ಕಾಫಿನಾಡಿನ ವೀಕೆಂಡ್ ಗೆ ಹುರುಪು ತಂದ ಆಫ್ ರೋಡ್ ಜೀಪ್ rally

ಚಿಕ್ಕಮಗಳೂರು, ಸೆಪ್ಟೆಂಬರ್ 14: ಕಾಫಿತೋಟಗಳ, ಕೆಸರು ರಸ್ತೆಯ ತಗ್ಗು ದಿಣ್ಣೆಗಳ ನಡುವೆ ಶರವೇಗದಲ್ಲಿ ಸಾಗುವ ಜೀಪುಗಳ ರೋಮಾಂಚನಕಾರಿ ಆಫ್ ರೋಡ್ rally ಚಿಕ್ಕಮಗಳೂರಿನಲ್ಲೇ ಫೇಮಸ್.

ಕೆಸರು ಮಯ ರಸ್ತೆಯನ್ನು ಸೀಳಿಕೊಂಡು ಮುನ್ನುಗ್ಗುವ ಜೀಪುಗಳು, ಹಸಿರ ನಡುವೆ ಬೆಟ್ಟಗುಡ್ಡಗಳನ್ನು ಏರಿ ಸ್ಪರ್ಧೆಗಿಳಿದ ಸವಾರರು... ಕೆಸರು, ಹಳ್ಳ ಕೊಳ್ಳ ಯಾವುದನ್ನೂ ಲೆಕ್ಕಿಸದೇ ನಡೆಯುವ, ಎದೆ ನಡುಗಿಸುವ ಆಫ್ ರೋಡ್ rally ಎಂದರೆ ಅದೇನೋ ಹುಮ್ಮಸ್ಸು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸುಂಕಸಾಲೆ, ದುರ್ಗದಹಳ್ಳಿ, ಮಧುಗುಂಡಿ ಸುತ್ತಮುತ್ತ ವೀಕೆಂಡ್ ನಲ್ಲಿ ನಡೆದ ಮೈ ನವಿರೇಳಿಸುವ ಜೀಪ್ rallyಯ ರೋಚಕ ದೃಶ್ಯಗಳು ಇವು.

 ಗಮನ ಸೆಳೆದ ದೈತ್ಯ ಜೀಪ್

ಗಮನ ಸೆಳೆದ ದೈತ್ಯ ಜೀಪ್

ಹೇಳಿಕೇಳಿ ಸಾಹಸಮಯ ಕ್ರೀಡೆಗಳಿಗೆ ಹೆಸರಾದ ಕಾಫಿನಾಡಿನಲ್ಲಿ ವೀಕೆಂಡ್ ನಡೆದ ಜೀಪ್ rally ಎಲ್ಲರ ಗಮನ ಸೆಳೆಯಿತು. ರಸ್ತೆಯೇ ಇಲ್ಲದ ಬೆಟ್ಟಗುಡ್ಡಗಳನ್ನು ಸೀಳಿಕೊಂಡು ಸಾಗುವ ಈ ಸ್ಪರ್ಧೆ ಸ್ಪರ್ದಿಗಳಿಗೆ ರೋಮಾಂಚನಕಾರಿ ಅನುಭವ ನೀಡಿತು. ಸುಮಾರು 30 ಕಿಲೋ ಮೀಟರ್ ಉದ್ದದ ಟ್ರ್ಯಾಕ್ ಸಾಹಸ ಪ್ರಿಯರಿಗೆ ಥ್ರಿಲ್ಲಿಂಗ್ ಅನುಭವ ನೀಡಿತು. ಕಾಫಿತೋಟದ ಮಧ್ಯೆ ಕೆಸರುಮಯ ರಸ್ತೆಗಳಲ್ಲಿ ಸದ್ದು ಮಾಡುತ್ತಾ ಜೀಪುಗಳು ಹೋಗುತ್ತಿದ್ದರೆ, ರಸ್ತೆಯನ್ನೇ ಸೀಳಿಹೊರಟ ರಾಕೆಟ್ ಗಳಂತೆ ಭಾಸವಾಗುತ್ತಿತ್ತು. ಈ ಬಾರಿ rallyಯಲ್ಲಿ ದೈತ್ಯ ಜೀಪ್ ವೊಂದು ಎಲ್ಲರ ಗಮನ ಸೆಳೆಯಿತು.

