ಸಂಕಷ್ಟದ ಸಮಯದಲ್ಲಿ ನಮ್ಮ ಕುಟುಂಬದ ಕೈ ಹಿಡಿದ ಜಿಲ್ಲೆ ಚಿಕ್ಕಮಗಳೂರು-ಪ್ರಿಯಾಂಕಾ ಗಾಂಧಿ
ಚಿಕ್ಕಮಗಳೂರು, ಏಪ್ರಿಲ್ 26: ನನ್ನ ಅಜ್ಜಿಯ ಸಂಕಷ್ಟದ ಕಾಲದಲ್ಲಿ ಚಿಕ್ಕಮಗಳೂರು ಜನ ನನ್ನ ಅಜ್ಜಿಯ ಕೈ ಹಿಡಿದಿದ್ದರು, ಈಗ ರಾಜ್ಯದ ಜನ ಕಾಂಗ್ರೆಸ್ ಸಂಕಷ್ಟ ಸಮಯದಲ್ಲಿ ಕಾಂಗ್ರೆಸ್ ಕೈ ಹಿಡಿಯಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಚಿಕ್ಕಮಗಳೂರು ಜನತೆಯಲ್ಲಿ ಮನವಿ ಮಾಡಿದರು.
ಚಿಕ್ಕಮಗಳೂರಿನಲ್ಲಿ ಬಾಳೆಹೊನ್ನೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಬಹಿರಂಗ ಸಮಾವೇಶದಲ್ಲಿ ಟಿ.ಡಿ.ರಾಜೇಗೌಡ ಪರ ಮತಯಾಚನೆ ಮಾತನಾಡಿದ ಅವರು, ಅಂದು ಸಂಕಷ್ಟದಲ್ಲಿದ್ದಾಗ ಚಿಕ್ಕಮಗಳೂರು ಜನರು ನನ್ನ ಅಜ್ಜಿಯ ಕೈ ಹಿಡಿದಿದರು. ಈಗಲೂ ನಮ್ಮ ಕುಟುಂಬ ಸಂಕಷ್ಟದ ಸಮಯವನ್ನು ಅನುಭವಿಸುತ್ತಿದೆ. ಚಿಕ್ಕಮಗಳೂರನ್ನು ನಾನು ಯಾವತ್ತಿಗೂ ಮರೆಯಲ್ಲ ಎಂದರು.

ಮಳೆ ಬರ್ತಾ ಇದೆ ನೋಡಿ ಇದು ಭಗವಂತನ ಆಶೀರ್ವಾದ. ಅಜ್ಜಿ ಬಂದಾಗ ಹೇಗಿತ್ತೋ, ಅದೇ ರೀತಿ ಸೌಂದರ್ಯ ಈಗಲೂ ಇದೆ. ಚಿಕ್ಕಮಗಳೂರನ್ನು ಜೀವಮಾನದಲ್ಲಿ ನಾನು ಯಾವತ್ತು ಮರೆಯಲ್ಲ ಎಂದು ಹೇಳಿದರು. ಪ್ರಿಯಾಂಕಾ ಗಾಂಧಿ ಭಾಷಣದ ವೇಳೆ ಮಳೆಜಬ ಬಂದಿದ್ದು, ಜನರು ಮಳೆ ಲೆಕ್ಕಿಸದೇ ಭಾಷಣ ಕೇಳಿದ್ದಾರೆ. ಈ ವೇಳೆ ಪ್ರಿಯಾಂಕಾ ಗಾಂಧಿ ನನ್ನ ಸಹೋದರಿಯರು ಮಳೆಯಲ್ಲಿ ನೆನೆದರೂ ಇಲ್ಲೇ ಇದ್ದೀರಾ. ನಿಮಗೆ ತುಂಬಾ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ರಾಹುಲ್ ಗಾಂಧಿ ಮೇಲೆ ಸುಳ್ಳು ಕೇಸ್ ಹಾಕಿ ಲೋಕಸಭೆಯಿಂದ ಹೊರಹಾಕಿದ್ದಾರೆ ಎಂದ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಮತ್ತೆ ಲೋಕಸಭಾ ಸದಸ್ಯರಾಗಿ ಬರುತ್ತಾರಡ ಎನ್ನುವ ವಿಶ್ವಾಸ ನಮಗೆ ಇದೆ. ಪರಶಿವನ ಆಶೀರ್ವಾದ ಇದೆ. ಸತ್ಯಕ್ಕೆ ಜಯ ಸಿಕ್ಕೆ ಸಿಗುತ್ತದೆ. ಕರ್ನಾಟಕದ ಚುನಾವಣೆ ಸತ್ಯ ಮತ್ತು ಜಯದ ಹೋರಾಟ. ಒಂದು ಮಾತು ಹೇಳ್ತೇನೆ, ನಮಗೆ ಎಲ್ಲ ಕಡೆ ಮೋಸ ಆಗ್ತಿದೆ. ನಿಮ್ಮ ಮತವನ್ನು ನೀಡಿ ವಿಶ್ವಾಸ ತುಂಬಿ. ಕರ್ನಾಟಕದಲ್ಲಿ ಹೇಳುವವರು ಕೇಳುವವರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಜನರಲ್ಲಿ ಮನವಿ ಮಾಡಿದರು.

