ಚಿತ್ರದುರ್ಗದಲ್ಲಿ ಆನೆ ದಾಳಿ : 6 ಮಂದಿಗೆ ಗಂಭೀರ ಗಾಯ
ಚಿತ್ರದುರ್ಗ, ಡಿಸೆಂಬರ್ 15 : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ರಾಮಗಿರಿ ಗ್ರಾಮದ ಬಳಿ ಮತ್ತೆ ಕಾಡಾನೆಗಳ ದಾಳಿ ನಡೆದಿದೆ. ದಾಳಿಯಲ್ಲಿ ೬ಮಂದಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗ, ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮಟ್ಟಿ ಹೊಲದ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಅಪ್ಪ, ಮಕ್ಕಳ ಮೇಲೆ ಆನೆಗಳು ದಾಳಿ ಮಾಡಿವೆ. ಮೇಕೆರ ಆನೆಪ್ಪಾ (60), ನಾಗರಾಜ (28), ಸಿದ್ದಲಿಂಗಪ್ಪ (23) ದಾಳಿಗೆ ಒಳಗಾದವರು. ಬೈಕ್ ನ್ನು ಎತ್ತಿ ಬಿಸಾಡಿ ಮೂವರನ್ನು ಗಾಯಗೊಳಿಸಿದೆ.

ಬೈಕ್ ಮೇಲೆ ದಾಳಿ ಮಾಡುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಟ್ರ್ಯಾಕ್ಟರ್ ಶಬ್ಧಕ್ಕೆ ಹೆದರಿ ಆನೆಗಳು ಓಡಿವೆ. ಇದಕ್ಕೂ ಮುನ್ನ ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಗ್ರಾಮದ ಬಳಿ ಜಮೀನಿನಲ್ಲಿದ್ದ ರೈತರ ಮೇಲೆ ದಾಳಿ ಮಾಡಿದೆ. ತಾಳಿಕಟ್ಟೆ ಗ್ರಾಮದ ಸುರೇಶ್, ಮುದಿಯಪ್ಪ, ಬಸಮ್ಮ ದಾಳಿಗೊಳಗಾದ ರೈತರು.
ಎರಡು ಎತ್ತುಗಳನ್ನು ದಂತ ದಿಂದ ತಿವಿದು ಗಾಯಗೊಳಿಸಿರುವ ಕಾಡಾನೆಗಳು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications