ಸಿಡಿ ಪ್ರಕರಣ; ಸ್ಪಷ್ಟನೆ ನೀಡಿದ ಮಾಜಿ ಸಚಿವ ಸುಧಾಕರ್

ಚಿತ್ರದುರ್ಗ, ಏಪ್ರಿಲ್ 4; ಕರ್ನಾಟಕದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದೆ. ಸಿಡಿಯಲ್ಲಿರುವ ಸಂತ್ರಸ್ತ ಯುವತಿ ಜೊತೆ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಸಂಪರ್ಕ ಹೊಂದಿದ್ದರು ಎಂಬ ವಿಚಾರ ಶನಿವಾರ ಬಹಿರಂಗವಾಗಿದೆ.

ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ. ಸುಧಾಕರ್ ಹೆಸರು ಶನಿವಾರದಿಂದ ಕೇಳಿ ಬರುತ್ತಿದೆ. ಹಿರಿಯೂರು ಕ್ಷೇತ್ರದ ಮಾಜಿ ಶಾಸಕ ಸುಧಾಕರ್ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆಗಳನ್ನು ನೀಡಿದ್ದಾರೆ.

"ನನಗೂ ಸಿಡಿಯಲ್ಲಿದ್ದಾರೆ ಎಂಬ ಸಂತ್ರಸ್ತ ಯುವತಿಗೂ ಯಾವುದೇ ಸಂಬಂಧವಿಲ್ಲ. ನನ್ನ ಹೆಸರು ಮಾಧ್ಯಮದಲ್ಲಿ ಪ್ರಸ್ತಾಪವಾಗಿರುವುದು ಅಚ್ಚರಿ ಮೂಡಿಸಿದೆ. ಸಿಡಿ ವಿಚಾರದಲ್ಲಿ ನನ್ನ ಯಾವುದೇ ಪಾತ್ರವಿಲ್ಲ" ಎಂದು ಸುಧಾಕರ್ ಹೇಳಿದರು.

Connection With CD Women D Sudhakar Clarification

"ನನ್ನದು ಕಾಂಗ್ರೆಸ್ ಕುಟುಂಬ, ನಾನು ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರೊಂದಿಗೂ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರೊಂದಿಗೆ ಒಂದೇ ರೀತಿಯ ಬಾಂಧವ್ಯವನ್ನು ಹೊಂದಿದ್ದೇನೆ" ಎಂದರು.

"ನನ್ನ ತಂದೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲಿಗೆ ಹೋಗಿ ಬಂದವರು. ಅಂತಹ ಕುಟುಂಬದಿಂದ ನಾನು ಬಂದಿದ್ದೇನೆ. ನನ್ನ ಹೆಸರು ಮಾಧ್ಯಮದಲ್ಲಿ ಪ್ರಸ್ತಾಪಿಸಿರುವುದು ಆಚ್ಚರಿ ಮೂಡಿಸಿದೆ. ನಾನು ಜನಪ್ರತಿನಿಧಿ ದಿನನಿತ್ಯ ನೂರಾರು ಜನರು ಕರೆ ಮಾಡುತ್ತಾರೆ. ಅದರಲ್ಲಿ ಆ ಹುಡುಗಿ ಯಾರು? ಎಂದು ನನಗೆ ಗೊತ್ತಿಲ್ಲ" ಎಂದು ಮಾಜಿ ಸಚಿವರು ಸ್ಪಷ್ಟಪಡಿಸಿದರು.

"ನಾನು ಯಾವುದೇ ಖಾತೆಗೆ ಹಣ ಕಳುಹಿಸಿಲ್ಲ. ಯಾರಿಗೂ 10 ರೂಪಾಯಿಯೂ ನೀಡಿಲ್ಲ. ಎಸ್‌ಐಟಿ ನನಗೆ ಯಾವುದೇ ನೋಟಿಸ್ ನೀಡಿಲ್ಲ. ಹಾಗೇನಾದರೂ ನೋಟಿಸ್ ನೀಡಿದಲ್ಲಿ ನಾನು ವಿಚಾರಣೆ ಹೋಗಲು ಸಿದ್ದವಿದ್ದೇನೆ" ಎಂದರು.

"ಸದರಿ ಪ್ರಕರಣದಲ್ಲಿ ನಾನು ತಪ್ಪಿತಸ್ಥ ಎನ್ನುವ ಭಯ ನನ್ನಲ್ಲಿ ಇದ್ದಿದ್ದರೆ ಕೆಲವು ಸಚಿವರು ಮತ್ತು ಜನಪ್ರತಿನಿಧಿಗಳು ತಮ್ಮ ವಿರುದ್ಧ ವಿಚಾರಣೆ ನಡೆಸದಂತೆ ಘನ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆಯನ್ನು ತಂದಿರುವಂತೆ ನಾನು ಸಹ ನ್ಯಾಯಾಲಯದ ಮೊರೆ ಹೋಗುತ್ತಿದ್ದೆ" ಎಂದು ಡಿ. ಸುಧಾಕರ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+