• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಕಲಿ ಜಾತಿ ಪ್ರಮಾಣಪತ್ರ ಸೃಷ್ಟಿ: 3 ತಿಂಗಳಿಗೇ ವಾಣಿವಿಲಾಸಪುರ ಗ್ರಾ.ಪಂ ಸದಸ್ಯತ್ವ ರದ್ದು

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಏಪ್ರಿಲ್ 9: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸಿ, ಮೀಸಲು ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದು, ಕೇವಲ ಮೂರೇ ತಿಂಗಳಿಗೆ ಮಹಿಳೆಯೊಬ್ಬರು ಗ್ರಾ.ಪಂ ಸದಸ್ಯತ್ವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಗ್ರಾಮದ ಮಹಿಳೆ ನೀಲಮ್ಮ ಸದಸ್ಯತ್ವ ಕಳೆದುಕೊಳ್ಳುವ ಮಹಿಳೆಯಾಗಿದ್ದಾರೆ ಎಂದು ತಿಳಿದುಬಂದಿದೆ. 2020ರ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದಿತ್ತು. ನೀಲಮ್ಮ ವಾಣಿವಿಲಾಸ ಪುರ-1 ಕ್ಷೇತ್ರದ ಪರಿಶಿಷ್ಟ ಪಂಗಡ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು.

ಚಿತ್ರದುರ್ಗ: ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಆಹ್ವಾನಚಿತ್ರದುರ್ಗ: ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಆಹ್ವಾನ

ನೀಲಮ್ಮ ಜಾತಿ ಪ್ರಮಾಣ ಪತ್ರವನ್ನು ಪ್ರಶ್ನಿಸಿದ ಭ್ರಷ್ಟಾಚಾರ ವಿರೋಧಿ ವೇದಿಕೆ ರಾಜ್ಯಾಧ್ಯಕ್ಷ ಉಮೇಶ್ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ, ಸತ್ಯ ಸಂಗತಿಯನ್ನು ಬಯಲು ಮಾಡಿದ್ದಾರೆ.

ಪ್ರಕರಣ ಹಿನ್ನೆಲೆ

ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಗ್ರಾಮ ಪಂಚಾಯಿತಿಯಲ್ಲಿ ನೀಲಮ್ಮ ಕೋಂ.ಕೆ.ಕೃಷ್ಣಪ್ಪ ಎಂಬ ಎಸ್ಟಿ ಮಹಿಳಾ ಮೀಸಲು ಕ್ಷೇತ್ರದ ಅಭ್ಯರ್ಥಿಯೊಬ್ಬರು ತಹಶೀಲ್ದಾರ ಅವರಿಂದ ಪಡೆದ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ದಿನಾಂಕ 30-12-2020 ರಂದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸದಸ್ಯರಾಗಿ ಆಯ್ಕೆಯಾಗಿದ್ದರು.

ಆಯ್ಕೆಯಾದ ದಿನದಿಂದ ಎ.ಉಮೇಶ್ ಅವರು ತಹಶೀಲ್ದಾರ, ಅಸಿಸ್ಟೆಂಟ್ ಕಮಿಷನರ್, ಜಿಲ್ಲಾಧಿಕಾರಿ ಮತ್ತು ಚುನಾವಣಾ ಆಯೋಗಗಳಿಗೆ ಪತ್ರ ವ್ಯವಹಾರಗಳ ಮೂಲಕ ದೂರು ನೀಡಿ ಹೋರಾಟ ನಡೆಸಿ ಕೊನೆಗೆ ಅಸಿಸ್ಟೆಂಟ್ ಕಮಿಷನರ್ ಚಿತ್ರದುರ್ಗ ನ್ಯಾಯಾಲಯದಲ್ಲಿ ಜಾತಿ ಪ್ರಮಾಣ ಪತ್ರವನ್ನು ರದ್ದು ಪಡಿಸುವಂತೆ ಮೇಲ್ಮನವಿ ಅರ್ಜಿ ಮೂಲಕ ದಾವೆ ಹೂಡಿ, ನ್ಯಾಯಾಲಯದಲ್ಲಿ ಎ.ಉಮೇಶ್ ಅವರೇ ವಾದ ಮಂಡಿಸಿ ಜಯ ಪಡೆದಿದ್ದಾರೆ.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಚಿತ್ರದುರ್ಗ ಮತ್ತು ಹಿರಿಯೂರು ತಹಶೀಲ್ದಾರ ಇವರುಗಳ ಜಂಟಿ ಸ್ಧಳ ತನಿಖಾ ವರದಿಯ ಆಧಾರದ ಮೇರೆಗೆ ವಿ.ವಿ ಪುರ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ನೀಲಮ್ಮ ಎಂಬ ಮಹಿಳಾ ಸದಸ್ಯೆಗೆ ತಹಶೀಲ್ದಾರ ಅವರು ನೀಡಿದ ಜಾತಿ ಪ್ರಮಾಣ ಪತ್ರವು ಸುಳ್ಳು ಜಾತಿ ಪ್ರಮಾಣ ಪತ್ರವೆಂದು ಕಂಡು ಬಂದ ಹಿನ್ನೆಲೆಯಿಂದಾಗಿ ಉಮೇಶ್ ಸಲ್ಲಿಸಿರುವ ಮೇಲ್ಮನವಿಯ ಅರ್ಜಿಯನ್ನು ನ್ಯಾಯಾಲಯ ಅಂಗೀಕಸಿದೆ.

   #Covid19Updates: ಕೊರೋನಾ ನಾಗಲೋಟ.. 7955 ಹೊಸ ಕೋವಿಡ್ ಸ್ಫೋಟ | Oneindia Kannada

   ನಾಯಕ (ಎಸ್ಟಿ) ಜಾತಿಯ ಪ್ರಮಾಣ ಪತ್ರವನ್ನು ರದ್ದು ಪಡಿಸಲಾಗಿದೆ ಎಂದು ಚಿತ್ರದುರ್ಗ ಉಪ ವಿಭಾಗ, ಚಿತ್ರದುರ್ಗ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಸನ್ನ.ವಿ ಅವರು ದಿನಾಂಕ 08-04-2021ರಂದು ತೀರ್ಪು ನೀಡಿ, ಪರಿಶಿಷ್ಟ ಪಂಗಡ (ನಾಯಕ/ಎಸ್ಟಿ)ದ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿ ಆದೇಶ ನೀಡಿದ್ದಾರೆ.

   English summary
   Chitradurga district Vanivilasapura Gram Panchayat woman member It is possible to lose the membership for creating a fake caste certificate.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X