ಕರ್ನಾಟಕ ಸ್ವಾಭಿಮಾನದ ರಾಜ್ಯ
ಇದು ಕರ್ನಾಟಕ ಸ್ವಾಭಿಮಾನ ಪರಿಚಯ ಮಾಡುವಂತಹ ಸಮಯ ಎಂದ ಪ್ರಿಯಾಂಕಾ ಗಾಂಧಿ, ಕರ್ನಾಟಕ ಸ್ವಾಭಿಮಾನದ ರಾಜ್ಯ. ಈ ರಾಜ್ಯದ ಪರಿಸ್ಥಿತಿ ಏನು ಅಂತಾ ಪ್ರತಿಯೊಬ್ಬರಿಗೂ ಗೊತ್ತಿದೆ. ನಾವು ಈ ಪರಿಸ್ಥಿತಿಯನ್ನು ಬದಲಾಯಿಸುತ್ತೇವೆ. ನಾವು ನಿಮ್ಮಿಂದ ಲೂಟಿ ಮಾಡುವುದಿಲ್ಲ, ನಾವು ನಿಮ್ಮ ಹಣವನ್ನ ನಿಮಗೆ ವಾಪಸ್ ನೀಡುತ್ತೇವೆ. ಬೆಲೆ ಏರಿಕೆ ಕಡಿಮೆ ಮಾಡುತ್ತೇವೆ. ಕರ್ನಾಟಕವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ನಮ್ಮ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಬೇಕು ಎಂದು ಹೇಳಿದರು.
ಬಾಳೆಹೊನ್ನೂರು ಮಠಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಗಾಂಧಿ
ಚಿಕ್ಕಮಗಳೂರು ಜಿಲ್ಲೆಯ ಪ್ರವಾಸ ಕೈಗೊಂಡಿದ್ದ ಪ್ರಿಯಾಂಕಾ ಗಾಂಧಿ ಬಾಳೆಹೊನ್ನೂರು ಮಠಕ್ಕೆ ಭೇಟಿ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮಠಕ್ಕೆ ಭೇಟಿ ನೀಡಿದ ಅವರು ಮಠದ ಆವರಣದಲ್ಲಿರುವ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವೀರಭದ್ರೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ. ಗುರುಗಳು ಮಠದಲ್ಲಿ ಇರದ ಕಾರಣ ಆಶೀರ್ವಾದ ಪಡೆಯಲು ಸಾಧ್ಯವಾಗಲಿಲ್ಲ.












Click it and Unblock the Notifications