ಫಲಿತಾಂಶ ನನ್ನ ಪರವಾಗಿರಲಿದೆ; ನಿಖಿಲ್ ಕುಮಾರಸ್ವಾಮಿ
Recommended Video
ನಾಳೆಯ ಫಲಿತಾಂಶ ನನ್ನ ಪರವಾಗಿ ಬರುತ್ತದೆ ಎಂಬ ವಿಶ್ವಾಸ ನನಗಿದೆ.
ಚಿಕ್ಕಮಗಳೂರು, ಮೇ 22: ನಾಳೆಯ ಫಲಿತಾಂಶ ನನ್ನ ಪರವಾಗಿ ಬರುತ್ತದೆ ಎಂಬ ವಿಶ್ವಾಸ ನನಗಿದೆ. ಈ ಹಿನ್ನೆಲೆಯಲ್ಲಿ, ತಾಯಿ ಶಾರದಾಂಬೆಯ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ನಿಖಿಲ್ ಕುಮಾರ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾನು ಯಾವುದೇ ಸಮೀಕ್ಷೆಗಳನ್ನು ಪರಿಗಣಿಸುವುದಿಲ್ಲ. 2004ರಲ್ಲಿ ಎರಡು ಸೀಟ್ ಜೆಡಿಎಸ್ ಬರುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದವು. ಆಗ 58 ಸ್ಥಾನಗಳನ್ನು ಜೆಡಿಎಸ್ ಪಡೆದಿತ್ತು. ಈಗ ನಾಲ್ಕು ಸಂಸ್ಥೆಗಳು ನನ್ನ ಪರವಾಗಿ ಹಾಗೂ ಆರು ಸಂಸ್ಥೆಗಳು ವಿರೋಧವಾಗಿ ಸಮೀಕ್ಷೆ ನಡೆಸಿವೆ. ಆದರೆ ನಾನು ನಾಲ್ಕನ್ನೂ ಸ್ವೀಕರಿಸುವುದಿಲ್ಲ ಆರನ್ನೂ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.













Click it and Unblock the Notifications