ಚಿತ್ರದುರ್ಗ: ಅಯ್ಯಯ್ಯೋ ಬೆಲೆ ಹೆಚ್ಚಿದ ಬೆನ್ನಲ್ಲೇ ₹6,000,00 ಮೌಲ್ಯದ ಬೆಳ್ಳುಳ್ಳಿ ಕದ್ಬಿಟ್ರಪ್ಪೋ.. ಕದ್ಬಿಟ್ರು..

ಚಿತ್ರದುರ್ಗ, ಡಿಸೆಂಬರ್‌, 13: ದೇಶದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ "ಕೆಂಪುರಾಣಿ" ಟೊಮೆಟೋ ಬೆಲೆ ಗಗನಕ್ಕೇರಿತ್ತು. ನಂತರ ಇದೀಗ ಈರುಳ್ಳಿ ದರ ಏರಿಕೆಯಾಗಿದ್ದು, ತಜ್ಞರ ಪ್ರಕಾರ ಜನವರಿ ವೇಳೆಗೆ ಇಳಿಕೆಯಾಗಲಿದೆ. ಹಾಗೆಯೇ ಇದೀಗ ಕೆ.ಜಿ.ಬೆಳ್ಳುಳ್ಳಿ ದರ 300-ರಿಂದ 400ಕ್ಕೆ ಏರಿಕೆಯಾಗಿದ್ದು, ಇಂತಹ ಸಮಯದಲ್ಲಿ ಚಿತ್ರದುರ್ಗ ಜಿಲ್ಲೆಯ ದಂಡಿಕುರುಬನಹಟ್ಟಿಯ ಗೋದಾಮಿನಲ್ಲಿ ಉದ್ಯಮಿಯೊಬ್ಬರು ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ 150 ಚೀಲ ಬೆಳ್ಳಳ್ಳಿಯನ್ನು ಕಳುವು ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಲೆ ಗಗನಕ್ಕೇರಿದ ಸಮಯದಲ್ಲೇ ರಾಜಲಕ್ಷ್ಮಿ ಕಂಪನಿಯ ಜಿ.ಎಂ.ಬಸವಕಿರಣ್‌ ಎಂಬುವವರಿಗೆ ಸೇರಿದ ಬೆಳ್ಳುಳ್ಳಿಯನ್ನು ಕದ್ದಿದ್ದಾರೆ. ಗೋದಾಮಿನ ಷಟರ್‌ ಮುರಿದು ಈ ಕೃತ್ಯ ಎಸಗಲಾಗಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ. ಬೆಳ್ಳುಳ್ಳಿ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಈ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

 Garlic theft worth ₹6 lakhs in Chitradurga district

ಉದ್ಯಮಿ ಬಸವಕಿರಣ್‌ ಅವರು 50 ಕೆ.ಜಿ. ತೂಕದ 1,100 ಚೀಲ ಬೆಳ್ಳುಳ್ಳಿಯನ್ನು ಮಧ್ಯಪ್ರದೇಶದಲ್ಲಿ ಖರೀದಿಸಿ ಚಿತ್ರದುರ್ಗಕ್ಕೆ ತಂದಿದ್ದರು. ದಂಡಿನಕುರುಬರಹಟ್ಟಿಯ ಜಯಶೀಲರೆಡ್ಡಿ ಎಂಬುವರ ಗೋದಾಮಿನಲ್ಲಿ 5 ತಿಂಗಳಿನಿಂದ ಸಂಗ್ರಹಿಸಿಟ್ಟಿದ್ದರು. ಗೋದಾಮಿಗೆ ಭೇಟಿ ನೀಡಿದಾಗ ಷಟರ್ ಮುರಿದಿದ್ದು ಗೊತ್ತಾಗಿದೆ. ಬಳಿಕ ಚೀಲಗಳನ್ನು ಪರಿಶೀಲಿಸಿ ದೂರು ನೀಡಿದ್ದಾರೆ ಎಂದು ಗ್ರಾಮಾಂತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಟೊಮೆಟೋ, ಆಲೂಗಡ್ಡೆ, ಈರುಳ್ಳಿ ಮುಂತಾದ ನಿತ್ಯೋಪಯೋಗಿ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿ ಇಳಿದ ಬೆನ್ನಿಗೆ ಈಗ ಬೆಳ್ಳುಳ್ಳಿ ದರ ಗಗನಕ್ಕೆ ಏರಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ನಾಟಿ ಬೆಳ್ಳುಳ್ಳಿಯ ದರ ಒಂದು ಕೆ.ಜಿಗೆ 400 ರೂಪಾಯಿಗೆ ತಲುಪಿದ್ದು, ಹೈಬ್ರಿಡ್ ಬೆಳ್ಳುಳ್ಳಿಯ ದರ ಒಂದು 300 ರೂಪಾಯಿಗೆ ತಲುಪಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+