Ram Mandir; ಚಿಕ್ಕಮಗಳೂರಲ್ಲಿ ಅಪರೂಪದ ಶ್ರೀರಾಮನ ವಿಗ್ರಹ ಪತ್ತೆ
ಚಿಕ್ಕಮಗಳೂರು, ಜನವರಿ 21: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಜನವರಿ 22ರ ಸೋಮವಾರ ಶ್ರೀ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಇಂತಹ ಸಂದರ್ಭದಲ್ಲಿಯೇ ದೇಶದಲ್ಲೇ ಅಪರೂಪದ ಶ್ರೀರಾಮನ ವಿಗ್ರಹ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪತ್ತೆಯಾಗಿದೆ.
ಶ್ರೀ ರಾಮನ ಎಡತೊಡೆಯ ಮೇಲೆ ಸೀತೆ ಕೂತಿರುವುದರ ಜೊತೆಗೆ ಆಂಜನೇಯ ನಮಸ್ಕರಿಸುತ್ತಿರುವ ಪುರಾತನ ಕಾಲದ ವಿಶೇಷವಾದ ವಿಗ್ರಹವೊಂದು ಜಿಲ್ಲೆಯ ತರೀಕೆರೆಯಲ್ಲಿ ಪತ್ತೆಯಾಗಿದೆ. ಸುಮಾರು 70 ವರ್ಷಗಳ ಹಿಂದೆ ತರೀಕೆರೆ ತಾಲೂಕಿನ ಚಿಕ್ಕಾತೂರು ಮಾರ್ಗದಲ್ಲಿನ ದಳವಾಯಿ ಕೆರೆಯ ಏರಿ ದುರಸ್ಥಿ ಮಾಡಲು ಕೆರೆ ಏರಿ ಅಗೆಯುವಾಗ ಈ ಮೂರ್ತಿ ಸಿಕ್ಕಿದೆ.
ದೇಶದಲ್ಲೇ ಎಲ್ಲೂ ಕಾಣಸಿಗದ ರಾಮನ ಎಡತೊಡೆಯ ಮೇಲೆ ಸೀತಾ ಮಾತೆ ಕುಳಿತಿರುವ ವಿಶೇಷ ಪುರಾತನ ಕಾಲದ ಪಟ್ಟಾಭಿರಾಮನ ವಿಗ್ರಹ ಇದಾಗಿದೆ. ತರೀಕೆರರೆ ಪಟ್ಟಣದ ತುದಿಪೇಟೆಯಲ್ಲಿರುವ ದೇವಾಲಯದಲ್ಲಿ ಈ ವಿಗ್ರಹವಿದೆ.
1962ರ ನವೆಂಬರ್ ತಿಂಗಳಿನಲ್ಲಿ ಸಿಕ್ಕ ಈ ಮೂರ್ತಿಯನ್ನು 1982ರ ಮಾರ್ಚ್‍ನಲ್ಲಿ ಪ್ರತಿಷ್ಠಾಪನೆ ಮಾಡಿದ್ದರು. ಅಂದಿನಿಂದಲೂ ಸೀತೆಯನ್ನು ತೊಡೆ ಮೇಲೆ ಕೂರಿಸಿಕೊಂಡಿರುವ ಈ ಪಟ್ಟಾಭಿರಾಮನಿಗೆ ಪೂಜೆ, ಪುನಸ್ಕಾರ ಕ್ರೈಂಕರ್ಯಗಳು ನಿರಂತರವಾಗಿ ನಡೆದುಕೊಂಡು ಬಂದಿದೆ.

ರಾಮ ನಾಮ ಜಪ ಬರೆದ ಸ್ವಾಮಿ; ಚಿಕ್ಕಮಗಳೂರು ಜಿಲ್ಲೆಯ ಪರಮೇಶ್ವರನ್ ಸ್ವಾಮಿ ಎಂಬುವವರು 1 ಕೋಟಿ 20 ಲಕ್ಷ ಸಲ ರಾಮ ನಾಪ ಜಪ ಬರೆದಿದ್ದಾರೆ. ಪರಮೇಶ್ವರನ್ ಸ್ವಾಮಿ 2007 ರಿಂದ ನಿರಂತರವಾಗಿ ರಾಮನಾಮ ಜಪ ಬರೆಯುತ್ತಿದ್ದದ್ದಾರೆ.
89 ವರ್ಷದ ಪರಮೇಶ್ವರನ್ ಸ್ವಾಮಿ ಕಡೂರು ಪಟ್ಟಣದ ಅಯ್ಯಪ್ಪ ಸ್ವಾಮಿ ದೇಗುಲದ ಅರ್ಚಕರು. ಅಯೋಧ್ಯೆದಲ್ಲಿ ರಾಮ ಪ್ರಾಣ ಪ್ರತಿಷ್ಟಾಪನೆ ವೇಳೆ 1.20. ಕೋಟಿ ರಾಮನಾಪಜಪವನ್ನು 19 ಪುಸ್ತಕದಲ್ಲಿ ಬರೆದಿದ್ದಾರೆ.
ರಾಮನಾಮ ಜಪ ಬರೆದ ಪರಮೇಶ್ವರನ್ ಸ್ವಾಮಿ ಅವರು ಪುಸ್ತಕ ಹಾಗೂ ಬರೆದ ಪೆನ್ನುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಪರಮೇಶ್ವರನ್ ಸ್ವಾಮಿ 17 ವರ್ಷದಲ್ಲಿ 1.20 ಕೋಟಿ ರಾಮನಾಮ ಜಪ ಬರೆದಿದ್ದಾರೆ.
ದೇವಾಲಯ ಸ್ವಚ್ಛತಾ ಕಾರ್ಯ; ಸೋಮವಾರ ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ಹಿನ್ನೆಲೆ ಹಾಸನದಲ್ಲಿ ಹಾಸನಾಂಬ ದೇವಾಲಯವನ್ನು ಬಿಜೆಪಿ ನಾಯಕ, ಮಾಜಿ ಶಾಸಕ ಪ್ರೀತಂಗೌಡ ಕಾರ್ಯಕರ್ತರೊಂದಿಗೆ ಸ್ವಚ್ಛಗೊಳಿಸಿದರು.
ಪ್ರಧಾನಿ ನರೇಂದ್ರ ಮೋದಿಯ ಕರೆಯಂತೆ ದೇಶದಲ್ಲಿ ಎಲ್ಲಾ ದೇವಾಲಯಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಹಾಸನದಲ್ಲಿ ಸೋಮವಾರ 800ಕ್ಕೂ ಹೆಚ್ಚು ದೇವಾಲಯಗಳಲ್ಲಿ ಹೋಮಹವನ, ವಿಶೇಷ ಪೂಜೆಗಳು ನಡೆಯುತ್ತವೆ.
ಸಂಜೆ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನಕ್ಕೆ ಯೋಜನೆ ರೂಪಿಸಲಾಗಿದೆ. ರಸಮಂಜರಿ ಕಾರ್ಯಕ್ರಮ, ಭಕ್ತಿಪೂರ್ವಕವಾದ ಅನೇಕ ಕಾರ್ಯಕ್ರಮಗಳನ್ನು ಹಿಂದೂ ಸಮಾಜ ಆಯೋಜನೆ ಮಾಡಿದೆ.
ಪ್ರೀತಂಗೌಡ ಮಾತನಾಡಿ, "ನಾನೂ ಕೂಡಾ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ. 550 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಆ ಪವಿತ್ರ ಕಾರ್ಯವನ್ನು ಸಾಕ್ಷೀಕರಿಸಲು ಇಡೀ ಹಿಂದೂ ಸಮಾಜ ಪ್ರಪಂಚದಾದ್ಯಂತ ಕಾತರದಿಂದ ಕಾಯುತ್ತಿದೆ" ಎಂದು ಹೇಳಿದರು.












Click it and Unblock the Notifications