ಹಿರಿಯೂರಿನಲ್ಲಿ ತ್ರಿವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿದ ಹಸು
ಚಿತ್ರದುರ್ಗ, ಜನವರಿ 22: ಹಸುವೊಂದು ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ ಮಲ್ಲಪ್ಪನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ.
ಹಸು ಮತ್ತು ಕರುಗಳು ಆರೋಗ್ಯವಾಗಿವೆ. ಮಲ್ಲಪ್ಪನಹಳ್ಳಿ ಗ್ರಾಮದ ರಂಗಮ್ಮ ಹಾಗೂ ಮೂರ್ಕಣಪ್ಪ ಎನ್ನುವವರು ಸಾಕಿರುವ ಆಲ್ ಬ್ಲಾಕ್ ತಳಿಯ ಹಸು ಮಂಗಳವಾರ ಮೂರು ಎಚ್‍ಎಫ್ ಕರುಗಳಿಗೆ ಜನ್ಮ ನೀಡಿರುವುದು ಕುತೂಹಲ ಉಂಟು ಮಾಡಿದೆ. ನಿನ್ನೆ ಮಧ್ಯಾಹ್ನ 2 ಗಂಟೆಗೆ ಜನಿಸಿರುವ ತ್ರಿವಳಿ ಕರುಗಳು ಎಲ್ಲರ ಗಮನ ಸೆಳೆದಿವೆ. ಮೂರು ಕರುಗಳು 5 ನಿಮಿಷಗಳ ಕಾಲಾವಧಿಯಲ್ಲಿ ಹುಟ್ಟಿವೆ. ಇವನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ಬರುತ್ತಿದ್ದಾರೆ.

ಹತ್ತು ವರ್ಷಗಳಿಂದ ಹಸುವನ್ನೇ ನಂಬಿ ಜೀವನ ನಡೆಸುತ್ತಿದ್ದ ಈ ಕುಟುಂಬಕ್ಕೆ ಮೂರು ಕರುಗಳಿಗೆ ಜನ್ಮ ನೀಡಿರುವ ಹಸು ಕಾಮಧೇನು ಆಗಿದೆ. ಸಾಮಾನ್ಯವಾಗಿ ಹಸುಗಳು ಒಂದು ಅಥವಾ ಎರಡು ಕರುಗಳಿಗೆ ಜನ್ಮ ನೀಡುತ್ತವೆ. ಆದರೆ ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿರುವುದು ಅಚ್ಚರಿ ಮೂಡಿಸಿದೆ. ಮೂರು ಕರುಗಳು ಆರೋಗ್ಯವಾಗಿವೆ ಎಂದು ಪಶು ವೈದ್ಯರು ದೃಢಪಡಿಸಿದ್ದಾರೆ. 50 ಸಾವಿರ ಹಸುಗಳಲ್ಲಿ ಒಂದಕ್ಕೆ ಈ ರೀತಿ ಆಗುತ್ತದೆ ಎಂದು ತಿಳಿಸಿದ್ದಾರೆ.












Click it and Unblock the Notifications