ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದ ಮುರುಘಾ ಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕ; ಅಧಿಕೃತ ಪ್ರಕಟಣೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಅಕ್ಟೋಬರ್‌, 16: ಕೊನೆಗೂ ಚಿತ್ರದುರ್ಗದ ಮುರುಘಾ ಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕ ಆಗಿದೆ. ಹಲವರ ವಿರೋಧದ ನಡುವೆಯೂ ಕಾನೂನು ಪ್ರಕ್ರಿಯೆ ಮೂಲಕ ಅಧಿಕೃತವಾಗಿ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಅವರನ್ನು ಪೀಠಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಈ ಬಗ್ಗೆ ಹೈಕೋರ್ಟ್ ಅನುಮತಿ ಪಡೆದು ಬಸವಪ್ರಭುಶ್ರೀ ನೇಮಕ ಕುರಿತು ಮುರುಘಾಮಠ ಇಂದು ಅಕ್ಟೋಬರ್ 16ರಂದು ಅಧಿಕೃತ ಪ್ರಕಟಣೆ ಹೊರಡಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಧಾರ್ಮಿಕ, ಸೇವಾ, ಪೂಜಾ ಕಾರ್ಯಗಳು ಮಠದ ಪರಂಪರೆ ಮುಂದುವರೆಸಿಕೊಂಡು ಹೋಗಲು ಪ್ರಕಟಣೆಯಲ್ಲಿ ತಿಳಿಸಿದೆ. ಮುರುಘಾಮಠದ ಪೂಜಾ ಕೈಂಕರ್ಯ ಉಸ್ತುವಾರಿಯಾಗಿ ನೇಮಕಗೊಂಡಿರುವ ಬಸವಪ್ರಭು ಶ್ರೀ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಪೂಜೆ, ದಾಸೋಹ,‌ ಮಠದ ಕೆಲಸ ನೋಡಿಕೊಳ್ಳಲು ಶಿವಮೂರ್ತಿ ಮುರುಘಾ ಶರಣರಿಂದ ಆದೇಶ ಸಿಕ್ಕಿದೆ. ನಿಷ್ಠೆ, ಭಕ್ತಿಯಿಂದ ಸೇವಾಕಾರ್ಯ ಮಾಡುತ್ತೇನೆ. ಮುರುಘೇಶ, ಗುರು ಬಸವೇಶನ ಸೇವೆ ಮಾಡುತ್ತೇನೆ ಎಂದು ಹೇಳಿದರು.

ಕೊಳೆತು ತಿಪ್ಪೆ ಸೇರಿದ ಈರುಳ್ಳಿ: ಸಂಕಷ್ಟದಲ್ಲಿ ಬೆಳೆಗಾರಕೊಳೆತು ತಿಪ್ಪೆ ಸೇರಿದ ಈರುಳ್ಳಿ: ಸಂಕಷ್ಟದಲ್ಲಿ ಬೆಳೆಗಾರ

ಬಸವಪ್ರಭು ಸ್ವಾಮೀಜಿ ಹೇಳಿದ್ದೇನು?

ಮುರುಘಾಶ್ರೀ ಆಶೀರ್ವಾದದ ಮಾರ್ಗದರ್ಶನದಲ್ಲಿ ಎಲ್ಲಾ ಮಠದ ಶ್ರೀಗಳು, ಎಲ್ಲಾ ಭಕ್ತರ ಆಶಯದಂತೆ ಸೇವೆ ಮಾಡುತ್ತೇನೆ. ಭಕ್ತರು ಎಂದಿನಂತೆ ಸಹಕರಿಸವೇಕು. ಮುಂದಿನ ಆದೇಶದವರೆಗೆ ಬಸವಣ್ಣನ ಆಶೀರ್ವಾದ, ಗುರುವಿನ ಆಶೀರ್ವಾದ, ಮುರುಘಾಶ್ರೀ ಆಶೀರ್ವಾದ ಶಕ್ತಿಯಿಂದ ಜವಬ್ದಾರಿ‌ಯನ್ನು ನಿರ್ವಹಿಸುತ್ತೇನೆ ಎಂದರು.

