ತನಗೆ ಕೊರೊನಾ ಇದೆ ಎಂದು ಆತಂಕ ತಂದ ಚಿಕ್ಕಮಗಳೂರು ವ್ಯಕ್ತಿ
ಚಿಕ್ಕಮಗಳೂರು, ಏಪ್ರಿಲ್ 29: ತನಗೆ ಕೊರೊನಾ ಇರುವುದಾಗಿ ಹೇಳಿಕೊಂಡು ವ್ಯಕ್ತಿಯೊಬ್ಬರು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
Recommended Video
ಮಗನ ಮದುವೆ ಅಂದುಕೊಂಡಂತೆ ನಡೆಯಲಿಲ್ಲ , ಹೀಗಾಗಿ 5 ವರೆ ಕೋಟಿ ವೆಚ್ಚದಲ್ಲಿ , ಲಕ್ಷದ 4 ಸಾವಿರ ಕುಟುಂಬಗಳಿಗೆ ಸಹಾಯ
ಚಿಕ್ಕಮಗಳೂರು ನಗರದ ಕಲ್ಲು ದೊಡ್ಡಿ ಶಾಂತಿನಗರ ಬಡಾವಣೆಯಲ್ಲಿ ವ್ಯಕ್ತಿಯೊಬ್ಬರು ಇಂದು, ನನಗೆ ಕೊರೊನಾ ಇದೆ ಹತ್ತಿರ ಬರಬೇಡಿ, ದಯಮಾಡಿ ನನ್ನ ಹತ್ತಿರ ಬರಬೇಡಿ ಎಂದು ಹೇಳಿಕೊಳ್ಳುತ್ತಾ ಆತಂಕ ಹುಟ್ಟಿಸಿದ್ದಾರೆ. ಈ ವ್ಯಕ್ತಿ ಕೊರೊನಾ ಎನ್ನುತ್ತಿದ್ದಂತೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಆಶಾ ಕಾರ್ಯಕರ್ತೆಯರು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆಗ, ಕೊರೊನಾ ಸೋಂಕಿನ ಲಕ್ಷಣ ನನಗಿದೆ ಎಂದು ವ್ಯಕ್ತಿ ಅಳಲು ತೋಡಿಕೊಂಡಿದ್ದು, ವ್ಯಕ್ತಿಯನ್ನು ಆಂಬುಲೈನ್ಸ್ ಮೂಲಕ ಸಿಬ್ಬಂದಿ ಆಸ್ಪತ್ರೆಗೆ ಕರೆತಂದಿದ್ದಾರೆ. ವ್ಯಕ್ತಿಯನ್ನು ಕೋವಿಡ್ 19 ಚಿಕಿತ್ಸಾ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.












Click it and Unblock the Notifications