ಲೋಕ್ ಅದಾಲತ್: ಚಿತ್ರದುರ್ಗದಲ್ಲಿ ಮುನಿಸು ಮರೆತು ಮತ್ತೆ ಒಂದಾದ ದಂಪತಿಗಳು
ಚಿತ್ರದುರ್ಗ, ಸೆಪ್ಟೆಂಬರ್, 15: ಕೌಟುಂಬುಕ ಸಮಸ್ಯೆ ಹಾಗೂ ಇನ್ನಿತರೆ ಸಮಸ್ಯೆಗಳಿಂದ ದಂಪತಿಗಳ ನಡುವೆ ಬಿರುಕು ಉಂಟಾಗಿ ಬೇರೆ ಆಗಿ ಮತ್ತೆ ಒಂದಾದ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಹಾಗೆಯೇ ನಗರದ ನ್ಯಾಯಾಲಯಗಳಲ್ಲಿ ಶನಿವಾರ (ಸೆಪ್ಟೆಂಬರ್ 14) ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ದಂಪತಿಗಳು ಒಂದಾಗಿದ್ದಾರೆ.
ವೈವಾಹಿಕ ವಿವಾದಗಳಿಗೆ ಸಂಬಂಧಿಸಿದಂತೆ ಕಾರಣಾಂತರಗಳಿಂದ ನ್ಯಾಯಾಲಯಗಳಲ್ಲಿ ದಾಖಲಾಗಿದ್ದ ಪ್ರಕರಣಗಳು ರಾಜೀ ಮುಖಾಂತರ ಸುಖಾಂತ್ಯವಾಗಿರುತ್ತದೆ. ವಿಶೇಷವಾಗಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಇವರ ನ್ಯಾಯಾಲಯದಲ್ಲಿ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ 2022ನೇ ಸಾಲಿನಲ್ಲಿ ಒಂದು ಪ್ರಕರಣ ದಾಖಲಾಗಿತ್ತು.

2023ನೇ ಸಾಲಿನ ದಾಖಲಾದ ಒಂದು ಪ್ರಕರಣ ಹಾಗೂ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ನ್ಯಾಯಾಲಯದಲ್ಲಿ 2021ನೇ ಸಾಲಿನಲ್ಲಿ ದಾಖಲಾದ ಒಂದು ಪ್ರಕರಣ ದಾಖಲಾಗಿತ್ತು. ಇದೀಗ ನ್ಯಾಯಾಧೀಶರು ಹಾಗೂ ವಕೀಲರ ಮನವೊಲಿಕೆಯಿಂದ ಈ ದಂಪತಿಗಳು ಮನಸ್ತಾಪ ಮರೆತು ರಾಜೀಯಾಗಿ ಜೀವನದಲ್ಲಿ ಒಂದಾಗಿ ಬಾಳುತ್ತೇವೆ ಎಂದು ಒಂದಾದರು.
ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರೋಣ ವಾಸುದೇವ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಡಿ.ಮಮತ, ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಚೈತ್ರ, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಸೇರಿದಂತೆ ಲೋಕ್ ಅದಾಲತ್‌ನಲ್ಲಿ ವಕೀಲರು, ಸಾರ್ವಜನಿಕರು ಭಾಗವಹಿಸಿದ್ದರು.
ಆಂಟಿಯರ ಕಡೆಗೆ ಪುರುಷರು ಆಕರ್ಷಿತರಾಗುವುದೇಕೆ?: ಹಲವು ಪುರುಷರು ಕೆಲವು ಮಹಿಳೆಯರ ಕಡೆಗೆ ಆಕರ್ಷಿತರಾಗುತ್ತಾರೆ. ಅದರಲ್ಲೂ ಹೆಚ್ಚಾಗಿ ವಯಸ್ಸಾಗಿರುವ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ.
ವಯಸ್ಸಾದ ಮಹಿಳೆಯರನ್ನು ಪುರುಷರು ಹೆಚ್ಚು ಇಷ್ಟಪಡುತ್ತಾರೆ. ಹೆಚ್ಚು ಪ್ರಬುದ್ಧರಾಗಿರುವವರು ವಯಸ್ಸಾದ ಮಹಿಳೆಯರಿಗೆ ಆದ್ಯತೆ ನೀಡುತ್ತಾರೆ. ಇವರು ತಮ್ಮ ಆಲೋಚನೆಗಳನ್ನು ಸುಲಭವಾಗಿ ವ್ಯಕ್ತಪಡಿಸಲು ಮತ್ತು ಮುಕ್ತ ಸಂಭಾಷಣೆಗಳನ್ನು ಹೊಂದುವಲ್ಲಿ ಪ್ರವೀಣರಾಗಿರುತ್ತಾರೆ.
ತಮ್ಮಲ್ಲಿ ಮತ್ತು ತಮ್ಮ ಸಾಮರ್ಥ್ಯಗಳಲ್ಲಿ ವಿಶ್ವಾಸ ಹೊಂದಿರುವ ಪುರುಷರು ವಯಸ್ಸಾದ ಮಹಿಳೆಯೊಂದಿಗೆ ಪ್ರೀತಿಯಲ್ಲಿ ಬೀಳುವುದನ್ನು ಸಮಸ್ಯೆಯಾಗಿ ಪರಿಗಣಿಸುವುದಿಲ್ಲ. ಆತ್ಮವಿಶ್ವಾಸವುಳ್ಳವರು ಸಾಮಾನ್ಯವಾಗಿ ವಯಸ್ಸಾದ ಮಹಿಳೆಯರತ್ತ ಬೇಗ ಆಕರ್ಷಕರಾಗುತ್ತಾರೆ. ಅವರು ಏನೇ ಆಗಿರಲಿ, ಅವರು ತುಂಬಾ ಆರಾಮದಾಯಕವಾಗುತ್ತಾರೆ. ಇತರರಿಗಾಗಿ ಬದಲಾಗಬೇಕೆಂಬ ಕಿರಿಕಿರಿ ಇರುವುದಿಲ್ಲ. ಆ ವಿಶ್ವಾಸವನ್ನು ಅವರು ಇತರರಿಗೆ ರವಾನಿಸುತ್ತಾರೆ.
ವಯಸ್ಸಾದ ಮಹಿಳೆಯರನ್ನು ಇಷ್ಟಪಡುವ ಪುರುಷರು ಸ್ವತಂತ್ರವಾಗಿರಲು ಇಷ್ಟಪಡುತ್ತಾರೆ. ಅವರು ಇಷ್ಟಪಟ್ಟವರೊಂದಿಗೆ ಮುಕ್ತವಾಗಿರಲು ಇಷ್ಟಪಡುತ್ತಾರೆ. ಏಕಾಂತವನ್ನು ಇಷ್ಟಪಡುವ ಈ ಪುರುಷರು ವಯಸ್ಸಾದ ಮಹಿಳೆಯೊಂದಿಗೆ ಅನ್ವೇಷಣೆಗಳು, ಪ್ರವಾಸ, ಹವ್ಯಾಸಗಳನ್ನು ಮಾಡಿಕೊಂಡಿರುತ್ತಾರೆ. ಅಂದರೆ ಅವರು ಯಾವುದೇ ಸ್ಥಳ ಅಥವಾ ಪರಿಸರದಲ್ಲಿ ಬೆರೆಯಲು ಹಿಂಜರಿಯುವುದಿಲ್ಲ. ಇಂಡಿಪೆಂಡೆಂಟ್ ಆಗಿರುವ ಮಹಿಳೆಯನ್ನು ಪ್ರೀತಿಸಲು ಬಯಸುತ್ತಾರೆ.












Click it and Unblock the Notifications