ದರ್ಶನ್ ಪ್ರಕರಣ: ನಟ ಅಲ್ಲ ಅವ್ನು.. ದೊಡ್ಡ ಕೊಲೆಗಡುಕ; ಮಾನವೀಯತೆ, ಇಂತಹವರೆಲ್ಲಾ ದೊಡ್ಡ ಸ್ಟಾರ್‌ಗಳಾ?: ಮೃತ ರೇಣುಕಾಸ್ವಾಮಿ ತಂದೆ
ಚಿತ್ರದುರ್ಗ, ಜೂನ್, 12: ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಅವರ ತಂದೆ ಪ್ರತಿಕ್ರಿಯಿಸಿದ್ದು, ದೇಶದಲ್ಲಿ ಮನುಷ್ಯತ್ವ ಹಾಗೂ ಮಾನವೀಯತೆ ಇಲ್ಲ, ಇವರೆಲ್ಲ ಕೊಲೆಗಡಕರು ಎಂದು ಮೃತನ ತಂದೆ ಕಾಶಿನಾಥ ಶಿವನಗೌಡ ಕಣ್ಣೀರಿಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಗನ ಅಂತ್ಯಕ್ರಿಯೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರೆಲ್ಲ ದೊಡ್ಡ ದೊಡ್ಡ ಮನುಷ್ಯರು, ದೊಡ್ಡ ದೊಡ್ಡ ಸ್ಟಾರ್‌ಗಳು ಏನ್ರೀ? ಇದು ವ್ಯವಸ್ಥೆ ಎಂದು ಕಣ್ಣೀರಿಡುವ ಮೂಲಕ ಅಸಮಾಧನ ಹೊರಹಾಕಿದರು.

ಏನು ಮಾತಾಡೋದು, ಹೋದ ಮಗ ಬರ್ತಾನಾ? ಅವನ್ಯಾರೋ ಜೀವನ ಕೊಡ್ತಾನಾ? ಎಂದು ಪ್ರಶ್ನಿಸಿದರು. ಮಗನಿಗೆ ಎದೆ, ಮಾರ್ಮಾಂಗ, ಮುಖ, ಕಾಲು, ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಹೋಡೆದು ಸಾಯಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಟ ದರ್ಶನ್ ವಿರುದ್ಧ ಸಿಡಿದೆದ್ದ ಲಿಂಗಾಯತರು: ಪವಿತ್ರ ಗೌಡ ಹಾಗೂ ನಟ ದರ್ಶನ್ ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆನಾಡು ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಿಧ ಸಂಘಟನೆಗಳಿಂದ ಪ್ರತಿಭಟನೆಗೆ ಕರೆ ಕೊಟ್ಟಿದ್ದ ಲಿಂಗಾಯತ ಸಮುದಾಯ ದರ್ಶನ್ ವಿರುದ್ಧ ಆಕ್ರೋಶ ಹೊರಹಾಕಿದರು. ನಗರದ ನಿಲ್ಕಂಟೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಡಿಸಿ ಕಚೇರಿಗೆ ತೆರಳಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ರೇಣುಕಾ ಸ್ವಾಮಿ ಅವರನ್ನ ಕೊಲೆ ಮಾಡಲು ಕ್ರೂರಿತನ ಮೆರೆದಿರುವ ನಟ ದರ್ಶನ್ ಮತ್ತು ಅವರ ಟೀಂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ ಆರೋಪದಲ್ಲಿ ಚಿತ್ರದುರ್ಗದ ರೇಣುಕಾ ಸ್ವಾಮಿ ಅವರನ್ನ ನಟ ದರ್ಶನ್ ಮತ್ತು ಅವರ ಟೀಂ ಕೊಲೆ ಮಾಡಲಾಗಿತ್ತು. ಈ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ನಡೆದಿತ್ತು. ಮಂಗಳವಾರ ಪೊಲೀಸರು ನಟ ದರ್ಶನ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಸಂಜೆ ನ್ಯಾಯಾಲಯ ಮುಂದೆ ಹಾಜರು ಪಡಿಸಿದ್ದರು. ಆರೋಪಿಗಳ ವಿರುದ್ಧ ನ್ಯಾಯಾಲಯ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಆದೇಶಿಸಿತ್ತು.
ದರ್ಶನ್ ನಿಜ ಜೀವನದ ಖಳನಾಯಕ: ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಮೂಲಗಳ ಪ್ರಕಾರ ಎ2 ಆರೋಪಿಯಾಗಿರುವ ನಟ ದರ್ಶನ್ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ, ಈಗಾಗಲೇ ಹಲವರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, ಆರೋಪಿ ಯಾರೇ ಆಗರಲಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಅಂತಲೂ ಹೇಳುತ್ತಿದ್ದಾರೆ. ಹಾಗೆಯೇ ಇದೀಗ ಟ್ವೀಟ್ ಮೂಲಕ ನಟ ಚೇತನ್ ಅಹಿಂಸಾ ಅವರು ಕೂಡ ಪ್ರತಿಕ್ರಿಯಿಸಿದ್ದಾರೆ. ಹಾಗಾದರೆ ಅವರ ಪ್ರತಿಕ್ರಿಯೆ ಹೇಗಿದೆ ಎಂದು ಇಲ್ಲಿ ತಿಳಿಯಿರಿ.
"ನಿಜ ಜೀವನದಲ್ಲಿ ನಟ ದರ್ಶನ್‌ನಂತಹ ಖಳನಾಯಕನನ್ನು ಸೃಷ್ಠಿಸಿದ ನಾವೇ ತಪ್ಪಿತಸ್ಥರು," ಎಂಬುದಾಗಿ ನಟ ಚೇತನ್ ಅಹಿಂದಾ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದ ಭಾಗವಾದ ಟ್ವೀಟ್ ಪೋಸ್ಟ್ ಮಾಡಿರುವಂತಹ ಅವರು, ನಟ ದರ್ಶನ ಮತ್ತು ಆತನ ಸಹಚರರ ವಿರುದ್ಧ ಕೊಲೆ ಆರೋಪಗಳು ಗಂಭೀರವಾಗಿವೆ. ನಮ್ಮ ರಾಜ್ಯ ಪೊಲೀಸರು ಅದಕ್ಕೆ ಅನುಗುಣವಾಗಿ ತನಿಖೆ ನಡೆಸುತ್ತಾರೆ ಎಂದು ನಾವು ನಂಬುತ್ತೇವೆ," ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ, "ಚಲನಚಿತ್ರ ತಾರೆಯರು ಸುಮಾರು ಒಂದು ಶತಮಾನದಿಂದ ಅವರು ಪಡೆದಿರುವ ಜೀವನಕ್ಕಿಂತ ದೊಡ್ಡ ಸ್ಥಾನಮಾನಕ್ಕೆ ಅರ್ಹರಲ್ಲ. ಇಂತಹ ನಿಜ-ಜೀವನದ ಖಳನಾಯಕರನ್ನು ಸೃಷ್ಟಿಸಿದವರು ನಾವು ಒಂದು ಸಮಾಜವಾಗಿ ತಪ್ಪಿತಸ್ಥರು," ಎಂಬುದಾಗಿ ತಿಳಿಸಿದ್ದಾರೆ.












Click it and Unblock the Notifications