ಗಣಪತಿ ಆರಾಧನೆ ಮೌಢ್ಯದ ಸಂಕೇತ, ವಿಘ್ನೇಶ್ವರನನ್ನು ಪೂಜಿಸುವುದು ನಮ್ಮ ಸಂಸ್ಕೃತಿ ಅಲ್ಲ- ಸಾಣೇಹಳ್ಳಿ ಶ್ರೀ
ಚಿತ್ರದುರ್ಗ, ನವೆಂಬರ್ 03: ವಿಘ್ನೇಶ್ವರನನ್ನು ಪ್ರಾರ್ಥಿಸುವುದು ಮತ್ತು ಪೂಜಿಸುವುದು ನಮ್ಮ ಸಂಸ್ಕೃತಿ ಅಲ್ಲ ಎಂದು ಹೊಸದುರ್ಗ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ಆರಂಭಗೊಂಡಿರುವ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದ ಉದ್ಘಾಟನೆ ಸಮಾರಂಭ ಕುರಿತು ಮಾತನಾಡಿದರು.

ಮನೆಗಳಲ್ಲಿ ಅಥವಾ ವೇದಿಕೆ ಕಾರ್ಯಕ್ರಮಗಳಲ್ಲಿ ಗಣಪತಿಯನ್ನು ಪೂಜಿಸುವುದು ನಮ್ಮ ಸಂಸ್ಕೃತಿಯಲ್ಲ. ಇದರ ಬದಲಿಗೆ ವಾಸ್ತವದ ತುಕ್ಕಾದ ವಚನಗಳನ್ನು ಪಠಿಸಬೇಕು. ಗಣಪತಿ ಆರಾಧನೆ ಮಾಡುವುದು ಮೌಢ್ಯದ ಸಂಕೇತ, ಇದರ ಬದಲಿಗೆ ವಚನಗಳನ್ನು ಪ್ರಸ್ತುತ ಪಡಿಸುವುದು ನಿಜವಾದ ಪ್ರಾರ್ಥನೆ ಎಂದು ಹೇಳಿದರು.
ನಮ್ಮನ್ನು ನಾವು ನಂಬಿಕೊಂಡು ಶರಣರ ಆಶಯಗಳಂತೆ ಜೀವನ ಸಾಗಿಸಿಕೊಂಡು ಹೋಗಬೇಕು. ಶರಣರ ಪ್ರಕಾರ ಸ್ವಾಸಾಮರ್ಥ, ಉತ್ತಮ ನಡತೆಯನ್ನು ಹೊಂದಿದವರು ನಿಜವಾದ ದೇವರು ಈ ನೆಲೆಗಟ್ಟಿನಲ್ಲಿ ಆತ್ಮಾವಲೋಕನ ಅಗತ್ಯವಿದೆ ಎಂದು ತಿಳಿಸಿದರು.
ಗಣೇಶ ಕಾಲ್ಪನಿಕ ದೇವರಷ್ಟೇ, ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ನೆಪಮಾತ್ರಕ್ಕೆ ಹುಟ್ಟಿಕೊಂಡಿತು. ಬಾಹ್ಯ ವಸ್ತುಗಳಿಂದ ತಯಾರಿಸಿದ ದೇವರುಗಳು ದೇವರಲ್ಲ. ಕಾರ್ಯಕ್ರಮಗಳ ಆರಂಭದಲ್ಲಿ ಗಣೇಶ ಪೂಜೆ, ಶ್ಲೋಕ ಹಾಗೂ ಸ್ತೋತ್ರ ಪಠಿಸುವುದು ಹಲವರು ಜನರ ನಂಬಿಕೆಯಾಗಿದೆ. ಇದರ ಬದಲಿಗೆ ವಚನಗಳನ್ನೇ ಪ್ರಾರ್ಥನೆಯಂತೆ ಪಠಿಸುವುದು ಸೂಕ್ತ ಎಂದರು.
ರಾಷ್ಟ್ರೀಯ ನಾಟಕೋತ್ಸವದ ವಿವರ ಇಲ್ಲಿದೆ
ನವೆಂಬರ್ 2ರಿಂದ ಸಾಣೇಹಳ್ಳಿಯಲ್ಲಿ ಆರಂಭಗೊಂಡಿರುವ ರಾಷ್ಟ್ರೀಯ ನಾಟಕೋತ್ಸವ ನವೆಂಬರ್ 8ರಂದು ಮುಕ್ತಾಯವಾಗಲಿದೆ. ನವೆಂಬರ್ 4ರಂದು "ಕಾಯಕ ಮತ್ತು ದಾಸೋಹ ತತ್ವಗಳ ಅಂತರ್ ಸಂಬಂಧ" ವಿಚಾರ ಸಂಕಿರಣ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ ಎಸ್.ಜಿ. ಸಿದ್ದರಾಮಯ್ಯ ವಹಿಸಲಿದ್ದಾರೆ.
ಸಂಜೆ 6: ಗಂಟೆಗೆ "ಜಲವಿವಾದ" ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಸಾನಿಧ್ಯವನ್ನು ಜಗದ್ಗುರು ನಿರ್ಮಲಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ಸಚಿವ ಹೆಚ್ .ಕೆ. ಪಾಟೀಲ್ ಭಾಗವಹಿಸಲಿದ್ದಾರೆ.
ನವೆಂಬರ್ 5ರಂದು ಸಾಹಿತ್ಯ ಮತ್ತು ಸಂಸ್ಕೃತಿ ಸಮಕಾಲಿನ ಸವಾಲುಗಳು ವಿಶೇಷ ಉಪನ್ಯಾಸ ನಡೆಯಲಿದೆ. ಡಾ. ಸಿ. ನಟರಾಜ ಹುಳಿಯಾರ್ ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಭಾಗವಹಿಸಲಿದ್ದಾರೆ.
ನವೆಂಬರ್ 6ರಂದು ಸಂಜೆ ಕೃಷಿಕರ ನೋವು -ನಲಿವು -ರಕ್ಷಣೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಬಿವೈ ವಿಜಯೇಂದ್ರ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. ನವೆಂಬರ್ 7ರಂದು ಕಲಾವಿದರ ಸ್ಥಿತಿ ಗತಿ ಕಾರ್ಯಕ್ರಮ ನಡೆಯಲಿದೆ.
ನವೆಂಬರ್ 8ರಂದು ಶಿವಕುಮಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂಬಿ ಪಾಟೀಲ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.












Click it and Unblock the Notifications