• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿನಯ್ ಗುರೂಜಿ ವಿರುದ್ಧ ಪೋಸ್ಟ್; ಕ್ಷಮೆ ಯಾಚಿಸಿದ ಆರೋಪಿಗಳು

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಜೂನ್ 7: ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದವರು ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸಿದ್ದಾರೆ.

ನಾಗಮಂಡಲ ಮಾಡಲು ಸುಬ್ರಮಣ್ಯ ದೇವರು ಬಂದು ಹೇಳಿದ್ನಾ: ವಿನಯ್ ಗುರೂಜಿ ವಿವಾದದ ಹೇಳಿಕೆ

ಕೆಲವೇ ದಿನಗಳ ಹಿಂದೆ, ಭೂತಾರಾಧನೆ, ನಾಗಾರಾಧನೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿನಯ್ ಗುರೂಜಿ ವಿರುದ್ಧ ಕರಾವಳಿ ಭಾಗದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಒಂದೂವರೆ ಎರಡು ಕೋಟಿ ರೂಪಾಯಿ ಖರ್ಚು ಮಾಡಿ ನಾಗಮಂಡಲ ಮಾಡುವ ಬದಲು ಜನರಿಗೆ ರಸ್ತೆ ಮಾಡಬಾರದಾ ಎನ್ನುವ ಹೇಳಿಕೆಗೆ ವಿರೋಧ ವ್ಯಕ್ತವಾಗಿದ್ದು, ಈ ಕುರಿತು ವಿನಯ್ ಗುರೂಜಿ ತೇಜೋವಧೆ ಮಾಡುವಂಥ ಪೋಸ್ಟ್ ಗಳನ್ನು ಹಾಕಲಾಗಿತ್ತು. ಮಂಗಳೂರು ಮೂಲದ ವ್ಯಕ್ತಿ ಸ್ವಾಮೀಜಿ ತೇಜೋವಧೆ ಮಾಡಿ ಪೋಸ್ಟ್ ಮಾಡಿದ್ದು ಸಾಕಷ್ಟು ಚರ್ಚೆಯಾಗಿತ್ತು. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳೂ ಬಂದಿದ್ದವು.

ಇದಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಭಕ್ತರು ಪೋಸ್ಟ್ ಮಾಡಿದವರ ವಿರುದ್ಧ ದೂರು ದಾಖಲಿಸಿದ್ದರು. ಇಂದು ಕೊಪ್ಪದ ಗೌರಿಗದ್ದೆ ಸ್ವರ್ಣಪೀಠೀಕೇಶ್ವರಿ ದತ್ತಾಶ್ರಮಕ್ಕೆ ಬಂದ ಆರೋಪಿಗಳು ಗುರೂಜಿ ಬಳಿ ಕ್ಷಮೆ ಯಾಚಿಸಿದ್ದಾರೆ.

ಮೋದಿ ಇನ್ನೂ 8 ವರ್ಷ ಪ್ರಧಾನಿಯಾಗಿರುತ್ತಾರೆ:ಮತ್ತೆ ಭವಿಷ್ಯ ನುಡಿದ ವಿನಯ್ ಗುರೂಜಿ

ವಿನಯ್ ಗುರೂಜಿ ನಡೆದಾಡುವ ದೇವರು ಎಂದೇ ಖ್ಯಾತಿ. ರಾಜ್ಯದಲ್ಲೆಡೆ ಲಕ್ಷಾಂತರ ಭಕ್ತರನ್ನು ಹೊಂದಿರುವ ವಿನಯ್ ಗುರೂಜಿ, ಈಚೆಗೆ ಮೋದಿ ಪ್ರಧಾನಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು.

English summary
in relation to disgusting post about vinay guruji in social media, accused have apolized vinay guruji today. vinay guruji gave a controvercial statement regarding bhootharathane and nagaradhane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X