ಆಫ್ ರೋಡ್ rally; ಹೃದಯಾಘಾತದಿಂದ ಸಹ ಚಾಲಕ ಸಾವು
ಚಿಕ್ಕಮಗಳೂರು, ಆಗಸ್ಟ್ 31: ಆಫ್ ರೋಡ್ ಜಿಪ್ಸಿ rallyಯಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಘಾತದಿಂದ ಸಹ ಚಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಬಾಳೆಹೊನ್ನೂರು ಸಮೀಪ ಕಾಫಿ ತೋಟದಲ್ಲಿ ಜಿಪ್ಸಿ ಆಫ್ ರೋಡ್ rally ನಡೆಯುತ್ತಿದ್ದ ಸಂದರ್ಭ ಕಬ್ಬಿನಹಳ್ಳಿ ಅರವಿಂದ್ (43) ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ಬಾಳೆಹೊನ್ನೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಜಿಪ್ಸಿ rally ಹಮ್ಮಿಕೊಳ್ಳಲಾಗಿತ್ತು. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಎಸ್ಟೇಟ್ ನಲ್ಲಿ ಜಿಪ್ಸಿಗಳ ಚಾಲನಾ ವೇಳೆ ಈ ದುರ್ಘಟನೆ ನಡೆದಿದೆ.
ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.












Click it and Unblock the Notifications