Davangere basava prabhu seer appointed as incharge of chitradurga muruga mutt

ಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕ

ಮಠದ ಆಡಳಿತ ಮಂಡಳಿ ಸದಸ್ಯರು, ಮುಖಂಡರು ಸಭೆ ನಡೆಸಿ ಬಸವಪ್ರಭು ನೇಮಕ ಮಾಡುವುದಕ್ಕೆ ತೀರ್ಮಾನಿಸಿದ್ದರು. ಮತ್ತೊಂದು ಕಡೆ ಬಸವಪ್ರಭು ಶ್ರೀಗೆ ಪ್ರಭಾರ ಪೀಠಾದ್ಯಕ್ಷರಾಗಿ ನೇಮಕಕ್ಕೆ ಅಪಸ್ವರ ಕೇಳಿ ಬಂದಿತ್ತು. ವಿವಿಧ ಮಠಾಧೀಶರು, ಸಮಾಜದ ಮುಖಂಡರು ಅಪಸ್ವರ ಎತ್ತಿದ್ದರು. ಮುರುಘಾಶ್ರೀ ರಕ್ಷಣೆಗಾಗಿ ಬಸವಪ್ರಭು ಶ್ರೀ ನೇಮಕ ಎಂದು ಕಿಡಿಕಾರಿದ್ದರೆ. ಬಸವಪ್ರಭು ಶ್ರೀ ನೇಮಕ ನ್ಯಾಯಸಮ್ಮತವಲ್ಲ ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಮಠದಲ್ಲಿ ದೀಕ್ಷೆ ಪಡೆದ ಕೆಲ ಮಠಾಧೀಶರಿಂದಲೂ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಇದೀಗ ಅಂತಿಮವಾಗಿ ಬಸವಪ್ರಭುಗಳನ್ನೇ ಆಯ್ಕೆ ಮಾಡಲಾಗಿದೆ.

ಮುರುಘಾಮಠದ ಪೂಜಾ ಕೈಂಕರ್ಯ ಮಾಡಲು ಈ ಹಿಂದೆ ಹೆಬ್ಬಾಳ ಮಠದ ಮಹಾಂತ ರುದ್ರೇಶ್ವರ ಶ್ರೀಗೆ ಮೌಖಿಕವಾಗಿ ಸೂಚಿಸಲಾಗಿತ್ತು. ಆದರೆ ಇದೀಗ ಮುರುಘಾಮಠದ ಪೂಜಾ ಕೈಂಕರ್ಯಕ್ಕೆ ಬಸವಪ್ರಭು ಶ್ರೀ ನೇಮಕ ಮಾಡಲಾಗಿದೆ. ಇನ್ನು ಮಠದ ಎಸ್​.ಜೆ.ಎಮ್​ ವಿದ್ಯಾಸಂಸ್ಥೆಯ ಕಾರ್ಯದರ್ಶಿ ನಿವೃತ್ತ ನ್ಯಾಯಾಧೀಶ ಎಸ್.ಬಿ.ವಸ್ತ್ರದಮಠ ಅವರಿಗೆ ಪವರ್ ಆಫ್ ಅಟರ್ನಿ ನೀಡಲಾಗಿದೆ. ಅದರಂತೆ ಎಸ್​.ಜೆ.ಎಮ್​ ವಿದ್ಯಾಸಂಸ್ಥೆಯ ಹಣಕಾಸು ವ್ಯವಹಾರ ಸೇರಿದಂತೆ ಚೆಕ್​ಗೆ ಸಹಿ ಮಾಡಲು ವಸ್ತ್ರದಮಠ ಅವರನ್ನು ನೇಮಿಸಲಾಗಿದೆ.

English summary
Davangere Basava Prabhu Sharanaru officially appointed as incharge of Chitradurga muruga Mutt as per court order. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X