ಕೋಟೆ ನಾಡಿನಲ್ಲಿ ಗೋವು ಕಳ್ಳತನದ ವಿಡಿಯೋ ವೈರಲ್: ಸರ್ಕಾರದ ವಿರುದ್ಧ ಹಿಂದೂ ಸಂಘಟನೆ ಕಿಡಿ
ಚಿತ್ರದುರ್ಗ, ಜೂನ್ 07: ಗೋವುಗಳನ್ನು ಕಳ್ಳತನ ಮಾಡಿ ಬೇರೆಡೆಗೆ ಸಾಗಾಟ ಮಾಡುತ್ತಿದ್ದನ್ನು ಕರಾವಳಿ ಭಾಗದಲ್ಲಿ ಕಾಣಬಹುದಾಗಿತ್ತು ಹಾಗೂ ಕೇಳಬಹುದಾಗಿತ್ತು. ಇದೀಗ ಇಂತಹ ಘಟನೆ ಕೂಡ ಕೋಟೆ ನಾಡಿಗೂ ಕಾಲಿಟ್ಟಿದೆ.
ರಾತ್ರಿ ವೇಳೆ ಕಳ್ಳರು ಬೀದಿ ಬೀದಿಗಳ ಗೋವುಗಳನ್ನು ಕಳ್ಳತನ ಮಾಡಿ ಟೆಂಪೋದಲ್ಲಿ ತುಂಬಿಕೊಂಡು ಸಾಗಿಸುತ್ತಿರುವ ದೃಶ್ಯ ಕೋಟೆ ನೋಡು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ರಾತ್ರಿ ವೇಳೆ ಮೂರ್ನಾಲ್ಕು ಮುಂದಿ ಕಳ್ಳರು ಮಲಗಿದ್ದ ಚಿಕ್ಕ ಚಿಕ್ಕ ಗೋವುಗಳನ್ನು ಹಿಡಿದುಕೊಂಡು ಅವುಗಳನ್ನು ಟೆಂಪೋದಲ್ಲಿ ತುಂಬಿಕೊಂಡು ಹೋದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಚರ್ಚ್ ಮುಂಭಾಗದಲ್ಲಿ ನಡೆದಿದೆ ಎಂದು ಸಾಮಾಜಿಕ ಚರ್ಚೆ ನಡೆಯುತ್ತಿದ್ದು, ಈ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಘಟನೆಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿಸಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಸರ್ಕಾರದ ವಿರುದ್ಧ ಕಿಡಿ ಹಿಂದೂ ಸಂಘಟನೆಗಳ ಕಿಡಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನೆಲ್ಲೇ ಹಿರಿಯೂರಿನಲ್ಲಿ ಬೀದಿ ದನಗಳನ್ನು ಕಳ್ಳತನ ಮಾಡಲಾಗಿದೆ. ಕಳೆದ ಐದು ವರ್ಷಗಳ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿರಿಯೂರಿನಲ್ಲಿ ಒಂದೂ ಕೂಡ ಬೀದಿ ದನಗಳ ಕಳ್ಳತನವಾಗಿರಲಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಜಿಲ್ಲಾ ಸಹ ಕಾರ್ಯದರ್ಶಿ ಮಸ್ಕಲ್ ಶ್ರೀನಿವಾಸ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಒಂದು ತಿಂಗಳು ಕಳೆಯುವಷ್ಟರಲ್ಲಿ ಗೋ ಕಳ್ಳ ಸಾಗಣೆ ಪ್ರಾರಂಭವಾಗಿರುವುದು ದುರಂತ. ಇದೀಗ ಹಳ್ಳಿಗಳಲ್ಲಿಯೂ ಕೂಡ ರೈತರು ತಮ್ಮ ದನಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ಅನಿವಾರ್ಯತೆಯಾಗಿ ಕಂಡುಬರುತ್ತದೆ ಎಂದರು.
ಕರಾವಳಿ ಭಾಗದಲ್ಲಿ ಕಂಡುಬರುತ್ತಿದ್ದ ಗೋಕಳ್ಳ ಸಾಗಣೆ ಈ ಭಾಗದಲ್ಲಿ ಕಂಡು ಬಂದಿರಿವವುದು ಗೋ ಪ್ರೇಮಿಗಳಿಗೂ ಹಾಗೂ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ರಾತ್ರಿ ಪಾಳಿಯದಲ್ಲಿ ಪೊಲೀಸ್ ಇಲಾಖೆ ಗಸ್ತು ಕೂಡ ಸರಿಯಾಗಿ ನಡೆಯದಿರುವುದು ಈ ಘಟನೆಗೆ ಕಾರಣವಾಗಿದೆ. ಜೊತೆಗೆ ಎರಡು ವರ್ಷದ ಹಿಂದೆ ಬಜರಂಗದಳದ ಹೋರಾಟದ ಪ್ರತಿಫಲವಾಗಿ ಸ್ಥಗಿತ ಗೊಂಡಿದ್ದ ಗೋ ಮಾಂಸದ ಅಂಗಡಿಗಳು ಕಾಂಗ್ರೆಸ್ ಸರ್ಕಾರ ಧೈರ್ಯದಿಂದ ಮತ್ತೆ ಕಾರ್ಯಚರಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದರು. ಈ ಪರಿಸ್ಥಿತಿಯು ಹೀಗೆ ಮುಂದಿವರೆದರೆ ಹೋರಾಟ ಮಾಡುವುದಾಗಿ ಮಸ್ಕಲ್ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications