ಬೆಟ್ಟದ ತುಂಬೆಲ್ಲಾ ನೀಲಕುರಿಂಜಿಯ ಮೋಹಕ ಜಾಲ

ಚಿಕ್ಕಮಗಳೂರು, ಅಕ್ಟೋಬರ್ 15: ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲಿಕುರಿಂಜಿ ಹೂ ಈ ಬಾರಿ ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ, ಮುಳ್ಳಯ್ಯನ ಗಿರಿ ಭಾಗದಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಸಿದ್ಧವಾಗಿದೆ.

Recommended Video

      Lok Sabha Elections : ಹೂವಿನಲ್ಲಿ ಮುಳುಗಿಸಿದ ಹಾಗೆ ಮತಗಳಲ್ಲಿ ನಮ್ಮನ್ನು ಮುಳುಗಿಸಿ ಎಂದ ದಾಸ | Oneindia Kannada

      12 ವರ್ಷಗಳಿಗೊಮ್ಮೆ ಗೋಚರಿಸುವ ಈ ಪುಷ್ಪ ಪಶ್ಚಿಮಘಟ್ಟ, ನೀಲಗಿರಿಬೆಟ್ಟ ಶ್ರೇಣಿಗಳಲ್ಲಿ ಕಂಡುಬರುತ್ತದೆ. ಅದರಲ್ಲೂ ಪ್ರವಾಸಿಗರ ಸ್ವರ್ಗ ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ, ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ ಭಾಗದಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. 2006ರಲ್ಲಿ ಈ‌ ನೀಲಿಕುರಂಜಿ ಹೂ ಇಡೀ ಬೆಟ್ಟಗಳನ್ನು ಆವರಿಸಿ ಸುಂದರ ಲೋಕವನ್ನು ಸೃಷ್ಟಿ ಮಾಡಿತ್ತು. ಸೆಪ್ಟೆಂಬರ್ ನಿಂದ ನವೆಂಬರ್ ಈ ಹೂ ಅರಳುವ ಕಾಲ. ಈ ಬಾರಿ 1800 ಮೀಟರ್ ಎತ್ತರದಲ್ಲಿರುವ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಬಳಿ ಅಲ್ಲಲ್ಲಿ ಕಾಣಿಸಿಕೊಂಡಿದೆ. ಇನ್ನೂ ಕಾಲಾವಧಿ ಇದ್ದು ಮುಂದಿನ ತಿಂಗಳಲ್ಲಿ ಈ ಹೂವಿನ ಸೊಬಗು ಬೆಟ್ಟಗಳಿಗೆ ಆವರಿಸಿದರೆ ಸ್ವರ್ಗವೇ ಧರೆಗಿಳಿದುಬಂದಂತೆ ಕಾಣಲಿದೆ.

      20 ರಿಂದ 30 ದಿನಗಳ ಕಾಲ ತನ್ನ ಸೌಂದರ್ಯ ಚೆಲ್ಲುತ್ತಾ ಚಂದ್ರದ್ರೋಣ ಪರ್ವತ ಶ್ರೇಣಿಯ ಮತ್ತೊಂದು ಸೊಬಗಿಗೆ ಸಾಕ್ಷಿಯಾಗುತ್ತದೆ. ಇನ್ನು ಹಚ್ಚಹಸಿರಿನಿಂದ ಕಂಗೊಳಿಸುವ ಕಾಫಿನಾಡಿನ ಗಿರಿ-ಪರ್ವತ ಶ್ರೇಣಿಗಳಲ್ಲೆಲ್ಲಾ ಈ ಹೂವು ಅರಳಿದರೆ ಇಡೀ ಬೆಟ್ಟ ನೀಲಿಮಯವಾಗಿ ಕಂಗೊಳಿಸುತ್ತದೆ.

      Neelakuranji Is Blooming In Bababudangiri

      ಈ ಹೂವಿಗೆ ಧಾರ್ಮಿಕವಾಗಿಯೂ ಐತಿಹ್ಯವೂ ಇದೆ. ಸುಬ್ರಹ್ಮಣ್ಯ ವೆಳ್ಳಿನ ಮದುವೆಯಾಗುವಾಗ ಈ ಹೂವಿನ ಮಾಲೆ ಹಾಕಿದ್ದರಿಂದ ಈ ಹೂವನ್ನು ಪ್ರೇಮದ ಸಂಕೇತವಾಗಿ, ಪ್ರೇಮದ ಹೂ ಎಂತಲೂ ಕರೆಯುತ್ತಾರೆ ಕೇರಳ, ತಮಿಳುನಾಡಿನ ಭಾಗದ ಜನ. ಆದ್ದರಿಂದ ಈ ಹೂವು ಅರಳಿದ ಕೂಡಲೇ ಮೊದಲು ಸುಬ್ರಹ್ಮಣ್ಯನಿಗೆ ಅರ್ಪಿಸುತ್ತಾರೆ. ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಈ ಹೂ ಅರಳುತ್ತದೆ. ಇದರಲ್ಲೂ ಹಲವು ವಿಧಗಳಿದ್ದು, 5, 7, 12, 14 ವರ್ಷಗಳಿಗೆ ಅರಳುವ ಪ್ರಭೇದದ ಹೂವುಗಳಿವೆ.

      ಇದೀಗ ಇಡೀ ಬೆಟ್ಟವನ್ನು ಆವರಿಸಿ ಮತ್ತೊಂದು ಸ್ವರ್ಗ ತೋರಲು ಈ ನೀಲಿಕುರಂಜಿ ಹೂಗಳು ಅಣಿಯಾಗುತ್ತಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+