಕ್ಕನೂರು -15.0, ಈಶ್ವರಗೆರೆ-20.2 ಹಾಗೂ ಬಬ್ಬೂರು-11.0 ಮಿಲಿ ಮೀಟರ್‌ ಮಳೆಯಾಗಿದೆ. ಒಟ್ಟು 108.6 ಮಿಲಿ ಮೀಟರ್‌, ಸರಾಸರಿ -21.72 ಮಿಲಿ ಮೀಟರ್‌ ಮಳೆ ಬಂದಿರುವ ವರದಿಯಾಗಿದೆ.

ಚಿತ್ರದುರ್ಗ: ಚಿತ್ರದುರ್ಗ-1ರಲ್ಲಿ 14.6, ಚಿತ್ರದುರ್ಗ-2ರಲ್ಲಿ 21.0, ಹೀರೆಗೂಂಟರು -1.2, ಭರಮಸಾಗರ-3.4, ಸಿರಿಗೆರೆ-9.0, ಐನಹಳ್ಳಿ-11.2 ಸಒಟ್ಟು 60.4 ಮಿಮೀ ಮಳೆಯಾಗಿದೆ.

ಹೊಳಲ್ಕೆರೆ: ಹೊಳಲ್ಕೆರೆ -13.2, ಚಿಕ್ಕಜಾಜೂರು-12.6,ಹೆಚ್.ಡಿ.ಪುರ -11.2, ಒಟ್ಟು 6.16 ಮಿಮೀ ಮಳೆಯಾಗಿದೆ. ಇಂದು ಕೂಡ ಜಿಲ್ಲೆಯಲ್ಲಿ ಮೊಡಕವಿದ ವಾತಾವರಣ ನಿರ್ಮಾಣವಾಗಿದ್ದು ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.

ಬಿತ್ತನೆಗೆ ಸಿದ್ಧತೆ: ಜಿಲ್ಲೆಯ ಹಿರಿಯೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಉತ್ತಮ ಹದವಾದ ಮಳೆಯಾಗಿರುವುದರಿಂದ ರೈತರು ಬಿತ್ತನೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ರೈತರು ಹೊಲಗಳಲ್ಲಿ ಹಸನು ಮಾಡಿಕೊಳ್ಳಲು ಎತ್ತು, ಟ್ರಾಕ್ಟರ್ ಯಂತ್ರೋಪಕರಣಗಳ ಮೂಲಕ ಜಮೀನುಗಳ ಕಡೆ ಮುಖ ಮಾಡಿದ್ದಾರೆ. ಮುಂಗಾರು ಬೆಳೆಗಳಾದ ರಾಗಿ, ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ ಇನ್ನಿತರ ಬೆಳೆಗಳನ್ನು ಬೆಳೆಯಲು ತಯಾರಿ ನಡೆಸುತ್ತಿದ್ದಾರೆ.

ಸರ್ಕಾರದಿಂದ ಬೀಜ, ಗೊಬ್ಬರ ವಿತರಣೆ: ಮುಂಗಾರು ಬೆಳೆಗಳಾದ ರಾಗಿ, ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ ಸೇರಿದಂತೆ ಇನ್ನೀತರ ಬೆಳೆಗಳನ್ನು ಬೆಳೆಯಲು ಸರ್ಕಾರ ಸರಿಯಾದ ಸಮಯದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಬೀಜ ಗೊಬ್ಬರಗಳನ್ನು ವಿತರಣೆ ಮಾಡಬೇಕಿದೆ. ಗುಣಮಟ್ಟ ಹಾಗೂ ಉತ್ತಮ ಇಳುವರಿ ಬರುವಂತಹ ಬೀಜಗಳನ್ನು ರೈತರಿಗೆ ಸರ್ಕಾರ ವಿತರಿಸಲು ಮುಂದಾಗಬೇಕಿದೆ. ಪ್ರತಿ ವರ್ಷ ರೈತರಿಗೆ ಗೊಬ್ಬರದ ಸಮಸ್ಯೆ ಉಂಟಾಗುತ್ತಿದ್ದು, ಸರ್ಕಾರ ಇತ್ತ ಕಡೆ ಗಮನ ಹರಿಸಬೇಕಿದೆ.

ಮೇ 13ರಂದು ಎಲ್ಲೆಲ್ಲಿ ಎಷ್ಟು ಮಳೆ?

ಚಳ್ಳಕೆರೆ- 29-6 ಮಿಲಿ ಮೀಟರ್‌ ಮಳೆ
ಪರಶುರಾಂಪುರ-31-8 ಮಿ.ಮೀ.
ನಾಯಕನಹಟ್ಟಿ- 8-2 ಮಿ.ಮೀ.
ತಳಕು- 27-2 ಮಿ.ಮೀ.
ಡಿ ಮರಿಕೊಂಟಿ 51-6 ಮಿ.ಮೀ
ಒಟ್ಟು 148.4 ಮಿ.ಮೀಟರ್ ಮಳೆಯಾಗಿದೆ.

ಹೊಸದುರ್ಗ-6.4
ಬಾಗೂರು-10.2
ಶ್ರೀರಾಂಪುರ-35.0

ಮೊಳಕಾಲ್ಮುರು ತಾಲ್ಲೂಕು

ಮೊಳಕಾಲ್ಮುರು- 23.0 ಮಿ.ಮೀ
ರಾಯಾಪುರ- 15.6 ಮಿ.ಮೀ
ಬಿಜಿಕೆರೆ- 37.0 ಮಿ.ಮೀ
ರಾಂಪುರ- 6.0 ಮಿ.ಮೀ
ದೇವಸಮುದ್ರ-2.0 ಮಿ.ಮೀ
ಒಟ್ಟು-93.6 ಮಿ.ಮೀ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+