ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ವರ್ಗಾವಣೆ
ಚಿತ್ರದುರ್ಗ, ಜುಲೈ 28: ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Recommended Video
India and Nepal border dispute explained | Oneindia Kannada
ಚಿತ್ರದುರ್ಗ ಜಿಲ್ಲೆಗೆ ಕವಿತಾ ಎಸ್. ಮಣ್ಣಿಕೇರಿ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಿದೆ. ಈ ಹಿಂದೆಯೂ ವಿನೋತ್ ಪ್ರಿಯಾ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ವರ್ಗಾವಣೆ ಪ್ರಶ್ನಿಸಿ ವಿನೋತ್ ಪ್ರಿಯಾ ಅವರು ಸಿಎಟಿ ಮೊರೆ ಹೋಗಿದ್ದರು. ಸಿಎಟಿ ಆದೇಶದನ್ವಯ ಅವರು ಚಿತ್ರದುರ್ಗ ಜಿಲ್ಲೆಯಲ್ಲೇ ಡಿಸಿಯಾಗಿ ಮುಂದುವರೆದಿದ್ದರು.

ಇದೀಗ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ, ಸಾಮಾನ್ಯ ವರ್ಗಾವಣೆಯಲ್ಲಿ ವಿನೋತ್ ಪ್ರಿಯಾ ಅವರನ್ನು ವರ್ಗಾವಣೆ ಮಾಡಿದೆ. ತಕ್ಷಣವೇ ವರ್ಗಾವಣೆ ಜಾರಿಯಾಗುವ ಆದೇಶ ಹೊರಡಿಸಿದ್ದು, ಮುಂದಿನ ಆದೇಶದವರೆಗೂ ಬೆಂಗಳೂರಿನ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ನಿರ್ದೇಶಕರಾಗಿ ನಿಯೋಜಿಸಿದೆ. ಕಳೆದ ಎರಡು ವರ್ಷಗಳಿಂದ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ವಿನೋತ್ ಪ್ರಿಯಾ ಅಧಿಕಾರ ನಡೆಸುತ್ತಿದ್ದರು.












Click it and Unblock the Notifications