ಡ್ರಾಪ್ ನೀಡುತ್ತೇನೆಂದು ಮಹಿಳೆ ಹತ್ತಿಸಿಕೊಂಡು ದಾರಿ ಮಧ್ಯೆ ಈತ ಮಾಡಿದ್ದೇನು?
ಚಿಕ್ಕಮಗಳೂರು, ಡಿಸೆಂಬರ್ 27: ಡ್ರಾಪ್ ನೀಡುತ್ತೇನೆಂದು ಮಹಿಳೆಯನ್ನು ಬೈಕ್ ಗೆ ಹತ್ತಿಸಿಕೊಂಡ ಯುವಕ ಆಕೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮದ ಸಮೀಪ ಘಟನೆ ನಡೆದಿದೆ. ಮೆಣಸೆಯಿಂದ ಶೃಂಗೇರಿಗೆ ಡ್ರಾಪ್ ನೀಡುವುದಾಗಿ ಹೇಳಿದ ಆರೋಪಿ ಅಭಿ ಮಹಿಳೆಯನ್ನು ಹತ್ತಿಸಿಕೊಂಡಿದ್ದಾನೆ. ದಾರಿಯಲ್ಲಿ ಸಾಗುತ್ತಾ ಕೊರಡಕಲ್ಲು ಬಳಿ ಬೈಕ್ ನಿಲ್ಲಿಸಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಮಹಿಳೆ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಅಭಿ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಅಭಿ ಶೃಂಗೇರಿ ತಾಲೂಕಿನ ಕಿಕ್ರೆ ಗ್ರಾಮದವನಾಗಿದ್ದಾನೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications