ಮೂಡಿಗೆರೆಯ ಹಳ್ಳಿಗಳಲ್ಲಿ ನೆಮ್ಮದಿ ಕೆಡಿಸಿದ ಕ್ವಾರಂಟೈನ್ ಜಗಳ
ಚಿಕ್ಕಮಗಳೂರು, ಮೇ 21: ಚಿಕ್ಕಮಗಳೂರಿನಲ್ಲಿ ವೈದ್ಯ, ಗರ್ಭಿಣಿ ಸೇರಿದಂತೆ ಐವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಜಿಲ್ಲೆಯ ಜನರ ನಿದ್ದೆಗಡಿಸಿದೆ. ಆದರೆ ಇದೇ ಸಮಯದಲ್ಲಿ, ಕ್ವಾರಂಟೈನ್ ವಿಚಾರದಲ್ಲೂ ಒಳಜಗಳ ಆರಂಭವಾಗಿದೆ.
Recommended Video
ಮೂಡಿಗೆರೆಯ ಹಳ್ಳಿಗಳಲ್ಲಿ, ಕ್ವಾರೈಂಟೈನ್ ವಿಚಾರದಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ಒಳ ಜಗಳ ಆರಂಭವಾಗಿದೆ. ಬಡವರಿಗೆ ಒಂದು ಕಾನೂನು, ಶ್ರೀಮಂತರಿಗೆ ಒಂದು ಕಾನೂನು ಏಕೆ, ಕ್ವಾರಂಟೈನ್ ವಿಚಾರದಲ್ಲೂ ರಾಜಕೀಯ ಏಕೆ ಮಾಡುತ್ತಿದ್ದಾರೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಕೈಗೆ ಸೀಲ್ ಹಾಕಿಸಿಕೊಂಡ ಶ್ರೀಮಂತರಿಗೆ ಮನೆಯಲ್ಲಿ ಕ್ವಾರೈಂಟೈನ್ ಮಾಡಲಾಗಿದೆ. ಆದರೆ ಬಡವರಿಗೆ ಸರ್ಕಾರಿ ಕಟ್ಟಡಗಳಲ್ಲಿ ಕ್ವಾರೈಂಟೈನ್ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಪೊಲೀಸರು ತಮ್ಮ ಬಲ ಪ್ರಯೋಗಿಸಿ ಕ್ವಾರಂಟೈನ್ ಮಾಡುತ್ತಿದ್ದಾರೆ. ಕ್ವಾರೈಂಟೈನ್ ವಿಚಾರದಲ್ಲೂ ಬೇಧಭಾವ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾಳೆಹೊನ್ನೂರಿನಲ್ಲಿ ಸಲೂನ್ ಗಳು ಬಂದ್: ಮುಂಬೈನಿಂದ ಬಂದವರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಸವಿತಾ ಸಮಾಜ, ಬಾಳೆಹೊನ್ನೂರಿನಲ್ಲಿ ಸಲೂನ್ ಬಂದ್ ಮಾಡಲು ಸೂಚಿಸಿದೆ. ಕೆಲಸದ ವೇಳೆ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಜೂನ್ 3ರ ವರೆಗೆ ಕೆಲಸ ನಿರ್ವಹಿಸದಿರಲು ಸೂಚನೆ ನೀಡಲಾಗಿದೆ.












Click it and Unblock the Notifications