ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೇಜಸ್ವಿ ಸೂರ್ಯ ವಿಮಾನದ ತುರ್ತು ಬಾಗಿಲು ತೆರೆದಿಲ್ಲ, ಇದಕ್ಕೆ ನಾನೇ ಸಾಕ್ಷಿ- ಅಣ್ಣಾಮಲೈ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 19 :ಸಂಸದ ತೇಜಸ್ವಿ ಸೂರ್ಯ ಅವರು ಬುದ್ಧಿವಂತ ಮತ್ತು ಜವಾಬ್ದಾರಿ ಸ್ಥಾನದಲ್ಲಿರುವವರು. ಅವರು ವಿಮಾನದ ತರ್ತು ಬಾಗಿಲು ಓಪನ್ ತೆರೆದಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಿಳಿಸಿದರು.

ಗುರುವಾರ ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ ಮುಖಂಡರು ಸಣ್ಣ ವಿಚಾರವನ್ನು ದೊಡ್ಡದು ಮಾಡಿದ್ದಾರೆ. ಕಾಂಗ್ರೆಸ್‌ನವರಿಗೆ ಮಾತನಾಡಲು ಬೇರೆ ವಿಷಯವಿಲ್ಲದ ಕಾರಣ ಈ ವಿಚಾರವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದರು.

ತಮಿಳುನಾಡಿನಲ್ಲಿ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರು ವಿಮಾನದ ಎಮರ್ಜೆಸ್ಸಿ ಡೋರ್ ತೆರೆದಿದ್ದಾರೆಂದು ಆರೋಪಿಸಿರುವುದು ಸತ್ಯಕ್ಕೆ ದೂರವಾದದ್ದು, ಅವರು ಪ್ರಯಾಣಿಸುತ್ತಿದ್ದ ಎಟಿಆರ್ 72 ವಿಮಾನ ಸಣ್ಣ ವಿಮಾನವಾಗಿದ್ದು, ಸಣ್ಣ ಫ್ಲೈಟ್‌ನಲ್ಲಿ ಎಮರ್ಜೆಸ್ಸಿ ಡೋರ್ ವಿಮಾನದ ಮುಂಭಾಗದಲ್ಲಿರುತ್ತದೆ. ಸೀಟುಗಳು ಸಣ್ಣದಿರುತ್ತದೆ. ಅವರು ಎಮರ್ಜೆಸ್ಸಿ ಡೋರ್ ಮೇಲೆ ಕೈ ಇಟ್ಟುಕೊಂಡು ಕುಳಿದ್ದರಿಂದ ಡೋರ್ ಸ್ವಲ್ಪ ಮುಂದಕ್ಕೆ ಬಂದಿತ್ತು. ಡೋರ್‍ನ ಬ್ಲೀಡಿಂಗ್ ಸ್ವಲ್ಪ ಓಪನ್ ಆಗಿದ್ದರಿಂದ ವಿಮಾನ ಸಿಬ್ಬಂದಿಯ ಗಮನಕ್ಕೆ ತಂದು ಇನ್ಸಿಡೆಂಟ್ ರಿಪೋರ್ಟ್ ನೀಡಿದ್ದಾರೆ ಎಂದು ತಿಳಿಸಿದರು.

Tejasvi Surya Didnot Open Emergency Door Says Annamalai

ಘಟನೆ ಸಂಬಂಧ ಅವರು ವಿಮಾನ ಸಂಸ್ಥೆಯ ಕ್ಷಮೆಯಾಚನೆ ಮಾಡಿಲ್ಲ. ತುರ್ತು ಬಾಗಿಲಿನಲ್ಲಿದ್ದ ಸಮಸ್ಯೆ ಕಾರಣಕ್ಕೆ ವಿಮಾನ ತೆರಳುವುದು 1 ಗಂಟೆಗಳ ಕಾಲ ವಿಳಂಬವಾಗಿದ್ದರಿಂದ ತೇಜಸ್ವಿಸೂರ್ಯ ಅವರು ಪ್ರಯಾಣಿಕರಲ್ಲಿ ಕ್ಷಮೆ ಕೋರಿದ್ದಾರೆ. ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಸಂಬಂಧ ಇಂಡಿಗೋ ಸಂಸ್ಥೆ ಸ್ಪಷ್ಟನೆಯನ್ನು ನೀಡಿದ್ದಾರೆ ಎಂದರು.

ತೇಜಸ್ವಿ ಸೂರ್ಯ ಎಮರ್ಜೆಸ್ಸಿ ಡೋರ್ ಓಪನ್ ಮಾಡಿಲ್ಲ. ಡೋರ್‍ನಲ್ಲಿದ್ದ ಸಮಸ್ಯೆಯ ಬಗ್ಗೆ ಸಿಬ್ಬಂದಿಯ ಗಮನಕ್ಕೆ ತಂದಿದ್ದು, ಪೈಲೆಟ್ ಬಾಗಿಲು ಸರಿಪಡಿಸಿದ್ದಾರೆ. ಇದಕ್ಕೆ ನಾನೇ ಸಾಕ್ಷಿ. ಕರ್ನಾಟಕದ ಕಾಂಗ್ರೆಸ್‌ನವರು ಜನಪರ ವಿಚಾರಗಳ ಬಗ್ಗೆ ಮಾತನಾಡುತ್ತಿಲ್ಲ. ತೇಜಸ್ವಿ ಸೂರ್ಯ ವಿಚಾರ ಇಟ್ಟುಕೊಂಡು ಮೂರು ದಿನಗಳಿಂದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

English summary
MP Tejasvi Surya didnot open emergency door, he didn’t apologise said Tamilnadu BJP president Annamalai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X