ಚಿಕ್ಕಮಗಳೂರಿನಲ್ಲಿ ಆತಂಕ ಸೃಷ್ಟಿಸಿದ ಅನಾಮಧೇಯ ಸೂಟ್ ಕೇಸ್

ಚಿಕ್ಕಮಗಳೂರು, ಮೇ 13: ನಗರದ ಬಸವನಹಳ್ಳಿ ರಸ್ತೆಯಲ್ಲಿ ಬಿದ್ದಿದ್ದ ಅನಾಮಧೇಯ ಸೂಟ್ ಕೇಸ್ ಒಂದು ಕೆಲ ಸಮಯ ಆತಂಕ‌ ಸೃಷ್ಟಿಸಿತ್ತು.

ಅಪರಿಚಿತ ಮಹಿಳೆಯೊಬ್ಬರು ಸೂಟ್ ಕೇಸ್ ಅನ್ನು‌ ಬಸವನಹಳ್ಳಿ ರಸ್ತೆಯ ಮರದ ಬಳಿ ಇಟ್ಟು ಹೋಗಿರುವುದು ಸಮೀಪದ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಟಿ.ವಿ.ಯಿಂದ ಗಮನಿಸಲಾಯಿತು. ಈ ಸೂಟ್ ಕೇಸ್ ಕಂಡು ಸಾರ್ವಜನಿಕರು ಕೆಲಕಾಲ ಆತಂಕಗೊಂಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಶ್ವಾನ ದಳ ಸಿಬ್ಬಂದಿ ಹಾಗೂ ಬಾಂಬ್ ಸ್ಕ್ವಾಡ್ ನೇತೃತ್ವದಲ್ಲಿ ಸೂಟ್ ಕೇಸ್ ಅನ್ನು ನಗರದ ಡಿಆರ್ ಮೈದಾನಕ್ಕೆ ಸೂಕ್ಷ್ಮವಾಗಿ ರವಾನಿಸಿದರು.

Unknown Suitcase Created Anxiety Among People In Basavanahalli

ಸೂಟ್ ಕೇಸ್ ಅನ್ನು ಡಿ ಆರ್ ಮೈದಾನದಲ್ಲಿ ಜೆಸಿಬಿ ಮೂಲಕ ಗುಂಡಿ ತೆಗೆದು ಪರಿಶೀಲನೆ ನಡೆಸಿದರು. ಮಂಗಳೂರಿನಿಂದ ಪರಿಣಿತರ ತಂಡ ಬಂದ ನಂತರ ಸೂಟ್ ಕೇಸ್ ಅನ್ನು ಹೆಚ್ಚಿನ‌ ಪರಿಶೀಲನೆ ನಡೆಸುವುದಾಗಿ ತಿಳಿದು ಬಂತು. ಸ್ಥಳದಲ್ಲಿಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+