ಚಿತ್ರದುರ್ಗ ಜಿ.ಪಂ ಅಧ್ಯಕ್ಷ ಸ್ಥಾನಕ್ಕೆ ಸೌಭಾಗ್ಯ ರಾಜೀನಾಮೆ

Posted By:
Subscribe to Oneindia Kannada

ಚಿತ್ರದುರ್ಗ, ಏಪ್ರಿಲ್ 07: ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸೌಭಾಗ್ಯ ಬಸವರಾಜನ್ ಅವರು ಕೊನೆಗೂ ರಾಜೀನಾಮೆ ನೀಡಿದ್ದಾರೆ. ಸೌಭಾಗ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಜಿ. ಪಂ ಸದಸ್ಯರು ಅನೇಕ ಬಾರಿ ಪ್ರತಿಭಟನೆ ನಡೆಸಿದ್ದರು.

ಕಾಂಗ್ರೆಸ್ ಮುಖಂಡರಿಂದಲೂ ಒತ್ತಡ ಹಾಕಲಾಗಿತ್ತು, ಆದರೆ, ರಾಜೀನಾಮೆ ನೀಡದೆ, ಅಧಿಕಾರದಲ್ಲೆ ಮುಂದುವರೆದಿದ್ದ ಸೌಭಾಗ್ಯ ಅವರು ಇಂದು ದಿಢೀರ್ ಪ್ರತ್ಯಕ್ಷರಾಗಿ ರಾಜೀನಾಮೆ ಸಲ್ಲಿಸಿದ್ದಾರೆ.

ಸ್ವ ಇಚ್ಛಾಶಕ್ತಿಯಿಂದ ಬರೆದ ಪತ್ರವನ್ನು ಸೌಭಾಗ್ಯ ಬಸವರಾಜನ್ ನವರೆ ಖುದ್ದಾಗಿ ಚಿತ್ರದುರ್ಗ ಪಂಚಾಯತ್ ಇಲಾಖೆ ನಿರ್ದೇಶಕರಾದ ಯಾಲಕ್ಕಿ ಗೌಡರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.

Chitradurga ZP president Soubhagya Basavarajan resigns

ಈ ಹಿಂದೆ ರಾಜೀನಾಮೆ ನೀಡದೆ ಅಧಿಕಾರದಲ್ಲಿ ಮುಂದು ವರೆದಿದ್ದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿತ್ತು. ವಿಧಾನಸಭಾ ಚುನಾವಣೆ ನಡೆಯಲಿದ್ದು, ಇಂದು ರಾಜೀನಾಮೆ ಕೊಟ್ಟಿದ್ದು ಚಿತ್ರದುರ್ಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗಳ ಮತ್ತು ಕೈ ಮುಖಂಡರಲ್ಲಿ ಬಾರಿ ಕುತೂಹಲ ಮೂಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chitradurga ZP president Soubhagya Basavarajan resigned. Last year she was expelled from the primary membership of the Congress for violating the party rules

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