 ಹಲವು ಜಿಲ್ಲೆಗಳಿಂದ ಬಂದಿದ್ದ ಸ್ಪರ್ಧಿಗಳು

ಹಲವು ಜಿಲ್ಲೆಗಳಿಂದ ಬಂದಿದ್ದ ಸ್ಪರ್ಧಿಗಳು

ಜೀಪ್ ಹಾಗು ಕಾರ್ rallyಗಳು ಚಿಕ್ಕಮಗಳೂರಿಗೆ ಹೊಸತಲ್ಲ. ಆದರೆ ಮುಂಗಾರು ಮಳೆ ಮುಗಿದು ಭೂಮಿಯೆಲ್ಲಾ ಹಸಿಯಾಗಿರುವ ಈ ಸಂದರ್ಭದಲ್ಲಿ ನಡೆಯುವ ಜೀಪ್ rally ದೊಡ್ಡ ಸಾಹಸಮಯ ಯಾತ್ರೆ. ಒಮ್ಮೆ ಕೆಸರು, ಮತ್ತೊಮ್ಮೆ ಕಡಿದಾದ ರಸ್ತೆ, ಮಗದೊಮ್ಮೆ ಇಳಿಜಾರು ಎಲ್ಲವನ್ನೂ ಕೊಂಚವೂ ಎದೆಗುಂದದೆ ಗುರಿಮುಟ್ಟಿದರೆ ಆತನೇ ಹೀರೋ. ಈ ಆಫ್ ರೋಡ್ ರಾಲಿಯಲ್ಲಿ ಚಿಕ್ಕಮಗಳೂರು ಸೇರಿದಂತೆ ಸಕಲೇಶಪುರ, ಕೊಡಗು, ಬೆಂಗಳೂರು, ಕೇರಳದಿಂದಲೂ ಸ್ಪರ್ಧಿಗಳು ಆಗಮಿಸಿದ್ದರು. ರಾಜ್ಯದ ವಿವಿಧೆಡೆಗಳಿಂದ 50ಕ್ಕೂ ಹೆಚ್ಚು ಸ್ಪರ್ಧಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಚಾಕಚಕ್ಯತೆ ಪ್ರದರ್ಶನ ಮಾಡಿದರು.

 ನೋಡುಗರಿಗೆ ರೋಮಾಂಚಕಾರಿ ಅನುಭವ

ನೋಡುಗರಿಗೆ ರೋಮಾಂಚಕಾರಿ ಅನುಭವ

ಸವಾಲಿನ ದಾರಿಯನ್ನು ಬುದ್ಧಿವಂತಿಕೆಯಿಂದ ಎದುರಿಸಿ ಮುನ್ನುಗ್ಗುವ ಸ್ಪರ್ಧಿಗಳು ಗೆಲುವಿಗಾಗಿ ಕಸರತ್ತು ನಡೆಸಿದರು. ವೃತ್ತಿಪರ ಸ್ಪರ್ಧಿಗಳ ಜೊತೆಗೆ ಹವ್ಯಾಸಿ ಸವಾರರೂತಮ್ಮ ಸಾಮರ್ಥ್ಯ ಪಣಕ್ಕಿಟ್ಟು ಹೋರಾಟ ನಡೆಸಿದರು. ಟ್ರ್ಯಾಕ್ ನಲ್ಲಿ ಸ್ಪರ್ಧಿಗಳು ಗೆಲುವಿಗಾಗಿ ಸೆಣಸಾಡುವುದು ನೆರೆದಿದ್ದವರಿಗೆ ರೋಮಾಂಚನಕಾರಿ ಅನುಭವ ನೀಡುತ್ತದೆ.

Recommended Video

    Sandalwood ಡ್ರಗ್ ಮಾಫಿಯಾ ಮತ್ತು ತಾರೆಯರ ಬಗ್ಗೆ ಮಾತನಾಡಿದ ಮಾಜಿ DGP | Oneindia Kannada
     rally ಪ್ರಿಯರಿಗೆ ಹಬ್ಬವಿದ್ದಂತೆ

    rally ಪ್ರಿಯರಿಗೆ ಹಬ್ಬವಿದ್ದಂತೆ

    ಕ್ರೀಡೆಗೆ ಹೆಸರಾದ ಕಾಫಿನಾಡಲ್ಲಿ ಈ rally ಮತ್ತಷ್ಟು ಹುರುಪು ತುಂಬಿತ್ತು. ಸವಾಲಿನ ಸ್ಪರ್ಧೆಯನ್ನು ಚಾಣಾಕ್ಷತೆಯಿಂದ ಎದುರಿಸಿ ಸಾಗುವ ಈ ಸ್ಪರ್ಧೆ ಎದೆನಡುಗಿಸುವ ಅನುಭವ ನೀಡುತ್ತದೆ., ಸ್ಪರ್ದಿಗಳು ಗೆಲುವಿಗಾಗಿ ಕಸರತ್ತು ನಡೆಸಿದರೆ, ನೆರೆದಿದ್ದವರಿಗೆ ಮೈನವಿರೇಳೀಸುವ ಅನುಭವ ನೀಡಿತು.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+