ಫೆ. 10, 11ರಂದು ಚಿತ್ರದುರ್ಗದಲ್ಲಿ ಫಲ, ಪುಷ್ಪ ಪ್ರದರ್ಶನ

Posted By:
Subscribe to Oneindia Kannada

ಚಿತ್ರದುರ್ಗ, ಫೆಬ್ರವರಿ 8: ಪ್ರತಿ ವರ್ಷದಂತೆ ಈ ವರ್ಷವೂ ಐತಿಹಾಸಿಕ ನಗರ ಚಿತ್ರದುರ್ಗ ಜಿಲ್ಲೆಯಲ್ಲಿ ಇದೇ ತಿಂಗಳ 10 ಹಾಗೂ 11ರಂದು ಫಲ, ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ತೋಟಗಾರಿಕಾ ಕಚೇರಿಯ ಆವರಣದಲ್ಲಿಯೇ ಪ್ರದರ್ಶನ ನಡೆಯಲಿದೆ.

ತೋಟಗಾರಿಕಾ ಜಿಲ್ಲಾ ಪಂಚಾಯ್ತಿ, ಕೃಷಿ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಆಶ್ರಯದಲ್ಲಿ ನಡೆಯಲಿರುವ ಫಲ ಪುಷ್ಪ ಪ್ರದರ್ಶನವು ಈವರೆಗಿನ 26ನೇ ಪ್ರದರ್ಶನವಾಗಿದ್ದು, ಇದಕ್ಕಾಗಿ ಸುಮಾರು 7 ಲಕ್ಷ ರು. ಹಣವನ್ನು ವ್ಯಯಿಸಲಾಗುತ್ತಿದೆ.

Flower Show on Feb. 10, 11 in chitradurga

ವಿವಿಧ ಪುಷ್ಪಾಕೃತಿಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಮಹಿಳೆಯರಾದ ಬ್ಯಾಡ್ಮಿಂಟನ್ ಆಟಗಾರ್ತಿ ಹಾಗೂ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು, ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಕುಸ್ತಿಪಟು ದೀಪಾ ಮಲ್ಲಿಕ್, ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ, ಮುಖ್ಯಮಂತ್ರಿ, ವಿಶ್ವಸುಂದರಿ, ಭುವನಸುಂದರಿ, ಭಾರತದ ಪ್ರಥಮ ಮಹಿಳಾ ಪ್ರಧಾನಿ, ಹೀಗೆ ಎಲ್ಲವೂ ಮಹಿಳೆಯರಿಗೆ ಮೀಸಲಾಗುವಂಥ ವರ್ಣರಂಜಿತ ಕಲಾಕೃತಿಗಳು ಜನರನ್ನು ಸೆಳೆಯಲಿವೆಂದು ನಿರೀಕ್ಷಿಸಲಾಗಿದೆ.

ಈ ಎಲ್ಲಾ ವಿನ್ಯಾಸಗಳೂ ಮೈಸೂರಿನ ಪುಷ್ಪ ಕಲಾವಿದರ ಕೈಚಳಕದಲ್ಲಿ ನಿರ್ಮಾಣವಾಗುತ್ತಿದ್ದು, ಅವೆಲ್ಲವನ್ನೂ ಫೆ. 9ರಂದು ನಗರಕ್ಕೆ ತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆಯಾಗಿ, ಈ ಬಾರಿ ಮತ್ತಷ್ಟು ಮನೋಹರ ಪುಷ್ಪ ವಿನ್ಯಾಸಗಳನ್ನು ನೋಡುವ ಅವಕಾಶ ಚಿತ್ರದುರ್ಗ ಜಿಲ್ಲೆಯ ನಾಗರೀಕರದ್ದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Flower show has been organised in Chitradurga of Februvary 10, 11th by Horticulture and Zilla Panchayath at District horticulture department office premises.
Please Wait while comments are loading...