ಕೇದಾರನಾಥ ಯಾತ್ರೆ ವೇಳೆ ಅಸ್ವಸ್ಥ: ಚಿಕ್ಕಮಗಳೂರು ಮೂಲದ ಯುವಕ ಸಾವು

ಚಿಕ್ಕಮಗಳೂರು, ಆಗಸ್ಟ್‌ 1: ಕರ್ನಾಟಕದಿಂದ ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕ ಸಾವನ್ನಪ್ಪಿದ್ದಾರೆ. ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದ ಗಿರೀಶ್ ( 25) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.

ಈ ಬಾರಿ ಕರ್ನಾಟಕದಿಂದ ನೂರಾರು ಸಂಖ್ಯೆಯಲ್ಲಿ ಕೇದಾರನಾಥ ಯಾತ್ರೆಗೆ ತೆರಳಿದ್ದಾರೆ. ಅದರಂತೆ, ಕಳೆದ ವಾರ ಗಿರೀಶ್ ಕೂಡ ಮೂಡಿಗೆರೆಯಿಂದ ಕೇದಾರನಾಥ ಯಾತ್ರೆ ಕೈಗೊಂಡಿದ್ದರು. ಹವಾಮಾನದ ವೈಪರ್ಯತೆ ಹಾಗೂ ಪ್ರಯಾಣ ಆಯಾಸ ಕಾರಣಗಳಿಂದ ಗಿರೀಶ್ ಕೇದಾರನಾಥದಲ್ಲಿ ಅಸ್ವಸ್ಥಗೊಂಡಿದ್ದರು. ದುರಾದೃಷ್ಟವಶಾತ್‌ ಗಿರೀಶ್ ಕೇದಾರನಾಥದಲ್ಲಿಯೇ ಸಾವನ್ನಪ್ಪಿದ್ದಾರೆ. ಸದ್ಯ ಗಿರೀಶ್ ಅವರ ಮೃತ ದೇಹವನ್ನು ರಿಷಿಕೇಶ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

youth-from-chikkamagaluru-who-died

ಇನ್ನು ಗಿರೀಶ್ ಮೃತಪಟ್ಟಿರುವ ಬಗ್ಗೆ ಕೇದಾರನಾಥ ಪೊಲೀಸರು ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದಲ್ಲಿರುವ ಗಿರೀಶ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಮಗನನ್ನು ಕಳೆದುಕೊಂಡು ಗಿರೀಶ್‌ ಪೋಷಕರು ಕಂಗಾಲಾಗಿದ್ದಾರೆ.

ಮಳೆಗೆ ಮನೆ ಗೋಡೆ ಕುಸಿತ, ವ್ಯಕ್ತಿ ಸಾವು

ಹಾಸನ: ನಿರಂತರ ಮಳೆಗೆ ಮನೆ ಗೋಡೆ ಕುಸಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಹೋಬಳಿ ಗುಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗರಾಜು (52) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಳೆಗೆ ನಾಗರಾಜು ಅವರ ಮನೆಯ ಗೋಡೆ ಸಂಪೂರ್ಣ ಶಿಥಿಲಗೊಂಡಿತ್ತು. ಭಾನುವಾರ ಸಂಜೆ ತಮ್ಮ ಮನೆಯ ಪಕ್ಕದಲ್ಲಿ ಸ್ವಚ್ಛತೆ ಮಾಡುತ್ತಿದ್ದಾಗ ಮನೆಯ ಗೋಡೆ ಏಕಾಏಕಿ ನಾಗರಾಜು ಮೇಲೆ ಕುಸಿದು ಬಿದ್ದಿದೆ. ಈ ವೇಳೆ ನಾಗರಾಜು ಪತ್ನಿ ಲಕ್ಷ್ಮಮ್ಮ ಹಾಗೂ ಪುತ್ರ ಧರ್ಮರಾಜು ಕೂಲಿ ಕೆಲಸಕ್ಕೆ ತೆರಳಿದ್ದರು.

ಪತ್ನಿ ಹಾಗೂ ಪುತ್ರ ಕೆಲಸದಿಂದ ವಾಪಾಸ್ ಬಂದ ವೇಳೆ ನಾಗರಾಜ್ ಗೋಡೆಯಡಿ ಸಿಲುಕಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+